CET SEAT BLOCKING SCAM| ದಂಧೆಗೆ ಕಡಿವಾಣ ಹಾಕಲು ವೃತ್ತಿಪರ ಕೋರ್ಸ್‌ ನೋಂದಣಿಗೆ ಆಧಾರ್‌ ಜೋಡಣೆ?

ಸಿಇಟಿ ಸೀಟು ಹಂಚಿಕೆ ಅಕ್ರಮಗಳಿಗೆ ಆಸ್ಪದ ನೀಡದಿರಲು ತೀರ್ಮಾನಿಸಿ ಆಧಾರ್ ಜೋಡಣೆಯ ನೋಂದಣಿಗೆ ನಿರ್ಧರಿಸಿದೆ. ಈ ಸಂಬಂಧ ಇ-ಆಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

Update: 2024-10-29 11:40 GMT

ಮುಂದಿನ ವರ್ಷದಿಂದ ವೃತ್ತಿಪರ ಕೋರ್ಸುಗಳ ನೋಂದಣಿಗೆ ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಜೋಡಣೆ ಮಾಡುವ ಪ್ರಸ್ತಾವನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಸಿಇಟಿ ಸೀಟು ಹಂಚಿಕೆಯಲ್ಲಿ ಅಕ್ರಮಗಳಿಗೆ ಆಸ್ಪದ ನೀಡದಿರಲು ತೀರ್ಮಾನಿಸಿ ಆಧಾರ್ ಜೋಡಣಿಯ ನೋಂದಣಿಗೆ ನಿರ್ಧರಿಸಿದೆ. ಈ ಸಂಬಂಧ ಇ-ಆಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇ-ಆಡಳಿತ ಇಲಾಖೆಯು ಪ್ರಸ್ತಾವನೆ ಪರವಾಗಿದೆ. ಶೀಘ್ರದಲ್ಲೇ ಕೇಂದ್ರದ ಇ-ಆಡಳಿತ ಇಲಾಖೆಗೆ ಪ್ರಸ್ತಾವನೆ ರವಾನಿಸಲಿದ್ದು, ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ವೃತ್ತಿಪರ ಕೋರ್ಸ್ ನೋಂದಣಿಯಲ್ಲಿ ಆಗುವ ವಂಚನೆ ತಡೆಗಟ್ಟುವ ಜೊತೆಗೆ ವಿದ್ಯಾರ್ಥಿಗಳ ಅಧಿಕೃತತೆ ಖಚಿತಪಡಿಸಿಕೊಳ್ಳಲು ಆಧಾರ್‌ ಜೋಡಣೆ ಉತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳು ತಾವು ಬಳಸುವ ಮೊಬೈಲ್ ನಿಂದಲೇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಅನುಕೂಲವಾಗುವಂತೆ ನೋಂದಣಿ ಸಂಖ್ಯೆಗೆ ಆಧಾರ್ ಜೋಡಿಸುವಂತೆ ಕೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನೇಮಕಾತಿ ಪರೀಕ್ಷೆಗೂ ಆಧಾರ್‌ ಲಿಂಕ್

ಇನ್ನು ಸರ್ಕಾರ ವಿವಿಧ ಇಲಾಖೆಗಳಿಗೆ ನಡೆಸುವ ನೇಮಕಾತಿ ಪರೀಕ್ಷೆಗಳಿಗೂ ಆಧಾರ್ ಲಿಂಕ್ ನೋಂದಣಿ ಯೋಜನೆ ಪರಿಚಯಿಸುವ ಚಿಂತನೆ ನಡೆದಿದೆ ಎಂದು ಎಚ್‌. ಪ್ರಸನ್ನ ತಿಳಿಸಿದ್ದಾರೆ.

ಎಂಜಿನಿಯರಿಂಗ್ ಸೀಟು ಹಂಚಿಕೆಯ ಎಲ್ಲಾ ಸುತ್ತುಗಳು ಮುಗಿದ ನಂತರವೂ ಕೆ-ಸಿಇಟಿ ಕೋಟಾದಡಿ ಸೀಟ್ ಬ್ಲಾಕಿಂಗ್ ಹಗರಣ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.

ಸಿಇಟಿ ಸೀಟ್‌ ಬ್ಲಾಕಿಂಗ್ ದಂಧೆಯಲ್ಲಿ ಕೆಲ ಏಜೆನ್ಸಿಗಳು ಹಾಗೂ ಮೆಂಟರ್ಗಳು ಕಾಲೇಜು ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಮೀಲಾಗಿ ದಂಧೆ ನಡೆಸಿರಬಹುದು ಎಂಬ ಅನುಮಾನವೂ ಕಾಡುತ್ತಿದೆ ಎಂದು ಪ್ರಸನ್ನ ಹೇಳಿದ್ದಾರೆ.

Tags:    

Similar News