BAPA Hindu Temple: ಅಮೆರಿಕದಲ್ಲಿ ಮತ್ತೊಂದು ದೇವಸ್ಥಾನದ ಮೇಲೆ ದಾಳಿ

ಬಾಪ್ಸ್​ ಮೂಲಗಳು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದಂತೆ, ಚಿನೋ ಹಿಲ್ಸ್‌ನ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ದುಷ್ಕರ್ಮಿಗಳು ಅವಮಾನಿಸಿದ್ದಾರೆ. ಈ ದ್ವೇಷವನ್ನು ಮುಂದುವರಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.;

Update: 2025-03-09 04:56 GMT

ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ. ಕ್ಯಾಲಿಫೋರ್ನಿಯಾದ (California) ಚಿನೋ ಹಿಲ್ಸ್ ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು (BAPS Hindu Temple) ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದೇವಾಲಯದ ಗೋಡೆ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆಯಲಾಗಿದ್ದು, ‘ಹಿಂದೂಗಳು ತಮ್ಮ ದೇಶಖ್ಕೆ ಹಿಂತಿರುಗಬೇಕು,'' ಎಂದು ಒತ್ತಾಯಿಸಿದ್ದಾರೆ.


ಈ ಮಾಹಿತಿಯನ್ನು ಬಿಎಪಿಎಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದು. ದ್ವೇಷ ಬೇರು ಬೆಳೆಯಲು ಎಂದಿಗೂ ಬಿಡುವುದಿಲ್ಲ.ಶಾಂತಿ ಮತ್ತು ಸಹಾನುಭೂತಿ ಗೆಲ್ಲಲಿದೆ ಎಂದು ಬರೆದುಕೊಂಡಿದೆ.

ಮಾರ್ಚ್ 9ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಬಿಎಪಿಎಸ್‌ನ ಸ್ವಾಮಿನಾರಾಯಣ ಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹಾಳುಗೆಡವಿದ್ದಾರೆ. ದಾಳಿ ಸಮಯದಲ್ಲಿ, ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆ ಬರೆಯಲಾಗಿದೆ. ಪ್ರಧಾನಿ ಮೋದಿಯನ್ನೂ ನಿಂದಿಸಲಾಗಿದೆ. ದೇವಾಲಯದ ಆವರಣವನ್ನು ಅಪವಿತ್ರಗೊಳಿಸುವ ಪ್ರಯತ್ನವೂ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಪೋಸ್ಟ್‌ ಮಾಡಿರುವ ಬಿಎಪಿಎಸ್‌ “ ಮಂದಿರದ ಪಾವಿತ್ರ್ಯ ಹಾಳು ಮಾಡುವ ಉದ್ದೇಶದ ಹೊರತಾಗಿಯೂ ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಲ್ಲಲಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ, ನಾವು ಎಂದಿಗೂ ದ್ವೇಷ ಬೇರೂರಲು ಬಿಡುವುದಿಲ್ಲ. ನಮ್ಮ ಸಾಮಾನ್ಯ ಮಾನವೀಯ ಮತ್ತು ನಂಬಿಕೆ ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸಲಿದೆ ಎಂದು ಪೋಸ್ಟ್‌ ಮಾಡಿದೆ.

ಕಳೆದ ವರ್ಷವೂ ಅಮೆರಿಕದಲ್ಲಿ ಹಿಂದೂ ದೇವಾಲಯಗಳಲ್ಲಿ ಧ್ವಂಸ ಘಟನೆಗಳು ವರದಿಯಾಗಿದ್ದವು. ಇದೇ ರೀತಿಯ ಘಟನೆ ಸೆಪ್ಟೆಂಬರ್ 25 ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸುವ ಪ್ರಯತ್ನ ನಡೆದಿತ್ತು. 

Tags:    

Similar News