ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭಿಸಿದ ಬಿಬಿಎಂಪಿ

ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಮೃತರ ಹೆಸರುಗಳನ್ನು ತಿದ್ದುಪಡಿ, ಸೇರ್ಪಡೆ, ಮತ್ತು ಅಳಿಸುವಿಕೆಗೆ ಕಂದಾಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಮತ್ತು ಪಾಲಿಕೆ ಮುಖ್ಯಸ್ಥ ತುಷಾರ ಗಿರಿನಾಥ್ ಮನವಿ ಮಾಡಿದರು.

Update: 2024-08-17 08:23 GMT
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತದಾರರ ಪಟ್ಟಿಯನ್ನು ಪರಿಶೀಲಿಸಿದರು.
Click the Play button to listen to article

ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳನ್ನು ಅನುಸರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025 ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು  ಪ್ರಾರಂಭಿಸಲಿದೆ.

ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಮೃತರ ಹೆಸರುಗಳನ್ನು ತಿದ್ದುಪಡಿ, ಸೇರ್ಪಡೆ, ಮತ್ತು ಅಳಿಸುವಿಕೆಗೆ ಕಂದಾಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಮತ್ತು ಪಾಲಿಕೆ ಮುಖ್ಯಸ್ಥ ತುಷಾರ ಗಿರಿನಾಥ್ ಮನವಿ ಮಾಡಿದರು.

 ಅಕ್ಟೋಬರ್ 29 ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅಕ್ಟೋಬರ್ 29 ರಿಂದ ನವೆಂಬರ್ 28 ರವರೆಗೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಡಿಸೆಂಬರ್ 24 ರೊಳಗೆ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಪೂರ್ಣಗೊಳ್ಳುತ್ತದೆ. ಜನವರಿ 6 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. 

Tags:    

Similar News