ಪೋಪ್ ಫ್ರಾನ್ಸಿಸ್ಗೆ ಕಿಡ್ನಿ ವೈಫಲ್ಯ, ಆರೋಗ್ಯ ಸ್ಥಿತಿ ಗಂಭೀರ
ಜಗತ್ತಿನ ವಿವಿಧ ಭಾಗಗಳಿಂದ ಪೋಪ್ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಯುತ್ತಿವೆ. ಅವರ ತವರು ಅರ್ಜೆಂಟೀನಾದಿಂದ ಹಿಡಿದು ರೋಮ್‌ನ ಶಾಲಾ ಮಕ್ಕಳು ಅವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.;
ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಅವರಿಗೆ ಪ್ರಾಥಮಿಕ ಹಂತದ ಮೂತ್ರ ಪಿಂಡ ವೈಫಲ್ಯ ಕಂಡು ಬಂದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 88 ವರ್ಷದ ಫ್ರಾನ್ಸಿಸ್ ಅವರಿಗೆ ನ್ಯೂಮೋನಿಯಾ ಮತ್ತು ಸಂಕೀರ್ಣ ಶ್ವಾಸಕೋಶದ ಸೋಂಕು ಕೂಡ ಬಾಧಿಸಿದೆ.
ಅನಾರೋಗ್ಯದ ನಡುವೆಯೂ ಪೋಪ್ ಫ್ರಾನ್ಸಿಸ್ ಅವರು ಜಾಗೃತ ಸ್ಥಿತಿಯಲ್ಲಿದ್ದಾರೆ. ಅವರು ಮದುವೆ ಕಾರ್ಯಕ್ರಮವೊಂದಕ್ಕೆ ಆಶೀರ್ವದಿಸಿದ್ದಾರೆ ಎಂದು ವ್ಯಾಟಿಕನ್ ಸಿಟಿಯ ಮೂಲಗಳು ತಿಳಿಸಿವೆ.
ಪೊಪ್ಗೆ ಎದುರಾಗಿರುವ ಕಿಡ್ನಿ ವೈಫಲ್ಯ ಸಮಸ್ಯೆಯನ್ನು ವೈದ್ಯರು ನಿಯಂತ್ರಣದಲ್ಲಿ ಇಟ್ಟಿದ್ದಾರೆ. ಗಂಭೀರ ಅನಾರೋಗ್ಯದ ನಡುವೆಯೂ ಪೋಪ್ ಪ್ರಾರ್ಥನೆ ಮತ್ತು ಧಾರ್ಮಿಕ ಸೇವೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ.
ವ್ಯಾಟಿಕನ್‌ನ ಅಧಿಕೃತ ಪ್ರಕಟಣೆಯ ಪ್ರಕಾರ, ಪೋಪ್ ಅವರಿಗೆ ನೇರ ಆಮ್ಲಜನಕ ಪೂರಕ ಮಾಡಲಾಗುತ್ತಿದೆ. ಆದರೂ ಅವರ ಆರೋಗ್ಯ ನಿಧಾನಕ್ಕೆ ಹದಗೆಡುತ್ತಿದೆ.
ಜಗತ್ತಿನೆಲ್ಲೆಡೆ ಪ್ರಾರ್ಥನೆ
ಜಗತ್ತಿನ ವಿವಿಧ ಭಾಗಗಳಿಂದ ಪೋಪ್ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಯುತ್ತಿವೆ. ಅವರ ತವರು ಅರ್ಜೆಂಟೀನಾದಿಂದ ಹಿಡಿದು ರೋಮ್‌ನ ಶಾಲಾ ಮಕ್ಕಳು ಅವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಪೋಪ್ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಎಚ್ಚರಿಕೆಯಿಂದ ನೋಡುತ್ತಿದ್ದಾರೆ. ಅವರ ಪೂರ್ವನಿಯೋಜಿತ ಧಾರ್ಮಿಕ ವಿಧಿಗಳನ್ನು ಮತ್ತೊಬ್ಬರು ಧಾರ್ಮಿಕ ಗುರು ನಿರ್ವಹಿಸುತ್ತಿದ್ದಾರೆ.