ನೆಲಮಹಡಿ ಪಾರ್ಕಿಂಗ್‌ಗಳಲ್ಲಿರುವ ವಾಣಿಜ್ಯ ಮಳಿಗೆಗಳ ತೆರವಿಗೆ ಬಿಬಿಎಂಪಿ ಆದೇಶ

ಮೆಜೆಸ್ಟಿಕ್​ನ ನ್ಯಾಷನಲ್ ಬಜಾರ್, ಸಿಟಿ ಸೆಂಟರ್ ಸುತ್ತಮುತ್ತ ಈ ರೀತಿಯ ಮಳಿಗೆಗಳು ಹಲವು ವರ್ಷಗಳಿಂದಲೂ ಇವೆ. ಇವುಗಳನ್ನು ತೆರವು ಮಾಡಿಸಲು ಬಿಬಿಎಂಪಿ ಮುಂದಾಗಿದೆ.;

Update: 2025-07-24 05:26 GMT

ಬೃಹತ್‌ ಬೆಂಗಳೂರು ನಗರ ಪಾಲಿಕೆ

ನೆಲಮಹಡಿಯಲ್ಲಿ ಪಾರ್ಕಿಂಗ್ ಉದ್ದೇಶಕ್ಕೆ ಹೊರತುಪಡಿಸಿ ವಾಣಿಜ್ಯ ಉದ್ದೇಶಕ್ಕೆ ನಡೆಸಲಾಗುತ್ತಿರುವ ಮಳಿಗೆಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಬೆಂಗಳೂರಿನ ಹಲವು ಪ್ರದೇಶಗಳ ಶಾಪಿಂಗ್ ಮಾಲ್​ಗಳಲ್ಲಿ ನೆಲಮಹಡಿಯಲ್ಲಿ ಕೂಡ ವಾಣಿಜ್ಯ ಮಳಿಗೆಗಳು ಸಕ್ರಿಯವಾಗಿವೆ. ಮೆಜೆಸ್ಟಿಕ್​ನ ನ್ಯಾಷನಲ್ ಬಜಾರ್, ಸಿಟಿ ಸೆಂಟರ್ ಸುತ್ತಮುತ್ತ ಈ ರೀತಿಯ ಮಳಿಗೆಗಳು ಹಲವು ವರ್ಷಗಳಿಂದಲೂ ಇವೆ. ಇವುಗಳನ್ನು ತೆರವು ಮಾಡಿಸಲು ಬಿಬಿಎಂಪಿ ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ವ್ಯಾಪಾರಿಗಳು, ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ವಾಣಿಜ್ಯ ಸಂಕೀರ್ಣಗಳಿಗೆ ಈ ನಿಯಮ ಅಳವಡಿಕೆ ಮಾಡಿ.ಸುಮಾರು ವರ್ಷಗಳಿಂದ ನಾವು ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದೇವೆ. ಈಗ ತೆರವು ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ವೈಜ್ಞಾನಿಕವಾಗಿ, ಅವ್ಯವಸ್ತಿವಾಗಿ ಬಹು ಅಂತಸ್ತಿನ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದಾಗಿ ಅವಘಡಗಳು, ಪ್ರಮಾದಗಳು ಹೆಚ್ಚಾಗಿ ಉಂಟಾಗುತ್ತಿದೆ. ಹೀಗಾಗಿ ಬಿಬಿಎಂಪಿ ಸಾರ್ವಜನಿಕರ ಅಥವಾ ಗ್ರಾಹಕರ ಹಿತದೃಷ್ಟಿಯಿಂದ ಅನಧಿಕೃತ ನೆಲ ಮಹಡಿಗಳ ತೆರವಿಗೆ ನೋಟಿಸ್ ಕೊಡಲು ಮುಂದಾಗಿದೆ. ಪಾಲಿಕೆಯ ಎಲ್ಲ ವಲಯಗಳಲ್ಲೂ ನೋಟಿಸ್ ನೀಡಲು ತಯಾರಿ ನಡೆಸಿದೆ.

Tags:    

Similar News