ಕಸ-ಗುಂಡಿ ಸಮರಕ್ಕೆ ತಾತ್ಕಾಲಿಕ ವಿರಾಮ: ಡಿ.ಕೆ. ಶಿವಕುಮಾರ್‌ಗೆ ಕಿರಣ್ ಮಜುಮ್ದಾರ್‌ ಶಾ ಮೆಚ್ಚುಗೆ

ನಗರವನ್ನು ಕಸದಿಂದ ಮತ್ತು ಗುಂಡಿಗಳ ಭಾರದಿಂದ ರಕ್ಷಿಸಿದ್ದಕ್ಕಾಗಿ ಶಿವಕುಮಾರ್ ಅವರನ್ನು ಹೊಗಳಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Update: 2025-11-15 04:20 GMT

ಡಿಕೆ ಶಿವಕುಮಾರ್‌

Click the Play button to listen to article

ಬೆಂಗಳೂರಿನ ಕಳಪೆ ರಸ್ತೆಗಳು ಮತ್ತು ಕಸ ವಿಲೇವಾರಿ ಸಮಸ್ಯೆಯ ಕುರಿತು ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಕೈಗಾರಿಕೋದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್‌ ಶಾ ಅವರು ನಗರದಾದ್ಯಂತ ಕಂಡುಬಂದ 'ಸ್ವಚ್ಛವಾದ ಪಾದಚಾರಿ ಮಾರ್ಗಗಳು ಮತ್ತು ಡಾಂಬರು ಹಾಕಿದ ರಸ್ತೆಗಳ' ಸುಧಾರಣೆಗಾಗಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನು ಶ್ಲಾಘಿಸಿದ್ದಾರೆ.

ನಗರವನ್ನು ಕಸದಿಂದ ಮತ್ತು ಗುಂಡಿಗಳ ಭಾರದಿಂದ ರಕ್ಷಿಸಿದ್ದಕ್ಕಾಗಿ ಶಿವಕುಮಾರ್ ಅವರನ್ನು ಹೊಗಳಿರುವ ಅವರು, ತಮ್ಮ ಎಕ್ಸ್  ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

"ನಗರದಾದ್ಯಂತ ಸ್ವಚ್ಛವಾದ ಪಾದಚಾರಿ ಮಾರ್ಗಗಳು ಮತ್ತು ಡಾಂಬರು ಹಾಕಿದ ರಸ್ತೆಗಳಲ್ಲಿ ನಾವು ಅಂತಿಮವಾಗಿ ಗೋಚರ ಬದಲಾವಣೆಯನ್ನು ನೋಡುತ್ತಿದ್ದೇವೆ. @DKShivakumar ನಿಮ್ಮ ನಾಯಕತ್ವವು ಕಸದ ಅವಶೇಷಗಳು ಮತ್ತು ಗುಂಡಿಗಳ ಭಾರದಿಂದ ನಮ್ಮ ನಗರವನ್ನು ಕುಸಿಯದಂತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಯವಿಟ್ಟು ಈ ಪ್ರಮುಖ ಅಭಿವೃದ್ಧಿಯನ್ನು ಮುಂದುವರಿಸಿ. ಕ್ರೆಡಿಟ್ ಕೂಡ @GBAChiefComm ಗೆ ಸಲ್ಲುತ್ತದೆ. ಸಾಮೂಹಿಕ ನಾಗರಿಕ ಜವಾಬ್ದಾರಿ @BPACofficial (sic) ಮೂಲಕ ವಿಶ್ವ ದರ್ಜೆಯ ನಗರವನ್ನು ನಿರ್ಮಿಸೋಣ"ಎಂದು ಕಿರಣ್ ಮಜುಮ್ದಾರ್‌ ಶಾ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಅವರು ರಸ್ತೆ ಗುಂಡಿಗಳು ಮತ್ತು ಕಸದ ನಿರ್ವಹಣೆ ಕುರಿತು ವಿದೇಶಿ ಉದ್ಯಮಿಯೊಬ್ಬರು ಪ್ರಶ್ನಿಸಿದ ಪ್ರಸಂಗವನ್ನು ಉಲ್ಲೇಖಿಸಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು, ಬೆಂಗಳೂರಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಎಲ್ಲೆಲ್ಲೂ ಏಕೆ ಕಸ ಇದೆ? ಸರ್ಕಾರ ಹೂಡಿಕೆಗೆ ಸಹಕರಿಸಲು ಬಯಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಭಾರತವು ಎಲ್ಲ ಅನುಕೂಲಗಳಿದ್ದರೂ ಏಕೆ ಒಟ್ಟಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿದ್ದರು.

ಕಿರಣ್ ಮಜುಮ್ದಾರ್‌ ಶಾ ಅವರ ಈ ಟೀಕೆಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು ಮತ್ತು ಯಶಸ್ಸನ್ನು ನೀಡಿದೆ. ಇದು ನಿರಂತರ ಟೀಕೆಗೆ ಅರ್ಹವಾಗಿಲ್ಲ, ಬದಲಿಗೆ ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾಗಿದೆ. ಸಮಸ್ಯೆಗಳಿವೆ, ಆದರೆ ಅವುಗಳನ್ನು ಆದ್ಯತೆ ಮೇಲೆ ಪರಿಹರಿಸುತ್ತಿದ್ದೇವೆ ಎಂದು ಅವರು ತಿರುಗೇಟು ನೀಡಿದ್ದರು.

Tags:    

Similar News