ಗದ್ದುಗೆ ಗುದ್ದಾಟ| ಸಿಎಂ ಪರ ಅಖಾಡಕ್ಕಿಳಿದ ಕುರುಬ ಸಮುದಾಯ

ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಕುರುಬ ಸಮುದಾಯಗಳ ಜಿಲ್ಲಾಧ್ಯಕ್ಷರು, ಸಂಘದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯಗೆ ಬೆಂಬಲ ನೀಡಬೇಕು. ಒಂದು ವೇಳೆ ಬದಲಾವಣೆ ಮಾಡಿದರೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸುವ ಸಾಧ್ಯತೆ ಇದೆ.

Update: 2025-11-28 07:50 GMT

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಾದ ಮಾತುಗಳು ಜೋರಾಗಿರುವ ಬೆನ್ನಲ್ಲೇ ಕುರುಬ ಸಮುದಾಯ ಸಿಎಂ ಸಿದ್ದರಾಮಯ್ಯ ಪರ ಅಖಾಡಕ್ಕಿಳಿದಿದೆ. ರಾಜ್ಯಾದ್ಯಂತ ಕುರುಬ ಸಂಘದ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಶುಕ್ರವಾರ ಮಹತ್ವದ ಸಭೆ ನಡೆಸಿದ್ದು, ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವ ಕುರಿತು ಚರ್ಚಿಸಲಾಯಿತು.

ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಕುರುಬ ಸಮುದಾಯಗಳ ಜಿಲ್ಲಾಧ್ಯಕ್ಷರು, ಸಂಘದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯಗೆ ಬೆಂಬಲ ನೀಡಬೇಕು. ಒಂದು ವೇಳೆ ಬದಲಾವಣೆ ಮಾಡಿದರೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸುವ ಸಾಧ್ಯತೆ ಇದೆ.

ಹೈಕಮಾಂಡ್‌ ವಿರುದ್ಧ ಸ್ವಾಮೀಜಿ ಕಿಡಿ

ತಿಂಥಣಿಯ ಕನಕಗುರು ಪೀಠದ ಸಿದ್ದರಾಮನಂದಪೂರಿ ಸ್ವಾಮೀಜಿ ಅವರು ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್‌ ಹೈಕಮಾಂಡ್‌ ವರ್ತನೆಯನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ರಾಜಕೀಯ ಗೊಂದಲ ಉಂಟಾಗಿದೆ. ಅನೇಕ ಸಮುದಾಯಗಳು ಗೊಂದಲಗೊಂಡಿವೆ, ಅದರಲ್ಲಿ ಕುರುಬರು ಕೂಡ ಒಂದು. ಮಠಾಧೀಶರು ಯಾರಿಗಾಗಿ ಲಾಬಿ ಮಾಡಲು ದೆಹಲಿಗೆ ಹೋಗುವ ಪರಿಸ್ಥಿತಿ ಬರಬಾರದ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಘನತೆ ಇದೆ. ನಾಯಕತ್ವ ಬದಲಾವಣೆಯಿಂದ ಅವರಲ್ಲಿ ಬೇಸರ ಹುಟ್ಟುವ ನಿರ್ಧಾರ ತೆಗೆದುಕೊಳ್ಳಬಾರದು. ಇದು ಕೇವಲ ಕುರುಬರ ವಿಷಯವಲ್ಲ, ಅಹಿಂದ ಸಮುದಾಯದ ಬಲ. ಇದಕ್ಕೆ ಚ್ಯುತಿ ಬಂದರೆ ಪರಿಣಾಮ ಇಡೀ ದೇಶದ ಮಟ್ಟದಲ್ಲಿ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ಹೈಕಮಾಂಡ್ ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ಇರುವುದರಿಂದ ಗೊಂದಲ ನಿರ್ಮಾಣವಾಗಿದೆ. ಇದು ವ್ಯಕ್ತಿಗೂ, ಪಕ್ಷಕ್ಕೂ ತೊಂದರೆ ತರಲಿದೆ. ಸಿದ್ದರಾಮಯ್ಯ ಕುರುಬರಿಗಷ್ಟೇ ಅಲ್ಲ, ಬಡವರು ಹಾಗೂ ದೀನದಲಿತರ ಪರ ನಿಂತ ನಾಯಕ. ಹೀಗಾಗಿ ನಾವು ಅವರನ್ನು ಬೆಂಬಲಿಸುತ್ತಿದ್ದೇವೆ. ಕೇಂದ್ರ ನಾಯಕತ್ವದಿಂದ ಅಗತ್ಯ ಸ್ಪಷ್ಟನೆ ಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Similar News