Pahalgam Terror Attack | ಜಮ್ಮು ಕಾಶ್ಮೀರದಿಂದ ಸುರಕ್ಷಿತವಾಗಿ ಮರಳಿದ ದೊಡ್ಡಬಳ್ಳಾಪುರದ 95 ಮಂದಿ ಪ್ರವಾಸಿಗರು
ಟ್ರಾವೆಲ್ ಏಜೆನ್ಸಿಯ ಮೂಲಕ ಏ.19 ರಂದು ಏಳು ವಿಮಾನಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದರು. ದೆಹಲಿ, ಅಮೃತಸರ, ಕಾಶ್ಮೀರ, ಕುಲುಮನಾಲಿಯಲ್ಲಿ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ.;
ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ 95 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.
ತಾಲೂಕಿನ ತಿರುಮಗೊಂಡನಹಳ್ಳಿ, ಹಾಡೋನಹಳ್ಳಿ, ವಡ್ಡರಹಳ್ಳಿ ಲಕ್ಷ್ಮೀದೇವಿಪುರ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ ಸುಮಾರು 95 ಮಂದಿ 9 ದಿನಗಳ ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿದ್ದರು.
ಟ್ರಾವೆಲ್ ಏಜೆನ್ಸಿಯ ಮೂಲಕ ಏ.19 ರಂದು ಏಳು ವಿಮಾನಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದರು. ದೆಹಲಿ, ಅಮೃತಸರ, ಕಾಶ್ಮೀರ, ಕುಲುಮನಾಲಿಯಲ್ಲಿ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ.
ಏ.19 ರಂದು ದೆಹಲಿಗೆ ತೆರಳಿದ್ದ ಪ್ರವಾಸಿಗರ ತಂಡ, ಅಲ್ಲಿಂದ ಅಮೃತಸರ ವೀಕ್ಷಿಸಿ ಬಳಿಕ ಶ್ರೀನಗರಕ್ಕೆ ತೆರಳಿದ್ದರು. ಪಹಲ್ಗಾಮ್ ಸಮೀಪದ ಬೈರಸನ್‌ನಲ್ಲಿ ಎರಡು ದಿನ ಉಳಿದುಕೊಳ್ಳಲು ಹೋಟೆಲ್ ಬುಕ್ಕಿಂಗ್ ಮಾಡಿದ್ದರು. ಆದರೆ, ಬೈರಸನ್‌ಗೆ ತೆರಳುವ ಮಾರ್ಗ ಮಧ್ಯೆ ಬೆಟ್ಟ ಕುಸಿದ ಕಾರಣ ಪ್ರವಾಸ ಮಾರ್ಗ ಬದಲಿಸಿದ್ದರು. ಪಹಲ್ಗಾಮ್‌ಗೆ ತೆರಳದೇ ಕಟ್ರಾ ವೈಷ್ಣೋದೇವಿ ದರ್ಶನ ಮುಗಿಸಿ, ಕುನುಮನಾಲಿಗೆ ಹಿಂತಿರುಗಿದ್ದರು. ಹಾಗಾಗಿ ಭಯೋತ್ಪಾದಕರ ದಾಳಿಯಿಂದ ಬಚಾವಾಗಿದ್ದರು.