ಬೆಂಗಳೂರಿಗೆ ʼವಾಯುಮಾಲಿನ್ಯʼದ ಕೊಡುಗೆ ನೀಡಿದ ದೀಪಾವಳಿ ಪಟಾಕಿ ಸಂಭ್ರಮ

ದೀಪಾವಳಿ ಶುರುವಾರ ನಂತರ ಬೆಂಗಳೂರಿನ ವಾಯುವಿನ ಗುಣಮಟ್ಟವು ತೀವ್ರ ಹದಗೆಟ್ಟಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳವಳ ವ್ಯಕ್ತಪಡಿಸಿದೆ.;

Update: 2024-11-02 08:19 GMT

ದೀಪಾವಳಿ ಸಂಭ್ರಮದಲ್ಲಿ ಹಾರಿಸುವ ಪಟಾಕಿಗಳ ಸದ್ದು, ಬಣ್ಣದ ಚಿತ್ರಾರಗಳು ಮಹಾನಗರ ಬೆಂಗಳೂರಿಗೆ ಖುಷಿ ಕೊಟ್ಟಿರಬಹುದು. ಇದೇ ವೇಳೆ ಈ ಪಟಾಕಿಗಳು ಹೊಸ ಸೂಸುವ., ಹೊಗೆ ಮತ್ತು ವಿಷಕಾರಿ ಕಣಗಳು ಅಪಾಯದ ಕರೆಗಂಟೆ ಬಾರಿಸುತ್ತಿವೆ. ಹೇಗೆಂದರೆ, ಬೆಂಗಳೂರಿನ ಜನ ನಿಯಂತ್ರಣವೇ ಇಲ್ಲದೆ ಸಿಡಿಸಿದ ಪಟಾಕಿಗಳ ಹೊಗೆಯಿಂದ ವಾಯು ಮಾಲಿನ್ಯ ಏಕಾಏಖಿ ಮಿತಿಮೀರಿದೆ.  ಗಾಳಿಯ ಗುಣಮಟ್ಟ ಕಡಿಮೆಯಾಗಿ ಜನರು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. 

ಬೆಂಗಳೂರಿನಗೆ ವಾಯು ಮಾಲಿನ್ಯ ಹೊಸತಲ್ಲ. ಆದರೆ ದೀಪಾವಳಿಗೂ ಮೊದಲು ಇದ್ದ  ಪ್ರಮಾಣವು ಹಬ್ಬದ ನಂತರದಲ್ಲಿ ತೀವ್ರ ಹದಗೆಟ್ಟಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳವಳ ವ್ಯಕ್ತಪಡಿಸಿದೆ.


ರಾಜ್ಯ ಸರ್ಕಾರವು ಹಸಿರು ಪಟಾಕಿಗಳನ್ನು ಸಿಡಿಸುವ ವಿಚಾರದಲ್ಲಿ ಕ್ರಮಗಳನ್ನು ಕೈಗೊಂಡಿದ್ದರೂ ಸಮರ್ಪಕ ಅನುಷ್ಠಾನ ಆಗಿಲ್ಲ. ಸರ್ಕಾರದ ಪ್ರೇರಣೆಯ ಹೊರತಾಗಿಯೂ ಜನರ  ಅರಿವಿನ ಕೊರತೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಳ ಕಾರಣವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ದೀಪಾವಳಿಗೂ ಮುನ್ನ ಬೆಂಗಳೂರಿನಲ್ಲಿ ಎಕ್ಯೂಐ (ಗಾಳಿಯ ಗುಣಮಟ್ಟ ಸೂಚ್ಯಾಂಕ) 50 ಇತ್ತು. ಆದರೆ, ದೀಪಾವಳಿ ನಂತರ (ಶನಿವಾರ) ಇದರ ಪ್ರಮಾಣ 100ಕ್ಕೆ ತಲುಪಿದೆ. ಗಾಳಿಯ ಗುಣಮಟ್ಟದ ಸೂಚ್ಯಾಂಕವು 50ರಷ್ಟಿದ್ದರೆ ಉತ್ತಮ ಎಂದರ್ಥ. 60-80 ರಷ್ಟಾದರೆ ಸಾಧಾರಣ.. 100-150 ದಾಟಿದರೆ ಉಸಿರಾಡಲು ಯೋಗ್ಯಲ್ಲದ ಗಾಳಿ ಎಂದು ಪರಿಗಣಿಸಲಾಗುತ್ತದೆ.  


ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಶನಿವಾರದ ಗಾಳಿಯ ಗುಣಮಟ್ಟದ ಸೂಚ್ಯಂಕ(ಎಕ್ಯೂ) ಗಮನಿಸುವುದಾದರೆ, ಜಯನಗರದಲ್ಲಿ 124, ಬಿಟಿಎಂ ಲೇಔಟ್ 130, ಬಾಪೂಜಿ ನಗರ 110, ಸಿಲ್ಕ್ ಬೋರ್ಡ್ 97, ಮಹದೇವಪುರ 74, ಹೆಬ್ಬಾಳ 142, ಪೀಣ್ಯ 141, ಸಿಟಿ ರೈಲ್ವೆ ಸ್ಟೇಷನ್ 84, ಜಿಗಣಿ 133, ಹೊಂಬೇಗೌಡ ನಗರ 95, ನಿಮ್ಹಾನ್ಸ್ ರಸ್ತೆ 114 ನಷ್ಟು ಇತ್ತು. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಶನಿವಾರ ವಾಯುಮಾಲಿನ್ಯ ಪ್ರಮಾಣ ಶೇ10 ರಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಎಕ್ಯೂ ಸೂಚ್ಯಂಕ ಹೇಗೆ?

ಸೊನ್ನೆಯಿಂದ 50 ಇದ್ದರೆ ಉತ್ತಮ, 51 ರಿಂದ 100 ರವರೆಗೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ಹೊಂದಿದ್ದರೆ ಕಳಪೆ, 301 ರಿಂದ 400 ಹೊಂದಿದ್ದರೆ ಅತ್ಯಂತ ಕಳಪೆ, 401 ರಿಂದ 450 ಇದ್ದರೆ ತೀವ್ರ ಕಳಪೆ, 450 ಕ್ಕಿಂತ ಹೆಚ್ಚಾದರೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.


ವಾಹನಗಳಿಂದಲೂ ಮಾಲಿನ್ಯ

ಬೆಂಗಳೂರಿನಲ್ಲಿ ಪಟಾಕಿ ಹೊರತುಪಡಿಸಿ ವಾಹನಗಳ ಹೊಗೆಯಿಂದಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಠ 5 ಸಾವಿರ ಹೊಸ ವಾಹನಗಳು ನೋಂದಣಿ ಆಗುತ್ತಿವೆ. ಅಂದರೆ ತಿಂಗಳಿಗೆ ಒಂದೂವರೆ ಲಕ್ಷ, ವರ್ಷಕ್ಕೆ 18 ಲಕ್ಷ ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ಕಳೆದ ವರ್ಷದ ನೋಂದಣಿ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಶೇ. 6.5ರಷ್ಟು ಏರಿಕೆಯಾಗಿವೆ.


ಎನ್‌ಜಿಟಿಯಲ್ಲಿ ಸ್ವಯಂಪ್ರೇರಿತ ವಿಚಾರಣೆ

ಬೆಂಗಳೂರಿನ ಗಾಳಿಯ ಗುಣಮಟ್ಟ ವಿವರಿಸುವ ಇತ್ತೀಚಿನ ಎರಡು ಅಧ್ಯಯನ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.

ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ ಭಾರತದ 10 ನಗರಗಳಲ್ಲಿ ಸುಮಾರು 33 ಸಾವಿರ ಸಾವುಗಳು ವಾಯುಮಾಲಿನ್ಯದಿಂದ ಸಂಭವಿಸುತ್ತಿವೆ ಎಂಬ ವರದಿ ಹಿನ್ನೆಲೆಯಲ್ಲಿ ಹಸಿರುಪೀಠ ವಿಚಾರಣೆ ಆರಂಭಿಸಿದೆ. ಬೆಂಗಳೂರು , ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಹಾಗೂ ವಾರಾಣಸಿ ನಗರಗಳಲ್ಲಿ ವಾಹನಗಳು, ಕೈಗಾರಿಕೆ ಹಾಗೂ ನಿರ್ಮಾಣ ಚಟುವಟಿಕೆಗಳಿಂದ ಗಾಳಿಯ ಗುಣಮಟ್ಟ ಕ್ಷೀಣಿಸಿದೆ ಎಂದು ವರದಿ ಹೇಳಿತ್ತು.

Tags:    

Similar News