ಬೆಳಗಾವಿ | ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆಗೆ ತಡೆ; ಪ್ರತಿಭಟನೆ

ತಡವಾಗಿ ಗಣೇಶ ವಿಸರ್ಜನೆಗೆ ತೆರಳುತ್ತಿದ್ದಾಗ ಬೆಳಗಾವಿಯ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ಮಂಗಳವಾರ ಬೆಳಿಗ್ಗೆ ತಡೆದಿದ್ದಾರೆ.

Update: 2024-09-18 09:35 GMT
ಗಣೇಶ ವಿಸರ್ಜನೆ
Click the Play button to listen to article

ನಿಗದಿತ ಸಮಯಕ್ಕಿಂತ ತಡವಾಗಿ ಗಣೇಶ ವಿಸರ್ಜನೆಗೆ ತೆರಳುತ್ತಿದ್ದಾಗ ಬೆಳಗಾವಿಯ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ಮಂಗಳವಾರ ಬೆಳಿಗ್ಗೆ ತಡೆದಿದ್ದಾರೆ.

ಸಾಂಪ್ರದಾಯಿಕ ಮಾರ್ಗ ಬಿಟ್ಟು, ಬೇರೆ ಮಾರ್ಗದಲ್ಲಿ ಹೋಗಿ ವಿಸರ್ಜಿಸುವಂತೆ ಪೊಲೀಸರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಪ್ರತಿಭಟನೆ ನಡೆಸಿದರು.

'ಬೇರೆ ಮಾರ್ಗದಲ್ಲಿ ಹೋಗಿ ಮೂರ್ತಿ ವಿಸರ್ಜನೆ ಮಾಡುವುದಿಲ್ಲ. ಪ್ರತಿವರ್ಷ ಹೋಗುವ ಮಾರ್ಗದಲ್ಲೇ ಅವಕಾಶ ಕೊಡಬೇಕು' ಎಂದು ಪಟ್ಟು ಹಿಡಿದಿದ್ದರು. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಸಾಂಪ್ರದಾಯಿಕ ಮಾರ್ಗದಲ್ಲೇ ಪೊಲೀಸರು ಅವಕಾಶ ಕೊಟ್ಟಿದ್ದರಿಂದ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಪುನರಾರಂಭವಾಯಿತು. ಪೊಲೀಸ್ ಭದ್ರತೆಯಲ್ಲೇ ಕಚೇರಿ ಗಲ್ಲಿ ಮಾರ್ಗವಾಗಿ, ಕಪಿಲೇಶ್ವರ ದೇವಸ್ಥಾನದ ಹೊಂಡದತ್ತ ಮೆರವಣಿಗೆ ಸಾಗಿತು.

Tags:    

Similar News