PM Modi Singapore visit| ಸಿಂಗಾಪುರದಲ್ಲಿ ತಿರುವಳ್ಳುವರ್ ಕೇಂದ್ರ, ಇನ್ವೆಸ್ಟ್ ಇಂಡಿಯಾ ಕಚೇರಿ

ಸಿಂಗಾಪುರದಲ್ಲಿ ಇನ್ವೆಸ್ಟ್ ಇಂಡಿಯಾ ಕಚೇರಿ ಸ್ಥಾಪಿಸಲಾಗುತ್ತದೆ. ಇದು ಹೂಡಿಕೆದಾರರಿಗೆ ನೆರವಾಗಲಿದೆ. ವಿಶ್ವದ ಮೊದಲ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದರು.

Update: 2024-09-05 13:24 GMT
ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು.ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಉಪಸ್ಥಿತರಿದ್ದರು.

ಸಿಂಗಾಪುರ: ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಬಾಂಧವ್ಯವನ್ನು ವೃದ್ಧಿಸಲು ಸಿಂಗಾಪುರದಲ್ಲಿ ವಿಶ್ವದ ಮೊದಲ ತಿರುವಳ್ಳುವರ್ ಕೇಂದ್ರವನ್ನು ಮತ್ತು ಇನ್ವೆಸ್ಟ್ ಇಂಡಿಯಾ ಕಚೇರಿಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದ್ದಾರೆ. 

ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಬಂದಿರುವ ಮೋದಿ, ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗೆ ಸಭೆ ನಡೆಸಿದರು. ಪ್ರಧಾನಿ ವಾಂಗ್ ಅವರು ಮೋದಿ ಅವರ ಗೌರವಾರ್ಥ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪೂರ್ವ), ಜೈದೀಪ್ ಮಜುಂದಾರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. 

ʻ ಮೋದಿಯವರಿಗೆ ಸಂಸತ್ ಭವನದಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಯಿತು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಫಿನ್‌ಟೆಕ್ ಮತ್ತು ಡಿಜಿಟಲ್ ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಕುರಿತು ಚರ್ಚಿಸಿದರು. ಸೆಮಿಕಂಡಕ್ಟರ್‌, ಡಿಜಿಟಲ್ ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ನಾಲ್ಕು ತಿಳಿವಳಿಕೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು,ʼ ಎಂದು ಹೇಳಿದರು. 

ʻವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸಲು ಸಿಂಗಾಪುರದಲ್ಲಿ ಇನ್ವೆಸ್ಟ್ ಇಂಡಿಯಾ ಕಚೇರಿ ಸ್ಥಾಪಿಸಲಾಗುತ್ತದೆ. ಇದು ಸಿಂಗಾಪುರದಲ್ಲಿ ಹೂಡಿಕೆದಾರರಿಗೆ ನೆರವಾಗಲಿದೆ. ವಿಶ್ವದ ಮೊದಲ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು,ʼ ಎಂದು ಅವರು ತಿಳಿಸಿದ್ದಾರೆ. 

ಸಾಂಸ್ಕೃತಿಕ ಕೇಂದ್ರದ ಯಾವಾಗ ಆರಂಭಗೊಳ್ಳಲಿದೆ ಎಂಬ ಪ್ರಶ್ನೆಗೆ, ʻಶೀಘ್ರವಾಗಿ ಮಾಡಲು ಉತ್ಸುಕವಾಗಿದೆ,ʼ ಎಂದು ಹೇಳಿದರು. ಮೋದಿ ಅವರು ವಾಂಗ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದು, ಅವರು ಒಪ್ಪಿಕೊಂಡಿದ್ದಾರೆ. 

ಪ್ರಧಾನಿ ಮೋದಿ ಅವರು ವಾಂಗ್ ಅವರೊಂದಿಗೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಪ್ರಮುಖ ಕಂಪನಿಗೆ ಭೇಟಿ ನೀಡಿದರು. ಸೆಪ್ಟೆಂಬರ್ 11-13 ರಿಂದ ಭಾರತದಲ್ಲಿ ನಡೆಯಲಿರುವ SEMICIONB ಇಂಡಿಯಾ ಪ್ರದರ್ಶನ ಮತ್ತು ಸಮ್ಮೇಳನಕ್ಕೆ ಸಿಇಒ ಗಳನ್ನು ಆಹ್ವಾನಿಸಿದರು.

ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾದ ಪ್ರಾಬಲ್ಯ ಹೆಚ್ಚಳ ಕುರಿತು ಚರ್ಚಿಸಲಾಗಿದೆಯೇ ಎಂದು ಕೇಳಿದಾಗ, ʻಶಾಂತಿ, ಸ್ಥಿರತೆ ಮತ್ತು ಮುಕ್ತ ವಾಣಿಜ್ಯ ಭಾರತ ಮತ್ತು ಸಿಂಗಾಪುರ ಎರಡಕ್ಕೂ ಪ್ರಮುಖ ವಿಷಯ,ʼ ಎಂದರು. ಆಂಧ್ರಪ್ರದೇಶದ ಅಮರಾವತಿ ರಾಜಧಾನಿ ವಿಚಾರವಾಗಿ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದು ಹೇಳಿದರು.

Tags:    

Similar News