ಥೈಲ್ಯಾಂಡ್‌ನ ಅತ್ಯಂತ ಕಿರಿಯ ಪ್ರಧಾನಿ ಪೆಟಾಂಗ್ಟಾರ್ನ್ ಶಿನಾವತ್ರ ಯಾರು?

ರಾಜಕೀಯಕ್ಕೆ ಹೊಸಬರಾದ ಪೆಟಾಂಗ್ಟಾರ್ನ್(37), ಥೈಲ್ಯಾಂಡ್‌ನ ಎರಡನೇ ಮಹಿಳಾ ಪ್ರಧಾನಿ. ಚಿಕ್ಕಮ್ಮ ಯಿಂಗ್ಲಕ್ ಶಿನಾವತ್ರ ಮತ್ತು ತಂದೆ ಥಕ್ಸಿನ್ ನಂತರ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೂರನೇ ಶಿನಾವತ್ರ.

Update: 2024-08-17 11:47 GMT

ದೇಶದ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರನ್ನು ವಜಾಗೊಳಿಸಿದ ನಂತರ, ಥಾಯ್ ಸಂಸತ್ತು ದೇಶದ ಅತ್ಯಂತ ಕಿರಿಯ ಪ್ರಧಾನಿಯಾಗಿ ಪೆಟಾಂಗ್ಟಾರ್ನ್  ಶಿನಾವತ್ರ ಅವರನ್ನು ಆಯ್ಕೆ ಮಾಡಿದೆ.

ರಾಜಕೀಯಕ್ಕೆ ಹೊಸಬರಾದ ಪೆಟಾಂಗ್ಟಾರ್ನ್(37), ಥೈಲ್ಯಾಂಡ್‌ನ ಎರಡನೇ ಮಹಿಳಾ ಪ್ರಧಾನಿ. ಚಿಕ್ಕಮ್ಮ ಯಿಂಗ್ಲಕ್ ಶಿನಾವತ್ರ ಮತ್ತು ತಂದೆ ಥಕ್ಸಿನ್ ನಂತರ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೂರನೇ ಶಿನಾವತ್ರ. 

ಪೆಟಾಂಗ್ಟಾರ್ನ್ ಸಂಸತ್ತಿನ ಮತದ ಮೂಲಕ ಆಯ್ಕೆಯಾಗಿದ್ದು, ಕೇಂದ್ರ ನ್ಯಾಯಾಂಗವು ಶ್ರೆತ್ತಾ ಥಾವಿಸಿನ್ ಅವರನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ವಜಾಗೊಳಿಸಿದ ಎರಡು ದಿನಗಳ ನಂತರ ಆಯ್ಕೆಯಾಗಿದ್ದಾರೆ. 

ಕೈಲಾಗಿದ್ದು ಮಾಡುತ್ತೇನೆ: ಪ್ರಧಾನಿಯಾಗಿ ಮಾಧ್ಯಮಕ್ಕೆ ನೀಡಿದ ಮೊದಲ ಹೇಳಿಕೆಯಲ್ಲಿ, ʻತಾವು ಶ್ರೆತ್ತಾ ಅವರ ವಜಾಗೊಳಿಸುವಿಕೆ ಯಿಂದ ದುಃಖ ಮತ್ತು ಗೊಂದಲಕ್ಕೆ ಒಳಗಾಗಿದ್ದೇನೆ. ಆದರೆ, ಇದು ಮುನ್ನಡೆಯಬೇಕಾದ ಸಮಯ ಎಂದು ನಿರ್ಧರಿಸಿದೆ,ʼ ಎಂದು ಹೇಳಿದರು.

ʻನಾನು ಶ್ರೆತ್ತಾ, ಕುಟುಂಬ ಮತ್ತು ಪಕ್ಷದವರೊಂದಿಗೆ ಮಾತನಾಡಿದೆ. ದೇಶ ಮತ್ತು ಪಕ್ಷಕ್ಕಾಗಿ ಏನನ್ನಾದರೂ ಮಾಡಲು ಇದು ಸಮಯ ಎಂದು ನಿರ್ಧರಿಸಿದೆ. ದೇಶವನ್ನು ಮುನ್ನಡೆಸಲು ನನ್ನ ಕೈಲಾದಷ್ಟು ಮಾಡಬಹುದು ಎಂದು ಭಾವಿಸಿದ್ದೇನೆ ಮತ್ತು ಅದನ್ನು ಮಾಡಲು ಪ್ರಯತ್ನಿಸುತ್ತೇನೆ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು.

ಒಂದು ವರ್ಷಕ್ಕೆ ಮೊದಲೇ ಶ್ರೆತ್ತಾ ಅವರ ಸರ್ಕಾರದ ಪತನವು ಪೆಟಾಂಗ್ಟಾರ್ನ್ ಎದುರಿಸಬಹುದಾದ ಹಗೆತನಕ್ಕೆ ಸೂಚನೆಯಾಗಿದೆ. ಥಾಯ್ಲೆಂಡ್ ಅನೇಕ ಸರ್ಕಾರ- ಪ್ರಧಾನಿಗಳನ್ನು ಪದಚ್ಯುತಗೊಳಿಸಿದ ದಂಗೆಗಳು ಮತ್ತು ನ್ಯಾಯಾಲಯದ ತೀರ್ಪುಗಳ ಪ್ರಕ್ಷುಬ್ಧ ವೃತ್ತದಲ್ಲಿ ಸಿಕ್ಕಿಹಾಕಿಕೊಂಡಿದೆ. .

ಶ್ರೆತ್ತಾ ಅವರ ಪದಚ್ಯುತಿ: 40 ಸೆನೆಟರ್‌ಗಳು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಬ್ಯಾಂಕಾಕಿನ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರು, 6-3 ಮತಗಳಿಂದ ಫ್ಯೂ ಥಾಯ್ ಪಕ್ಷದ ಶ್ರೆತ್ತಾ ಅವರನ್ನು ಬುಧವಾರ ತೆಗೆದುಹಾಕಿದರು. ಅವರು 16 ವರ್ಷಗಳಲ್ಲಿ ಪದಚ್ಯುತಗೊಂಡ ನಾಲ್ಕನೇ ಪ್ರಧಾನಿ ಆಗಿದ್ದಾರೆ.

ಶ್ರೆತ್ತಾ 2008ರಲ್ಲಿ ನ್ಯಾಯಾಲಯದ ನಿಂದನೆಗಾಗಿ ಆರು ತಿಂಗಳ ಕಾಲ ಜೈಲಿನಲ್ಲಿದ್ದ ಮಾಜಿ ವಕೀಲ ಪಿಚಿತ್ ಚುಯೆನ್‌ಬಾನ್ ಅವರ ನೇಮಕಕ್ಕೆ ಮುಂದಾಗಿದ್ದರಿಂದ, ಸೆನೆಟರ್‌ಗಳು ಅಸಮಾಧಾನಗೊಂಡಿದ್ದರು.‌ ಪಿಚಿತ್ ನ್ಯಾಯಾಲಯದ ಅಧಿಕಾರಿಗಳಿಗೆ 2 ದಶಲಕ್ಷ ಬಹ್ತ್ ನೀಡಲು ಮುಂದಾಗಿದ್ದರು ಎಂದು ಆರೋಪಿಸಿದರು.

ವ್ಯಾಪಾರದಿಂದ ರಾಜಕೀಯಕ್ಕೆ: ಪೆಟಾಂಗ್ಟಾರ್ನ್ ಶತಕೋಟ್ಯಧಿಪತಿ ಥಕ್ಸಿನ್(75) ಅವರ ಕಿರಿಯ ಮಗಳು. ಥ‌ಕ್ಸಿನ್ ಫ್ಯೂ ಥಾಯ್ ಪಕ್ಷದ ಸಂಸ್ಥಾಪಕರಾಗಿದ್ದು, ಶ್ರೆತ್ತಾ ಅವರೊಟ್ಟಿಗೆ ಸಂಬಂಧ ಹೊಂದಿದ್ದರು. ಬ್ಯಾಂಕಾಕಿನ ಚುಪೇಟಾಂಗ್ಟಾರ್ನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿ, ಕುಟುಂಬದ ಹೋಟೆಲ್‌ಗಳನ್ನು ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ(2021) ಫ್ಯೂ ಥಾಯ್ ಪಕ್ಷಕ್ಕೆ ಸೇರ್ಪಡೆಯಾದರು. 2023 ರ ಚುನಾವಣೆಗೆ ಎರಡು ವಾರಗಳ ಮೊದಲು ಎರಡನೇ ಮಗುವಿಗೆ ಜನ್ಮ ನೀಡಿದರು.

ಸವಾಲಿನ ಹಾದಿ: ಅವರ ಅಧಿಕಾರಾವಧಿ ಸವಾಲಿನದ್ದಾಗಿದೆ. ಥೈಲ್ಯಾಂಡಿನ ಆರ್ಥಿಕತೆ, ಪಕ್ಷದ ಕ್ಷೀಣಿಸುತ್ತಿರುವ ಜನಪ್ರಿಯತೆ ಮತ್ತು ವಿರೋಧ ಪಕ್ಷದ ಜನಪ್ರಿಯತೆ ಹೆಚ್ಚಳವನ್ನು ಎದುರಿಸಬೇಕಿದೆ. ʻಇಂತಹ ನಿರ್ಣಾಯಕ ಹಂತದಲ್ಲಿ ಪೆಟಾಂಗ್ಟಾರ್ನ್ ನೇಮಕ ವಿಶ್ಲೇಷಕರನ್ನು ಆಶ್ಚರ್ಯಗೊಳಿಸಿದೆ. ತನ್ನ ಮತ್ತು ಸಹೋದರಿಯ ಅವನತಿಗೆ ಕಾರಣವಾದ ಸ್ಪರ್ಧೆಗೆ ಮಗಳನ್ನು ಒಡ್ಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಅವರ ಸರ್ಕಾರಗಳನ್ನು ಮಿಲಿಟರಿ ಕೆಳಗಿಳಿಸಿದ ಬಳಿಕ ಇಬ್ಬ ರೂ ಜೈಲಿನಿಂದ ತಪ್ಪಿಸಿಕೊಳ್ಳಲು, ದೇಶ ಬಿಟ್ಟು ಓಡಿಹೋದರುʼ ಎಂದು ಮೂಲಗಳು ಹೇಳಿವೆ. 

Tags:    

Similar News