ಬಿಜೆಪಿ ಹಗರಣ ಆರೋಪ: ಸಿದ್ದರಾಮಯ್ಯ ಇಷ್ಟು ದಿನ ಏಕೆ ಸುಮ್ಮನಿದ್ದರು? ಹೆಚ್‌ಡಿ ಕುಮಾರಸ್ವಾಮಿ

Update: 2024-07-20 08:52 GMT

ಬಿಜೆಪಿ ಆಡಳಿತದಲ್ಲಿ ಹಗರಣಗಳು ನಡೆದಿವೆ ಎಂದು ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಏಕೆ ಸುಮ್ಮನಿದ್ದರು? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻ2010, 2011, 2012ರಲ್ಲಿ ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ. ಇದಾದ ಮೇಲೆ 2013ರಲ್ಲಿ ಅವರದ್ದೆ ಸರ್ಕಾರ ಇದ್ದಾಗ ಏಕೆ ಕ್ರಮಕೈಗೊಳ್ಳಲಿಲ್ಲ? ಅಲ್ಲದೇ, ಈಗ 1 ವರ್ಷದಿಂದ ಏಕೆ ಕ್ರಮ ಕೈಗೊಂಡಿಲ್ಲ? ಈಗ ತನಿಖೆ ಮಾಡುವುದಾಗಿ ಗುಮ್ಮ ಬಿಟ್ಟಿದ್ದಾರೆ ಅಷ್ಟೇ..ʼ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರ ವಿವಿಧ ಹಗರಣಗಳಲ್ಲಿ ಭಾಗಿಯಾಗಿಯಾಗಿದೆ. ಸಾರ್ವಜನಿಕವಾಗಿ ಮುಖ ತೋರಿಸಲು ಆಗದ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿದ್ದಾರೆ ಎಂದರು.

ತಮ್ಮ ಹೆಸರು ಹೇಳುವಂತೆ ಇ.ಡಿ. ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ʻʻಒತ್ತಡ ಹೇರಿದ್ದಾರೆ ಎಂದು ಇವರಿಗೆ ಯಾರು ಹೇಳಿದರು? ಪ್ರಕರಣದಲ್ಲಿ ಇವರು ಭಾಗಿಯಾಗಿಲ್ಲವೆಂದರೆ ಏಕೆ ಗಾಬರಿಯಾಗಿ ಹೇಳಿಕೆ ಕೊಡುತ್ತಿದ್ದಾರೆ, ಇವರೇ ಏಕೆ ಊಹೆ ಮಾಡಿಕೊಳ್ಳುತ್ತಿದ್ದಾರೆ?, ನಾಲ್ಕು ಜನ ಸಚಿವರಿಂದ ಏಕೆ ಹೇಳಿಕೆ ಕೊಡಿಸಿದ್ದಾರೆ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಅಧಿವೇಶನದಲ್ಲಿಯೇ ಸಿ.ಎಂ ಒಪ್ಪಿಕೊಂಡಿದ್ದಾರೆ. ಅಧಿಕಾರಗಳಿಂದ ತಪ್ಪಾಗಿದ್ದರೂ ಸರ್ಕಾರವೇ ಹೊಣೆ. ಸಚಿವರು ಮೌಖಿಕ ಆದೇಶ ನೀಡಿದ್ದಾರೆ ಎಂದು ಮೃತ ಅಧಿಕಾರಿ ಡೆತ್‌ ನೋಟ್ ನಲ್ಲಿ ಬರೆದಿದ್ದಾನೆ ಎಂದರೆ ಅದರ ಅರ್ಥ ಏನು? ಸಿ.ಎಂ. ಉಡಾಫೆಯಿಂದ ಉತ್ತರ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

Tags:    

Similar News