ಬ್ರ್ಯಾಂಡ್ ಬೆಂಗಳೂರು v/s ಬಾಂಬ್ ಬೆಂಗಳೂರು | ಕಾಂಗ್ರೆಸ್– ಬಿಜೆಪಿ ಟ್ವೀಟ್ ವಾರ್!
"ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ ಎನ್ಐಎ (NIA) ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ. ಈ ಕೃತ್ಯವನ್ನು ಬಿಜೆಪಿಯೇ ಮಾಡಿಸಿದೆಯೇ" ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.;
"ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ ಎನ್ಐಎ (NIA) ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ" ಎಂದು ಬಿಜೆಪಿಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಎನ್‌ಐಎ ತನಿಖಾ ತಂಡ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಿಜೆಪಿ ಮುಖಂಡನನ್ನು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿಯ ವಿರುದ್ಧ ಸರಣಿ ಟ್ವೀಟ್ ಮಾಡಿ ಕಾಲೆಳೆದಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆದಾಗಿನಿಂದ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಆರೋಪ – ಪ್ರತ್ಯಾರೋಪ ಮುಂದುವರಿದಿವೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಘಟನೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ಬಿಜೆಪಿ, “ಕಾಂಗ್ರೆಸ್ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿತ್ತು. ಇದೀಗ ಬಾಂಬ್ ಬೆಂಗಳೂರು ಮಾಡುತ್ತಿದೆ" ಎಂದು ಆರೋಪಿಸಿತ್ತು. ಇದೀಗ ಅದೇ ಮಾದರಿಯ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದೆ.
ತೀರ್ಥಹಳ್ಳಿ ಬಿಜೆಪಿ ಮುಂಖಡರೊಬ್ಬರನ್ನು ಎನ್ಐಎ ವಿಚಾರಣೆಗೊಳಪಡಿಸಿದ ವಿಷಯವನ್ನು ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷವು “ಭ್ರಷ್ಟ ಜನತಾ ಪಾರ್ಟಿ ಎಂದು ಹೆಸರಾಗಿದ್ದ ಬಿಜೆಪಿ ಈಗ ಬಾಂಬ್ ಜನತಾ ಪಾರ್ಟಿ ಎಂಬ ಹೆಸರು ಪಡೆಯಲು ಮುಂದಾಗಿದೆಯೇ?" ಎಂದು ಪ್ರಶ್ನಿಸಿದೆ.
"ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ ಎನ್ಐಎ (NIA) ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ತಾಲ್ಲೂಕಿನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ. ನಾವು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದರೆ ಬಿಜೆಪಿ ʼಬಾಂಬ್ ಬೆಂಗಳೂರುʼ ಮಾಡಲು ಹೊರಟಿದೆಯೇ?, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ತಮ್ಮ ಕಾರ್ಯಕರ್ತರ ಮೂಲಕ ಷಡ್ಯಂತ್ರ ರೂಪಿಸಿದೆಯೇ? ಎಂದು ಪ್ರಶ್ನೆ ಮಾಡಿದೆ. ಅಲ್ಲದೇ ಎನ್ಐಎ ತನಿಖಾ ಸಂಸ್ಥೆ ಜಗನ್ನಾಥ ಭವನವನ್ನೂ ಒಮ್ಮೆ ಶೋಧಿಸಿದರೆ ಸೂಕ್ತವಲ್ಲವೇ (BJP Karnataka) ಬಿಜೆಪಿ ಕರ್ನಾಟಕ?" ಎಂದು ಕೇಳಿದೆ.