11 ವರ್ಷದ ಮಗನನ್ನು ಡಿಸ್ನಿಲ್ಯಾಂಡ್ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ ಭಾರತ ಮೂಲದ ಮಹಿಳೆ
ಮಗನನ್ನು ಕೊಂದ ನಂತರ, ತಾನೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಮಗನನ್ನು ರಕ್ಷಿಸಲು ಸಾಧ್ಯವಾಗಿಲ್ಲ.;
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ತಮ್ಮ 11 ವರ್ಷದ ಮಗನನ್ನು ನಿರ್ದಯವಾಗಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಸರಿತಾ ರಾಮರಾಜು ಎಂಬವರು ತಮ್ಮ ಮಗನನ್ನು ಡಿಸ್ನಿಲ್ಯಾಂಡ್‌ಗೆ ಮೂರು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಯೇ ಹೋಟೆಲ್‌ನಲ್ಲಿ ಮಗನ ಕತ್ತು ಸೀಳಿ ಕೊಲೆ ಮಾಡಿರುವುದು ಪೋಲಿಸರಿಗೆ ತಿಳಿದುಬಂದಿದೆ.
ಮಗನನ್ನು ಕೊಂದ ನಂತರ, ಆಕೆ ತಾನೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸರಿತಾ ರಾಮರಾಜು ಅವರು 2018ರಲ್ಲಿ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದರು. ಮಗನು ತಂದೆಯ ಜೆತೆಯಲ್ಲಿದ್ದು, ಕೆಲ ದಿನಗಳ ಹಿಂದೆ ಮಗನನ್ನು ಭೇಟಿಯಾಗಿದ್ದಳು. ಕೆಲವು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಳು.
ಡಿಸ್ನಿಲ್ಯಾಂಡ್‌ಗೆ ಆಕೆ ಮೂರು ದಿನಗಳ ಪಾಸ್ ಖರೀದಿಸಿದ್ದಾಗಿ ಪತ್ತೆಯಾಗಿದೆ. ಬಾಲಕ ಕೂಡ ತಾಯಿಯ ಜತೆ ಖುಷಿಯಿಂದ ಪ್ರವಾಸಕ್ಕೆ ತೆರಳಿದ್ದ. ಸ್ಯಾಂಟಾ ಅನಾ ಎಂಬ ಸ್ಥಳದ ಹೋಟೆಲ್‌ನಲ್ಲಿ ತಂಗಿದ್ದ ಈ ದಂಪತಿ, ಮಾರ್ಚ್ 19ರಂದು ಹಿಂದಿರುಗಬೇಕಾಗಿತ್ತು. ಆದರೆ, ಅದಕ್ಕೂ ಮುನ್ನ ಈ ದುರ್ಘಟನೆ ನಡೆದಿದೆ.
ಅತ್ಯಂತ ವಿಚಿತ್ರವೆಂದರೆ, ಮಗನನ್ನು ಕೊಂದ ನಂತರ ತಾನೇ ಪೊಲೀಸರಿಗೆ ಕರೆಮಾಡಿ ವಿಷಯವನ್ನು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಗನನ್ನು ಕೊಲ್ಲಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತನಿಖೆ ಮುಂದುವರಿದಿದ್ದು, ದೋಷಿ ಎನ್ನಲಾಗಿರುವ ಸರಿತಾ ರಾಮರಾಜು ಅವರಿಗೆ ಕಾನೂನು ಪ್ರಕಾರ, 25 ವರ್ಷ ಜೈಲು ಶಿಕ್ಷೆ ವಿಧಿಸಬಹುದೆಂದು ಮೂಲಗಳು ತಿಳಿಸಿವೆ.