ನ. 4ರಿಂದ ಬೆಂಗಳೂರು ಕೌಶಲ ಸಮ್ಮೇಳನ; ʼದ ಫೆಡರಲ್ ಕರ್ನಾಟಕʼ ಸಹಭಾಗಿತ್ವ
ಹಿಂದುಳಿದ, ಶೋಷಿತ ಗುಂಪುಗಳ ಅಂತರ್ಗತ ಬೆಳವಣಿಗೆಗೆ ವೃದ್ಧಿಸಲು ಹಾಗೂ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಒಂದೇ ಸೂರಿನಡಿ ತರುವ ಸಲುವಾಗಿ 2016ರಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸೃಜಿಸಲಾಯಿತು.
ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನ.4 ರಿಂದ 6 ರವರೆಗೆ “ಬೆಂಗಳೂರು ಕೌಶಲ ಸಮ್ಮೇಳನʼ ನಡೆಯಲಿದೆ. ನ್ಯೂ ಜನರೇಷನ್ ಮೀಡಿಯಾ ಪ್ರೈವೇಟ್ ಲಿಮಿಡೆಟ್ ಅಂಗಸಂಸ್ಥೆಯಾದ ‘ದ ಫೆಡರಲ್ ಕರ್ನಾಟಕ’ ಡಿಜಿಟಲ್ ಮಾಧ್ಯಮ ಸಮ್ಮೇಳನದ ಮಾಧ್ಯಮ ಸಹಭಾಗಿತ್ವ ಪಡೆದಿದೆ.
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮೂರು ದಿನಗಳ ಸಮ್ಮೇಳನವನ್ನು ಬೆಂಗಳೂರಿನ ಹೋಟೆಲ್ ಅಶೋಕ್ ಲಲಿತ್ ನಲ್ಲಿ ಆಯೋಜಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.4 ರಂದು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ʼದ ಫೆಡರಲ್ ಕರ್ನಾಟಕʼ ಡಿಜಿಟಲ್ ಮಾಧ್ಯಮವು ಕಾರ್ಯಕ್ರಮದ ಅಧಿಕೃತ ಮಾಧ್ಯಮ ಸಹಭಾಗಿತ್ವ ಪಡೆದಿದ್ದು, ಕೌಶಲಾಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದೆ.
ಹಿಂದುಳಿದ, ಶೋಷಿತ ಗುಂಪುಗಳ ಅಂತರ್ಗತ ಬೆಳವಣಿಗೆಗೆ ವೃದ್ಧಿಸಲು ಹಾಗೂ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಒಂದೇ ಸೂರಿನಡಿ ತರುವ ಸಲುವಾಗಿ 2016ರಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸೃಜಿಸಲಾಯಿತು.
ಕಾರ್ಮಿಕ ಇಲಾಖೆ, ವಾಣಿಜ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳ ತರಬೇತಿ ಕಾರ್ಯಕ್ರಮಗಳನ್ನು ಕೌಶಲಾಭಿವೃದ್ಧಿ ಇಲಾಖೆಗೆ ಹಂಚಿಕೆ ಮಾಡಲಾಗುತ್ತದೆ. ಯುವಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ನೆರವಾಗಲು ವಿವಿಧ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ.
ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ ಸುಮಾರು 1.35 ಲಕ್ಷ ಯುವಕರಿಗೆ ಉಚಿತ ತರಬೇತಿ ನೀಡುವ ಮೂಲಕ ಹಲವರ ಬದುಕಿಗೆ ಮಾರ್ಗೋಪಾಯ ಕಲ್ಪಿಸಿದೆ.
ʼನವಯುಗʼದ ಮಾಧ್ಯಮದ ಸಹಭಾಗಿತ್ವ
ವಿಶ್ಲೇಷಣೆ, ವ್ಯಾಖ್ಯಾನ, ವಿಶ್ವಾಸಾರ್ಹತೆ ಮತ್ತು ಬಹುಮಾಧ್ಯಮ ರೂಪದಲ್ಲಿ ಸುದ್ದಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ ʼದ ಫೆಡರಲ್ ಕರ್ನಾಟಕʼ. ಹತ್ತು ವರ್ಷಗಳ ಹಿಂದೆ ಇಂಗ್ಲಿಷ್‌ನಲ್ಲಿ ಆರಂಭವಾದ ʼದ ಫೆಡರಲ್ʼ ಡಿಜಿಟಲ್ ಮಾಧ್ಯಮವು ವಿಶ್ವಾಸಾರ್ಹ ಹಾಗೂ ವಿಸ್ತೃತ ವರದಿಗಳ ಮೂಲಕ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಿದೆ. ಪ್ರಸ್ತುತ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ʼದ ಫೆಡರಲ್ʼ ಸ್ವತಂತ್ರ ಮಾಧ್ಯಮವಾಗಿ ರಾಜಿರಹಿತ ಹಾಗೂ ಬಹು ಆಯಾಮದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದೆ.
ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸಲಿದೆ. ಭಿನ್ನ ಸಮಾಜದಲ್ಲಿ ಸುದ್ದಿಯ ಸಮತೋಲನ ಕಾಯ್ದುಕೊಂಡು, ವಿವೇಕದ ಧ್ವನಿಗಳ ಮೂಲಕ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿದೆ.
ಹಲವು ಮುದ್ರಣ ಹಾಗೂ ಮಾಧ್ಯಮಗಳಿಗೆ ವೇದಿಕೆಯಾಗಿರುವ ನ್ಯೂ ಜನರೇಷನ್ ಮೀಡಿಯಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್, ಪುದಿಯ ತಲೈಮುರೈ ಎಂಬ ತಮಿಳು ಭಾಷೆಯ ಸುದ್ದಿ ವಾಹಿನಿ ಹೊಂದಿದೆ ಚಾನಲ್. 2011ರಲ್ಲಿ ಆರಂಭವಾದ ಈ ಸುದ್ದಿ ವಾಹಿನಿ ಪತ್ರಿಕೋದ್ಯಮದಲ್ಲಿ ಹೊಸಶಕೆ ಸೃಷ್ಟಿಸಿದೆ.