ವಿನಯ್ ಕುಲಕರ್ಣಿ ಪತ್ನಿ ಸೇರಿ 39 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ

ಜೈಲಿನಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ.

Update: 2025-09-24 15:18 GMT

ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ನೇಮಕ ಮಾಡಿದೆ. 39 ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನಿಯೋಜನೆ ಮಾಡಿ ಎಐಸಿಸಿ ಅಧಿಕೃತ ಮುದ್ರೆ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿಹಾರಕ್ಕೆ ಸಿಡಬ್ಲೂಸಿ ಸಭೆಗೆ ತೆರಳಿದ್ದು, ಈ ವೇಳೆಯಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗಿದೆ. 

ಧಾರವಾಡ ಜಿಲ್ಲಾಪಂಚಾಯತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಶಿವಲೀಲಾ ಕುಲಕರ್ಣಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕಾಂಗ್ರೆಸ್‌ನಿಂದ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಸರ್ಕಾರದಿಂದ ಅಧಿಕೃತ ಆದೇಶದ ಬಳಿಕ ಅಧಿಕಾರ ಸ್ವೀಕಾರ ನಡೆಯಲಿದೆ. ಶಾಸಕರ ಬದಲಿಗೆ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಮಣೆ ಹಾಕಲಾಗಿದೆ. 

ಶಿವಲೀಲಾ ಕುಲಕರ್ಣಿಗೆ  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀಡಿದರೆ, ಲಾವಣ್ಯ ಬಲ್ಲಾಳ್ ಜೈನ್ ಅವರಿಗೆ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆಗೆ ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿದೆ. ಇನ್ನುಳಿದಂತೆ ನಿಗಮ ಮಂಡಳಿಗಳಿಗೆ ನೇಮಕ ಮಾಡಿರುವ ಅಧ್ಯಕ್ಷರ ಹೆಸರಿನ ಪಟ್ಟಿಯ ವಿವರ ಇಂತಿದೆ. 

 

1. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ - ಶಿವಲೀಲಾ ಕುಲಕರ್ಣಿ

2. ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ - ಲಾವಣ್ಯ ಬಲ್ಲಾಳ್ ಜೈನ್

3. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ - ಪಿ. ರಘು

4. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮ - ಅರುಣ್ ಪಾಟೀಲ್

5. ಜೈವಿಕ ವೈವಿಧ್ಯ ಮಂಡಳಿ - ಜಗದೀಶ್ ವೊಡ್ನಾಲ್

6. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ - ಮುರಳಿ ಅಶೋಕ್

7. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ - ಡಾ. ಮೂರ್ತಿ

8. ಮಾಜಿ ಸೈನಿಕರ ಕಲ್ಯಾಣ ಮಂಡಳಿ - ಕರ್ನಲ್ ಮಲ್ಲಿಕಾರ್ಜುನ್

9. ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ - ಡಾ. ಬಿ. ಸಿ. ಮುದ್ದುಗಂಗಾಧರ್

10. ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ - ಶರ್ಲೆಟ್ ಪಿಂಟೋ

11. ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ - ಮರಿಯೋಜಿ ರಾವ್

12. ಕರಾವಳಿ ಅಭಿವೃದ್ಧಿ ಪ್ರಾಧಿಕಾರ - ಎಂ. ಎ. ಗಫೂರ್

13. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ - ಕೆ. ಹರೀಶ್ ಕುಮಾರ್

14. ಕರ್ನಾಟಕ ಗೋದಾಮು ನಿಗಮ - ಎನ್. ಸಂಪಂಗಿ 

15.  ದೇವರಾಜ್ ಅರಸ್ ಟ್ರಕ್ ಟರ್ಮಿನಲ್ - ವೈ. ಸಯೀದ್ ಅಹಮದ್

16. ಕಾಡುಗೊಲ್ಲ ಅಭಿವೃದ್ಧಿ ನಿಗಮ - ಮಹೇಶ್

17. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ - ಧರ್ಮಣ್ಣ ಉಪ್ಪಾರ 

18.  ಕೇಂದ್ರ ಪರಿಹಾರ ಸಮಿತಿ - ಅಗಾ ಸುಲ್ತಾನ್

19. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ - ಎಸ್. ಜಿ. ನಂಜಯ್ಯ ಮಠ 

20. ಬಯಲುಸೀಮೆ ಅಭಿವೃದ್ಧಿ ಮಂಡಳಿ - ಮಂಜಪ್ಪ

21. ಕರ್ನಾಟಕ ನಿಗಮ ನಿಯಮಿತ ಬೀಜ ಅಭಿವೃದ್ಧಿ - ಆಂಜಪ್ಪ 

22. ನೀಲಕಂಠ ಮುಲ್ಗೆ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

23. ಕಮಾಂಡ್ ಪ್ರದೇಶಾಭಿವೃದ್ಧಿ ಪ್ರಾಧಿಕಾರ - ಬಾಬು ಹೊನ್ನ ನಾಯ್ಕ್ 

24.ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಮಾಂಡ್ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ - ಯುವರಾಜ್ ಕದಮ್ 

25. ಕರ್ನಾಟಕ ತೊಗರಿಬೇಳೆ ಅಭಿವೃದ್ಧಿ ನಿಗಮ, ಕಲಬುರ್ಗಿ - ಜಮಾದಾರ್ ಅನಿಲ್ ಕುಮಾರ್ 

26. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ - ಪ್ರವೀಣ್ ಹರ್ವಾಲ್ 

27. ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮ - ಮಂಜುನಾಥ್ ಪೂಜಾರಿ 

28. ಕರ್ನಾಟಕ ರಾಜ್ಯ ಬೇಳೆಕಾಳುಗಳ ಅಭಿವೃದ್ಧಿ ಮಂಡಳಿ ಲಿ. ಕಲಬುರಗಿ - ಸೈಯದ್ ಮೆಹಮೂದ್ ಚಿಸ್ತಿ 

29. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ - ಎಂ. ಎಸ್. ಮುತ್ತುರಾಜ್ 

30. ಕರ್ನಾಟಕ ಮಡಿವಾಳ ಮಾಚಿ ದೇವ ಅಭಿವೃದ್ಧಿ ನಿಗಮ - ನಂಜಪ್ಪ 

31. ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ - ವಿಶ್ವಾಸ ದಾಸ್ 

32.ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ - ಆರ್. ಸತ್ಯನಾರಾಯಣ 

33. ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ - ಗಂಗಾಧರ್

34. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ - ಶಿವಪ್ಪ 

35. ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ - ಬಿ.ಎಸ್. ಕವಲಗಿ 

36. ಕುಂಬಾರ ಅಭಿವೃದ್ಧಿ ನಿಗಮ - ಶ್ರೀನಿವಾಸ ವೇಲು 

37. ಕರ್ನಾಟಕ ರಾಜ್ಯ ಕನಿಷ್ಠ ವೇತನ ಮಂಡಳಿ - ಟಿ.ಎಂ. ಶಾಹೀದ್ ತಕ್ಕಿಲ್ 

38. ಕರ್ನಾಟಕ ರಾಜ್ಯ ಕೈಮಗ್ಗ ಮೂಲಸೌಕರ್ಯ (ವಿದ್ಯುತ್ ಮಗ್ಗಗಳು) ಮಂಡಳಿ - ಚೇತನ್ ಕೆ. ಗೌಡ 

39. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ - ಶರಣಪ್ಪ ಸಾರದ್ಪುರ್ 

Tags:    

Similar News