Georgia : ವಿಷಾನಿಲ ಸೇವನೆ ಶಂಕೆ; ಜಾರ್ಜಿಯಾದ ರೆಸ್ಟೋರೆಂಟ್​ನಲ್ಲಿ 12 ಭಾರತೀಯರ ದುರ್ಮರಣ

Georgia : ಮೃತಪಟ್ಟ ಎಲ್ಲಾ 12 ಮಂದಿ ಭಾರತೀಯ ಪ್ರಜೆಗಳು ಎಂದು ಟಿಬಿಲಿಸಿಯಲ್ಲಿರುವ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯವು 11 ವಿದೇಶಿಯರು ಮತ್ತು ಒಬ್ಬರು ಜಾರ್ಜಿಯಾ ಪ್ರಜೆ ಎಂದು ಹೇಳಿದ್ದಾರೆ.;

Update: 2024-12-16 14:11 GMT
ಘಟನೆ ನಡೆದ ರೆಸ್ಟೋರೆಂಟ್​ನ ಹೊರಭಾಗ.

ಜಾರ್ಜಿಯಾ ದೇಶದ ಪರ್ವತ ರೆಸಾರ್ಟ್ ಗುಡೌರಿಯ ರೆಸ್ಟೋರೆಂಟ್​ ಒಂದರಲ್ಲಿ ಹನ್ನೆರಡು ಭಾರತೀಯ ಪ್ರಜೆಗಳ ಮೃತದೇಹ ಪತ್ತೆಯಾಗಿದೆ ಎಂದು ರಾಜಧಾನಿ ಟಿಬಿಲಿಸಿಯಲ್ಲಿನ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ.

ಪೊಲೀಸರ ತನಿಖೆಯಲ್ಲಿ ಗಾಯ ಅಥವಾ ಹಿಂಸಾಚಾರ ನಡೆದಿರುವ ಗುರುತುಗಳು ಕಂಡುಬಂದಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಸೋಮವಾರ (ಡಿಸೆಂಬರ್ 16) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅವರೆಲ್ಲರೂ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿವೆ.

ಬೆಡ್​ರೂಮ್​ನಲ್ಲಿ ಶವಗಳು ಪತ್ತೆ

ಮೃತಪಟ್ಟ ಎಲ್ಲಾ 12 ಮಂದಿ ಭಾರತೀಯ ಪ್ರಜೆಗಳು ಎಂದು ಟಿಬಿಲಿಸಿಯಲ್ಲಿರುವ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯವು 11 ವಿದೇಶಿಯರು ಮತ್ತು ಒಬ್ಬರು ಜಾರ್ಜಿಯಾ ಪ್ರಜೆ ಎಂದು ಹೇಳಿದ್ದಾರೆ.

ಮೃತಪಟ್ಟವರು ಭಾರತೀಯ ರೆಸ್ಟೋರೆಂಟ್​ನ ಉದ್ಯೋಗಿಗಳು. ಅವರಿಗೆ ಉಳಿದುಕೊಳ್ಳುವುದಕ್ಕೆ ನೀಡಲಾಗಿದ್ದ ಕೊಠಡಿಯ ಎರಡನೇ ಮಹಡಿಯಲ್ಲಿ ಅವರ ಶವಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಜಿಯಾದ ಗುಡೌರಿಯಲ್ಲಿ 12 ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಹೈಕಮಿಷನ್ ಈಗಷ್ಟೆ ತಿಳಿದುಕೊಂಡಿದೆ. ಪ್ರಾಣ ಕಳೆದುಕೊಂಡ ಭಾರತೀಯ ಪ್ರಜೆಗಳ ವಿವರಗಳನ್ನು ಪಡೆಯಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು" ಎಂದು ಭಾರತೀಯ ಮಿಷನ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ನಿರ್ಲಕ್ಷ್ಯದ ಹತ್ಯೆ" ಕಾನೂನಿನಡಿ ಕೇಸ್ ದಾಖಲು

ಜಾರ್ಜಿಯಾದ ಕ್ರಿಮಿನಲ್ ಕೋಡ್​ನ ಆರ್ಟಿಕಲ್ 116 ರ ಅಡಿಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದು ನಿರ್ಲಕ್ಷ್ಯದ ನರಹತ್ಯೆ ಎಂದಾಗುತ್ತದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಜನರೇಟರ್ ಅನ್ನು ಮಲಗುವ ಕೋಣೆಗಳ ಬಳಿ ಮುಚ್ಚಿದ ಜಾಗದಲ್ಲಿ ಇರಿಸಲಾಗಿತ್ತು, ಬಹುಶಃ ಶುಕ್ರವಾರ ರಾತ್ರಿ ಕರೆಂಟ್ ಹೋಗಿದೆ ಎಂದು ಅದನ್ನು ಆನ್ ಮಾಡಲಾಗಿತ್ತು.

ಸಾವಿಗೆ ನಿಖ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ವೈದ್ಯಕೀಯ ಪರೀಕ್ಷೆಯನ್ನು ಸಹ ನೇಮಿಸಲಾಗಿದೆ. ತನಿಖಾ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Tags:    

Similar News