ಜಾತಿ ಗಣತಿ ಕುರಿತು ಚರ್ಚಿಸಲು ನಿಗದಿಯಾಗಿದ್ದ ಮೇ 2ರ ಸಂಪುಟ ಸಭೆ ಮುಂದೂಡಿಕೆ

ಜಾತಿ ಗಣತಿಯನ್ನು ಏಪ್ರಿಲ್​ 3ರಂದು ನಡೆದ ಸಭೆಯಲ್ಲಿ ಸ್ವೀಕರಿಸಲಾಗಿತ್ತು. ಏಪ್ರಿಲ್‌ 17ರಂದು ಕರೆದಿದ್ದ ಸಭೆಯಲ್ಲಿ ದತ್ತಾಂಶಗಳ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ಈ ವೇಳೆ ಕ್ಯಾಬಿನೆಟ್ ಸಚಿವರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು ಎನ್ನಲಾಗಿದೆ.;

Update: 2025-04-30 04:55 GMT

ಜಾತಿ ಗಣತಿ ವರದಿ ಕುರಿತ ಚರ್ಚೆಗೆ ಮೀಸಲಾಗಿದ್ದ ಮೇ 2 ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಈ ಮಹತ್ವದ ಸಭೆಯನ್ನು ಮೇ 9ರಂದು ನಡೆಸಲಾಗುವುದು ಎಂದು ಅವರು ಅಧಿಕೃತವಾಗಿ ಹೇಳಿದ್ದಾರೆ.

ಜಾತಿ ಗಣತಿಯನ್ನು ಏಪ್ರಿಲ್​ 3ರಂದು ನಡೆದ ಸಭೆಯಲ್ಲಿ ಸ್ವೀಕರಿಸಲಾಗಿತ್ತು. ಏಪ್ರಿಲ್‌ 17ರಂದು ಕರೆದಿದ್ದ ಸಭೆಯಲ್ಲಿ ದತ್ತಾಂಶಗಳ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ಈ ವೇಳೆ ಕ್ಯಾಬಿನೆಟ್ ಸಚಿವರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು ಎನ್ನಲಾಗಿದೆ. ಅಂದು ಪತ್ರಿಕಾಗೋಷ್ಠಿ ಕರೆದಿದ್ದ ಕಾನೂನು ಸಚಿವರು, ‘ಹೆಚ್ಚಿನ ಚರ್ಚೆಗಾಗಿ, ತಾಂತ್ರಿಕ ಮಾಹಿತಿಯೂ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿರುವುದರಿಂದ ಅದನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಚರ್ಚೆ ಅಪೂರ್ಣಗೊಂಡಿದೆ. ಮೇ 2ರಂದು ಸಂಪುಟ ಸಭೆ ನಡೆಸಲಾಗುವುದು’ ಎಂದು ತಿಳಿಸಿದ್ದರು.

ವರದಿಯ ಕುರಿತಂತೆ ಎಲ್ಲ ಸಚಿವರೂ ತಮ್ಮ ಮುಕ್ತ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಮುಂದಿನ ಸಂಪುಟ ಸಭೆಯ ವೇಳೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿ ಸೂಚಿಸಿದ್ದರು.

ಮೇ 2ರ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ನೋಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುವುದಾಗಿ ವೀರಶೈವ–ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮುಖಂಡರು ಹೇಳಿದ್ದರು.

ಜಾತಿಗಣತಿ ವರದಿಯ ಕುರಿತು ಚರ್ಚೆ ನಡೆಸಲು ಸಿದ್ಧತೆ ನಡೆಸಲು ಇನ್ನೂ ಕಾಲಾವಕಾಶ ಬೇಕೆನ್ನುವ ಉದ್ದೇಶದಿಂದ ಮತ್ತಷ್ಟು ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Tags:    

Similar News