ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸಿನಲ್ಲೇ ಮಸಲತ್ತು ನಡೆಯುತ್ತಿದೆ: ಆರ್‌ ಅಶೋಕ್

ಕರ್ನಾಟಕದ ಕಾಂಗ್ರೆಸ್‌ ಬಗ್ಗೆ ಪ್ರಧಾನಿ ಮೋದಿ ಅವರು ಈಗಾಗಲೇ ಹೇಳಿದ್ದಾರೆ. ಇಲ್ಲಿ ಸೂಪರ್‌ ಸಿಎಂ, ಶ್ಯಾಡೋ ಸಿಎಂಗಳು ಬಹಳಷ್ಟು ಮಂದಿ ಇದ್ದಾರೆ ಎಂದು ಅಶೋಕ್‌ ಹೇಳಿದರು.;

Update: 2024-03-24 07:55 GMT

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಐವರು ಶ್ಯಾಡೋ ಸಿಎಂಗಳಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವವರು ಕಾಂಗ್ರೆಸಿನಲ್ಲೇ ಇದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸದಿದ್ದರೆ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್‌ ಅವರು, ಕರ್ನಾಟಕ ಕಾಂಗ್ರೆಸ್‌ ಒಡೆದ ಮನೆಯಾಗಿದೆ ಎಂದರು.

ಮುಖ್ಯಮಂತ್ರಿಯವರ ಕಾಲೆಳೆಯಲು ಬೇರೆ ಪಕ್ಷದವರ ಅಗತ್ಯ ಇಲ್ಲ, ಅವರ ಪಕ್ಷದಲ್ಲೇ ಸಾಕಷ್ಟು ಮಂದಿ ಇದ್ದಾರೆ. ಬಿ.ಕೆ ಹರಿಪ್ರಸಾದ್‌, ಡಿ.ಕೆ ಶಿವಕುಮಾರ್‌ ಅವರು ಸಿದ್ದರಾಮಯ್ಯ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ. ಶ್ರೀನಿವಾಸ್‌ ನಿಜ ಹೇಳಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದ ಕಾಂಗ್ರೆಸ್‌ ಬಗ್ಗೆ ಪ್ರಧಾನಿ ಮೋದಿ ಅವರು ಈಗಾಗಲೇ ಹೇಳಿದ್ದಾರೆ. ಇಲ್ಲಿ ಸೂಪರ್‌ ಸಿಎಂ, ಶ್ಯಾಡೋ ಸಿಎಂಗಳು ಬಹಳಷ್ಟು ಮಂದಿ ಇದ್ದಾರೆ ಎಂದು ಅಶೋಕ್‌ ಹೇಳಿದರು.

Tags:    

Similar News