ಉತ್ತರಾಖಂಡದಲ್ಲಿ ಮೇಘಸ್ಫೋಟ: ಭೀಕರ ಪ್ರವಾಹಕ್ಕೆ 4 ಬಲಿ, ಹಲವರು ನಾಪತ್ತೆ

ಗಂಗೋತ್ರಿಗೆ ಹೋಗುವ ಮಾರ್ಗದಲ್ಲಿನ ಪ್ರಮುಖ ತಂಗುದಾಣವಾಗಿರುವ ಧಾರಾಲಿಯಲ್ಲಿ ಹಲವಾರು ಹೋಟೆಲ್​​ಗಳಿ, ರೆಸ್ಟೋರೆಂಟ್​ಗಳು ಮತ್ತು ಹೋಂಸ್ಟೇಗಳಿವೆ.;

Update: 2025-08-05 10:41 GMT

ಉತ್ತರಾಖಂಡದ ಗಂಗೋತ್ರಿ ಮಾರ್ಗದಲ್ಲಿರುವ ಧಾರಾಲಿ ಎಂಬ ಗ್ರಾಮದಲ್ಲಿ ಇಂದು, (ಆಗಸ್ಟ್ 5ರಂದು) ಸಂಭವಿಸಿದ ಭೀಕರ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿದ್ದು, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಗಂಗೋತ್ರಿಗೆ ಹೋಗುವ ಮಾರ್ಗದಲ್ಲಿನ ಪ್ರಮುಖ ತಂಗುದಾಣವಾಗಿರುವ ಧಾರಾಲಿಯಲ್ಲಿ ಹಲವಾರು ಹೋಟೆಲ್​​ಗಳಿ, ರೆಸ್ಟೋರೆಂಟ್​ಗಳು ಮತ್ತು ಹೋಂಸ್ಟೇಗಳಿವೆ. ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟದಿಂದ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭಿಕ ವರದಿಗಳ ಪ್ರಕಾರ, ಕನಿಷ್ಠ ನಾಲ್ಕು ಜನರು ಕೊಚ್ಚಿಹೋಗಿದ್ದಾರೆ. ಸುಮಾರು 10-12 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಗ್ರಾಮಸ್ಥರೊಬ್ಬರಾದ ರಾಜೇಶ್ ಪನ್ವರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲದೆ, ಸುಮಾರು 20-25 ಹೋಟೆಲ್​ಗಳು ಮತ್ತು ಹೋಂಸ್ಟೇಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ.

ರಕ್ಷಣಾ ಕಾರ್ಯಕ್ಕಾಗಿ ಹತ್ತಿರದ ಹರ್ಸಿಲ್​​ನಿಂದ ಸೇನಾ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಈ ಘಟನೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Tags:    

Similar News