Srilanka PM : 20 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಶ್ರೀಲಂಕಾ ನೂತನ ಪ್ರಧಾನಿ ಡಾ. ಹರಿಣಿ ಅಮರಸೂರ್ಯ
ದ್ವೀಪ ರಾಷ್ಟ್ರದ ರಾಜಧಾನಿಯಲ್ಲಿರುವ ಅಧ್ಯಕ್ಷೀಯ ಸಚಿವಾಲಯದಲ್ಲಿ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ಪ್ರಮಾಣವಚನ ಬೋಧಿಸಿದರು. ಹೊಸ ಕ್ಯಾಬಿನೆಟ್‌ನಲ್ಲಿ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಖಾತೆಗಳನ್ನು ಪ್ರಧಾನಿ ಡಾ.ಹರಿಣಿ ವಹಿಸಿಕೊಂಡಿದ್ದಾರೆ.;
ಇತ್ತೀಚೆಗೆ ನಡೆದ ಶ್ರೀಲಂಕಾದ ಸಂಸತ್ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ತನ್ನ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಿದೆ. ಸಮಾಜವಾದಿ, ಶಿಕ್ಷಣ ತಜ್ಞೆ ಹಾಗೂ ಹೋರಾಟಗಾರ್ತಿ ಡಾ. ಹರಿಣಿ ಅಮರಸೂರ್ಯ ಅವರು ಮುಂದಿನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ 20 ಸಚಿವರು ಕೂಡ ನೂತನ ಕ್ಯಾಬಿನೆಟ್ ಸೇರಿಕೊಂಡಿದ್ದಾರೆ. ಅವರೆಲ್ಲರೂ ಸೋಮವಾರ (ನವೆಂಬರ್ 18) ಬೆಳಗ್ಗೆ ಕೊಲಂಬೊದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ದ್ವೀಪ ರಾಷ್ಟ್ರದ ರಾಜಧಾನಿಯಲ್ಲಿರುವ ಅಧ್ಯಕ್ಷೀಯ ಸಚಿವಾಲಯದಲ್ಲಿ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ಪ್ರಮಾಣವಚನ ಬೋಧಿಸಿದರು. ಹೊಸ ಕ್ಯಾಬಿನೆಟ್‌ನಲ್ಲಿ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಖಾತೆಗಳನ್ನು ಪ್ರಧಾನಿ ಡಾ.ಹರಿಣಿ ವಹಿಸಿಕೊಂಡಿದ್ದಾರೆ.
ವಿಜಿತಾ ಹೆರಾತ್ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಅವರು ವಿದೇಶಿ ಉದ್ಯೋಗ ಮತ್ತು ಪ್ರವಾಸೋದ್ಯಮವನ್ನು ಸಹ ನಿರ್ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೊಸ ಕ್ಯಾಬಿನೆಟ್‌ನಲ್ಲಿ ಪ್ರಧಾನ ಮಂತ್ರಿ ಸೇರಿದಂಥೆ ಕೆಲವು ಶಿಕ್ಷಣ ತಜ್ಞರು ಇದ್ದಾರೆ. ಪ್ರೊ.ಚಂದನಾ ಅಬೆರತ್ನ ಅವರು ರಾಜ್ಯ ಆಡಳಿತ, ಪ್ರಾಂತೀಯ ಮಂಡಳಿಗಳು ಮತ್ತು ಸ್ಥಳೀಯ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ.
ನಳಿಂದಾ ಜಯತಿಸ್ಸಾ ಅವರಿಗೆ ಆರೋಗ್ಯ ಮತ್ತು ಸಮೂಹ ಮಾಧ್ಯಮ ಖಾತೆಗಳನ್ನು ನೀಡಲಾಗಿದೆ.
ಪ್ರೊ.ಕ್ರಿಶಾಂತ ಅಬೆಸೇನಾ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರೆ, ಪ್ರೊ.ಅನಿಲ್ ಜಯಂತ ಫರ್ನಾಂಡೊ ಕಾರ್ಮಿಕ ಸಚಿವರಾಗಿದ್ದಾರೆ. ಡಾ.ದಮ್ಮಿಕಾ ಪಟಬೆಂಡಿ ಅವರನ್ನು ಪರಿಸರ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ.
ಆನಂದ ವಿಜೆಪಾಲ ಅವರು ಸಾರ್ವಜನಿಕ ಭದ್ರತೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ. ಉಪ ಮಂತ್ರಿಗಳನ್ನು ನಂತರ ನೇಮಿಸಲಾಗುವುದು ಎಂದು ವರದಿಗಳು ತಿಳಸಿವೆ.