ಜೈನ ಧರ್ಮದ ಅವಹೇಳನಕಾರಿ ಹೇಳಿಕೆ; ಕ್ಷಮೆ ಕೇಳಿದ ಹಂಸಲೇಖ

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ಜೈನ ಸಮುದಾಯದ ಬಗ್ಗೆ ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್​ಶಿಟ್’ ಎಂದು ಹೇಳಿದ್ದರು. ಇದಕ್ಕೆ ಜೈನ ಧರ್ಮದವರು ವಿರೋಧ ವ್ಯಕ್ತಪಡಿಸಿದ್ದರು.;

Update: 2024-07-20 11:14 GMT
ಸಂಗೀತ ನಿರ್ದೇಶಕ ಹಂಸಲೇಖ
Click the Play button to listen to article

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ  ಜೈನ ಸಮುದಾಯದ ಬಗ್ಗೆ ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್​ಶಿಟ್’ ಎಂದು ಹೇಳಿದ್ದರು. ಇದಕ್ಕೆ ಜೈನ ಧರ್ಮದವರು ವಿರೋಧ ವ್ಯಕ್ತಪಡಿಸಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಹಂಸಲೇಖ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಂತೆಯೇ ಹಂಸಲೇಖ ಅವರು ಕ್ಷಮೆ ಕೇಳಿದ್ದಾರೆ. 

ಈ ವಿವಾದ ಆದ ಬೆನ್ನಲ್ಲೇ ವಿಡಿಯೊ ಮೂಲಕ ಕ್ಷಮೆ ಕೂಡ ಕೇಳಿದರು. ವಿಡಿಯೊದಲ್ಲಿ ‘’ಮಹನೀಯರೆ ದಯಮಾಡಿ ಕ್ಷಮಿಸಿ.. ನಾನು ಯಾವತ್ತೂ ಅದರ ವಿರುದ್ಧ ಮಾತನಾಡಬೇಕು ಎಂಬ ಯೋಚನೆ ಮಾಡಿದವನಲ್ಲ. ಆ ಪದವನ್ನ ಬಳಸಬೇಕು ಅಂದುಕೊಳ್ಳಲಿಲ್ಲ. ಅಲ್ಲಿ ತುಂಬಾ ಒತ್ತಡಗಳಿಂದ, ನನ್ನನ್ನ ಎಳೆದಾಡುತ್ತಿದ್ದರು. ನಾನೇನೋ ಗದರಲು ಹೋಗಿ ಆಮೇಲೆ ಈ ಕಡೆ ಬಂದೆ. ಆ ಮಾತು ಬಂದಿದ್ದು ತಪ್ಪಾಯ್ತು. ಇನ್ಯಾವತ್ತೂ ಆ ರೀತಿಯ ತಪ್ಪುಗಳನ್ನ ಮಾಡೋದಿಲ್ಲ. ನಾನು ಪಂಪನ ದಾಸಾನುದಾಸ. ಕನ್ನಡವನ್ನ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿರೋನು ನಾನು. ದಯಮಾಡಿ ಇದನ್ನ ಬೆಳೆಸಬೇಡಿ. ಪತ್ರದ ಮುಖಾಂತರವೂ ಕ್ಷಮೆ ಕೇಳಿದ್ದೇನೆ. ದಯವಿಟ್ಟು ಈ ವಿಷಯವನ್ನ ಇಲ್ಲಿಗೆ ಮುಕ್ತಾಯ ಮಾಡಿ’’ ಎಂದು ವಿಡಿಯೋದಲ್ಲಿ ಹಂಸಲೇಖ ಕೇಳಿಕೊಂಡಿದ್ದಾರೆ.

ವಿಡಿಯೋ ಮೂಲಕ ಕ್ಷಮೆಯಾಚನೆ

"ಪ್ರಿಯ ಮಾಧ್ಯಮಗಳೇ, ದಯಮಾಡಿ. ನಾನು ದುಡುಕಿ ಮಾತಾಡಿದ ಆ "BULLSHIT" ಪದವನ್ನು DELETE ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ" "ಆ 'ಮಾತು' ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ-ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ. channel ನವರು Individual byte ಗಳಿಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರಬಂದೆ. ನನ್ನ ಸಹಾಯಕ, ನನ್ನನ್ನ ಹೊಗಳಿದ - 'ಸಿಟ್ಟು ತಡೆಯಲಾಗಲಿಲ್ಲ ಆದರೂ ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್" - ಎಂದ. ಆಗ ನಾನು ಆತನಿಗೆ "ಸಿಟ್ಟು, ಹೋಗಿ ಬರೋ ಬುಲೆಟ್ಟು " ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು ಸಿಟ್ಟು ಒಂದು ಬುಲ್ಶಿಟ್ಟು" ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೆ ನಡೆದಿದ್ದು. ದಯವಿಟ್ಟು ಕ್ಷಮಿಸಿ" ಎಂದು ಬರೆದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ "ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್‌ಶಿಟ್" ಎಂದಿದ್ದರು. 

ಪ್ಯಾನ್‌ ಇಂಡಿಯಾ ಸಿನಿಮಾದ ಬಗ್ಗೆಯೂ ವಿವಾದ

ಈ ಹಿಂದೆಯೂ ಹಂಸಲೇಖ  ಅವರು ಪ್ಯಾನ್-ಇಂಡಿಯಾ ಚಿತ್ರರಂಗಕ್ಕೆ ಕಾಲಿಡುತ್ತಿರುವ ಕನ್ನಡ ತಾರೆಯರನ್ನು ಗುರಿಯಾಗಿಟ್ಟುಕೊಂಡು ತಮ್ಮ ತೀಕ್ಷ್ಣವಾದ ಕಾಮೆಂಟ್‌ಗಳ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ನೇರ ಮಾತುಗಳಿಗೆ  ಹೆಸರುವಾಸಿಯಾದ ಹಂಸಲೇಖ ಪ್ಯಾನ್-ಇಂಡಿಯಾ ಚಲನಚಿತ್ರಗಳೊಂದಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿರುವ ಯಶ್, ಸುದೀಪ್ ಮತ್ತು ರಿಷಬ್ ಶೆಟ್ಟಿಯಂತಹ ನಟರನ್ನು ಹೆಸರಿಸದೆ ನಟರನ್ನು ಟೀಕಿಸಿದರು.

 ಕನ್ನಡದ ಸೂಪರ್‌ಸ್ಟಾರ್‌ಗಳು ಪ್ಯಾನ್-ಇಂಡಿಯಾ ಯೋಜನೆಗಳನ್ನು ಅನುಸರಿಸುವ ಮೂಲಕ ತಮ್ಮ ಕನ್ನಡದ ಬೇರುಗಳಿಂದ ಹೆಚ್ಚು ಸಂಪರ್ಕ ಕಡಿತಗೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. "ಕನ್ನಡದೊಂದಿಗೆ ಇಲ್ಲಿ ಮೂಲ ಸಂಪರ್ಕವಿತ್ತು. ಇದು ಪ್ಯಾನ್ ಇಂಡಿಯಾದಿಂದ ಕಡಿತವಾಗಿದೆ" ಎಂದು ಅವರು ವಿಮರ್ಶಾತ್ಮಕವಾಗಿ ಟೀಕಿಸಿದ್ದರು. ಪ್ಯಾನ್-ಇಂಡಿಯಾ ಚಲನಚಿತ್ರಗಳ ಮೂಲಕ ಕನ್ನಡ ಕಲಾವಿದರು ರಾಷ್ಟ್ರವ್ಯಾಪಿ ಸ್ಟಾರ್‌ಡಮ್ ಗಳಿಸಬಹುದು ಎಂಬ ಕಲ್ಪನೆಯ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದರು, ಇದನ್ನು ಭ್ರಮೆ ಎಂದು ಕರೆದರು.

Tags:    

Similar News