ಖಾಲಿ ಚೊಂಬು ಹಿಡಿದು ಮೋದಿ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು
ಕರ್ನಾಟಕದಲ್ಲಿ ಚೊಂಬಿನ ರಾಜಕೀಯ ಜೋರಾಗಿದೆ. ಕಾಂಗ್ರೆಸ್ ಚೊಂಬಿನ ಚಿತ್ರ ಹಾಕಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಗಳನ್ನು ಲೇವಡಿ ಮಾಡಿ ಜಾಹೀರಾತು ನೀಡಿದ್ದನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿತ್ತು. ಇದೀಗ, ಕಾಂಗ್ರೆಸ್ ಖಾಲಿ ಚೊಂಬನ್ನು ಹಿಡಿದು ಪ್ರತಿಭಟನೆ ನಡೆಸಿದೆ
ಕರ್ನಾಟಕದಲ್ಲಿ ಚೊಂಬಿನ ರಾಜಕೀಯ ಹಾಗೂ ವಾಕ್ಸಮರ ಜೋರಾಗಿದೆ. ಖಾಲಿ ಚೊಂಬಿನ ಚಿತ್ರದೊಂದಿಗೆ ಕೆಪಿಸಿಸಿಯಿಂದ ಶುಕ್ರವಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಇದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಶನಿವಾರ ನಗರದ ಮೇಕ್ರಿ ಸರ್ಕಲ್ ಬಳಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದು, ʻ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆʼ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡರು ಚೊಂಬು ಪ್ರದರ್ಶಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ ಖಾಲಿ ಚೊಂಚು ಎಂದು ದೂರಿದರು. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಶಾಸಕ ರಿಜ್ವಾನ್ ಅರ್ಷಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಖಾಲಿ ಚೊಂಬು!
— Karnataka Congress (@INCKarnataka) April 20, 2024
▶ ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು
▶ 15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು
▶ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು
▶ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ… pic.twitter.com/H806hAHRyI
ಕಾಂಗ್ರೆಸ್‌ನಿಂದ ಸರಣಿ ಟ್ವೀಟ್
ಬಿಜೆಪಿ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಬಿಜೆಪಿಯಿಂದ, ಬಿಜೆಪಿ ಸಂಸದರಿಂದ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಚೊಂಬು ಎಂದು ದೂರಿದೆ.
ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಹಲವಾರು ಬಾರಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು, ಆದರೆ ಕರ್ನಾಟಕ ವಿರೋಧಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನೀಡಿದ್ದು ಖಾಲಿ ಚೊಂಬು ಮಾತ್ರ..
— Karnataka Congress (@INCKarnataka) April 20, 2024
ಕನ್ನಡಿಗರಿಗೆ ಖಾಲಿ ಚೊಂಬು ನೀಡಿದ ಬಿಜೆಪಿ ಸರ್ಕಾರಕ್ಕೆ ಮರಳಿ ಅದೇ ಖಾಲಿ ಚೊಂಬನ್ನೇ ನೀಡುವುದು ನ್ಯಾಯಯುತ ಪರಿಹಾರ!#BJPChombuSarkara pic.twitter.com/jLK0tThIec
ಕನ್ನಡದಲ್ಲೇ ಟ್ವೀಟ್ ಮಾಡಿರುವ ಸುರ್ಜೀವಾಲಾ
ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಹ ಕನ್ನಡದಲ್ಲಿ ಟ್ವಿಟ್ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 6.5 ಕೋಟಿ ಕನ್ನಡಿಗರು ಚೊಂಬನ್ನು ನೀಡಿ ಮನೆಗೆ ಕಳುಹಿಸಲಿದ್ದಾರೆ ಎಂದಿದ್ದಾರೆ.
ಮೋದಿ ಮತ್ತು ಬಿಜೆಪಿಯವರು ಕರುನಾಡಿನ ಜನತೆಗೆ #BJPSarakaraChombu ಕೊಟ್ಟಿದ್ದಾರೆ.
— Randeep Singh Surjewala (@rssurjewala) April 20, 2024
👉ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು
👉15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು
👉ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು
👉ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು… pic.twitter.com/eKHL7szBAH
ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಚೊಂಬನ್ನು ಹಿಡಿದು ಬೆಂಗಳೂರಿನ ಗಾಂಧಿನಗರ, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಎಸಗಿರುವ ನಿರಂತರ ಅನ್ಯಾಯ, ಮೋಸವನ್ನು ಖಂಡಿಸಿ ಗಾಂಧಿನಗರ, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು.#BJPChombuSarkara pic.twitter.com/dc6HyVj73B
— Karnataka Congress (@INCKarnataka) April 20, 2024