ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು ತರಗತಿಗೆ ಚಕ್ಕರ್ ಹೊಡೆದರೆ ವೀಸಾ ರದ್ದು
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು ತರಗತಿಗೆ ಚಕ್ಕರ್ ಹೊಡೆದರೆ ವೀಸಾ ರದ್ದು No skipping classes for Indian students in the US; they may lose visa ಭಾರತದಲ್ಲಿರುವ ಅಮೆರಿಕದ ದೂತಾವಾಸವು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ವಿದ್ಯಾರ್ಥಿಗಳು ತಮ್ಮ ವೀಸಾ ನಿಯಮಗಳನ್ನು ಯಾವಾಗಲೂ ಪಾಲಿಸಬೇಕು ಎಂದು ಮನವಿ ಮಾಡಿದೆ. ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ನೀಡಿದೆ. ತರಗತಿಗಳನ್ನು ತಪ್ಪಿಸಿದರೆ, ಕೋರ್ಸ್ ಮಧ್ಯದಲ್ಲಿ ಬಿಟ್ಟರೆ ಅಥವಾ ತಮ್ಮ ಶಾಲೆಗೆ ಮಾಹಿತಿ ನೀಡದೆ ಅಧ್ಯಯನವನ್ನು ತೊರೆದರೆ, ಅವರ ವಿದ್ಯಾರ್ಥಿ ವೀಸಾ ರದ್ದಾಗಲಿದೆ. ಅಲ್ಲದೆ, ಭವಿಷ್ಯದಲ್ಲಿ ಅಮೆರಿಕದ ವೀಸಾ ಪಡೆಯುವ ಅರ್ಹತೆ ಕಳೆದುಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ. ಟ್ರಂಪ್ ಆಡಳಿತದ ಅವಧಿಯಲ್ಲಿ ವಲಸೆ ಕಾನೂನುಗಳ ಕಟ್ಟುನಿಟ್ಟಾದ ಜಾರಿಯ ನಡುವೆ ಮಂಗಳವಾರ ಈ ಘೋಷಣೆ ಹೊರಬಿದ್ದಿದೆ. ಭಾರತದಲ್ಲಿರುವ ಅಮೆರಿಕದ ದೂತಾವಾಸವು ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ವಿದ್ಯಾರ್ಥಿಗಳು ತಮ್ಮ ವೀಸಾ ನಿಯಮಗಳನ್ನು ಯಾವಾಗಲೂ ಪಾಲಿಸಬೇಕು ಮತ್ತು ವಿದ್ಯಾರ್ಥಿ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದೆ. "ನೀವು ಕೋರ್ಸ್ ಮಧ್ಯದಲ್ಲಿ ಬಿಟ್ಟರೆ, ತರಗತಿಗಳನ್ನು ತಪ್ಪಿಸಿದರೆ ಅಥವಾ ನಿಮ್ಮ ಶಾಲೆಗೆ ಮಾಹಿತಿ ನೀಡದೆ ಅಧ್ಯಯನವನ್ನು ತೊರೆದರೆ, ನಿಮ್ಮ ವಿದ್ಯಾರ್ಥಿ ವೀಸಾ ರದ್ದಾಗಬಹುದು ಮತ್ತು ಭವಿಷ್ಯದಲ್ಲಿ ಅಮೆರಿಕದ ವೀಸಾ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳಬಹುದು. ಯಾವುದೇ ಸಮಸ್ಯೆ ತಪ್ಪಿಸಲು ಯಾವಾಗಲೂ ನಿಮ್ಮ ವೀಸಾ ನಿಯಮಗಳನ್ನು ಪಾಲಿಸಿ ಮತ್ತು ವಿದ್ಯಾರ್ಥಿ ಸ್ಥಿತಿಯನ್ನು ಕಾಯ್ದುಕೊಳ್ಳಿ," ಎಂದು ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಗಡಿಪಾರು ಭೀತಿ ಮತ್ತು ಕಾನೂನು ಹೋರಾಟ ಈ ಎಚ್ಚರಿಕೆಯ ನಡುವೆ, ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಸಮರ ಗೆದ್ದಿರುವ ಹಲವಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದೆ. ಗುರುವಾರ (ಮೇ 22) ಓಕ್ಲ್ಯಾಂಡ್‌ನ ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ಜೆಫ್ರಿ ಎಸ್ ವೈಟ್, ಪ್ರಕರಣ ಪರಿಹಾರವಾಗುವವರೆಗೆ ಸರ್ಕಾರವು ವಿದ್ಯಾರ್ಥಿಗಳನ್ನು ಬಂಧಿಸುವುದು, ಜೈಲಿನಲ್ಲಿ ಇಡುವುದು ಅಥವಾ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಹೇಳಿದ್ದಾರೆ. ಈ ತೀರ್ಪು ಸರ್ಕಾರವು ವಿದ್ಯಾರ್ಥಿಗಳನ್ನು ಬಂಧಿಸುವುದು ಅಥವಾ ಇತರ ಕಾರಣಗಳಿಗಾಗಿ ಅವರ ಕಾನೂನು ಸ್ಥಿತಿಯನ್ನು ರದ್ದುಗೊಳಿಸುವುದನ್ನು ತಡೆಯುವುದಿಲ್ಲ. ಅಮೆರಿಕದ ದೂತಾವಾಸವು ಈ ಹಿಂದೆ ಮೇ 17ರಂದು ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ, "ನೀವು ಅಮೆರಿಕದಲ್ಲಿ ಅನುಮತಿಸಲಾದ ಅವಧಿಗಿಂತ ಹೆಚ್ಚು ಕಾಲ ಉಳಿದರೆ, ನಿಮ್ಮನ್ನು ಗಡಿಪಾರು ಮಾಡಬಹುದು ಮತ್ತು ಭವಿಷ್ಯದಲ್ಲಿ ಅಮೆರಿಕಕ್ಕೆ ಪ್ರಯಾಣಿಸುವುದಕ್ಕೆ ಶಾಶ್ವತ ನಿಷೇಧವನ್ನು ಎದುರಿಸಬಹುದು," ಎಂದು ಎಚ್ಚರಿಕೆ ನೀಡಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಇತ್ತೀಚಿನ ವೀಸಾ ರದ್ದತಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶೇ. 50ರಷ್ಟು ಇದ್ದಾರೆ ಎಂಬುದೇ ಆತಂಕದ ವಿಷಯ.;
ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ನೀಡಿದೆ. ತರಗತಿಗಳನ್ನು ತಪ್ಪಿಸಿದರೆ, ಕೋರ್ಸ್ ಮಧ್ಯದಲ್ಲಿ ಬಿಟ್ಟರೆ ಅಥವಾ ತಮ್ಮ ಶಾಲೆಗೆ ಮಾಹಿತಿ ನೀಡದೆ ಅಧ್ಯಯನವನ್ನು ತೊರೆದರೆ, ಅವರ ವಿದ್ಯಾರ್ಥಿ ವೀಸಾ ರದ್ದಾಗಲಿದೆ. ಅಲ್ಲದೆ, ಭವಿಷ್ಯದಲ್ಲಿ ಅಮೆರಿಕದ ವೀಸಾ ಪಡೆಯುವ ಅರ್ಹತೆ ಕಳೆದುಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ. ಟ್ರಂಪ್ ಆಡಳಿತದ ಅವಧಿಯಲ್ಲಿ ವಲಸೆ ಕಾನೂನುಗಳ ಕಟ್ಟುನಿಟ್ಟಾದ ಜಾರಿಯ ನಡುವೆ ಮಂಗಳವಾರ ಈ ಘೋಷಣೆ ಹೊರಬಿದ್ದಿದೆ.
ಭಾರತದಲ್ಲಿರುವ ಅಮೆರಿಕದ ದೂತಾವಾಸವು ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ವಿದ್ಯಾರ್ಥಿಗಳು ತಮ್ಮ ವೀಸಾ ನಿಯಮಗಳನ್ನು ಯಾವಾಗಲೂ ಪಾಲಿಸಬೇಕು ಮತ್ತು ವಿದ್ಯಾರ್ಥಿ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದೆ. "ನೀವು ಕೋರ್ಸ್ ಮಧ್ಯದಲ್ಲಿ ಬಿಟ್ಟರೆ, ತರಗತಿಗಳನ್ನು ತಪ್ಪಿಸಿದರೆ ಅಥವಾ ನಿಮ್ಮ ಶಾಲೆಗೆ ಮಾಹಿತಿ ನೀಡದೆ ಅಧ್ಯಯನವನ್ನು ತೊರೆದರೆ, ನಿಮ್ಮ ವಿದ್ಯಾರ್ಥಿ ವೀಸಾ ರದ್ದಾಗಬಹುದು ಮತ್ತು ಭವಿಷ್ಯದಲ್ಲಿ ಅಮೆರಿಕದ ವೀಸಾ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳಬಹುದು. ಯಾವುದೇ ಸಮಸ್ಯೆ ತಪ್ಪಿಸಲು ಯಾವಾಗಲೂ ನಿಮ್ಮ ವೀಸಾ ನಿಯಮಗಳನ್ನು ಪಾಲಿಸಿ ಮತ್ತು ವಿದ್ಯಾರ್ಥಿ ಸ್ಥಿತಿಯನ್ನು ಕಾಯ್ದುಕೊಳ್ಳಿ," ಎಂದು ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಗಡಿಪಾರು ಭೀತಿ ಮತ್ತು ಕಾನೂನು ಹೋರಾಟ
ಈ ಎಚ್ಚರಿಕೆಯ ನಡುವೆ, ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಸಮರ ಗೆದ್ದಿರುವ ಹಲವಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದೆ. ಗುರುವಾರ (ಮೇ 22) ಓಕ್ಲ್ಯಾಂಡ್‌ನ ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ಜೆಫ್ರಿ ಎಸ್ ವೈಟ್, ಪ್ರಕರಣ ಪರಿಹಾರವಾಗುವವರೆಗೆ ಸರ್ಕಾರವು ವಿದ್ಯಾರ್ಥಿಗಳನ್ನು ಬಂಧಿಸುವುದು, ಜೈಲಿನಲ್ಲಿ ಇಡುವುದು ಅಥವಾ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಹೇಳಿದ್ದಾರೆ.
ಈ ತೀರ್ಪು ಸರ್ಕಾರವು ವಿದ್ಯಾರ್ಥಿಗಳನ್ನು ಬಂಧಿಸುವುದು ಅಥವಾ ಇತರ ಕಾರಣಗಳಿಗಾಗಿ ಅವರ ಕಾನೂನು ಸ್ಥಿತಿಯನ್ನು ರದ್ದುಗೊಳಿಸುವುದನ್ನು ತಡೆಯುವುದಿಲ್ಲ. ಅಮೆರಿಕದ ದೂತಾವಾಸವು ಈ ಹಿಂದೆ ಮೇ 17ರಂದು ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ, "ನೀವು ಅಮೆರಿಕದಲ್ಲಿ ಅನುಮತಿಸಲಾದ ಅವಧಿಗಿಂತ ಹೆಚ್ಚು ಕಾಲ ಉಳಿದರೆ, ನಿಮ್ಮನ್ನು ಗಡಿಪಾರು ಮಾಡಬಹುದು ಮತ್ತು ಭವಿಷ್ಯದಲ್ಲಿ ಅಮೆರಿಕಕ್ಕೆ ಪ್ರಯಾಣಿಸುವುದಕ್ಕೆ ಶಾಶ್ವತ ನಿಷೇಧವನ್ನು ಎದುರಿಸಬಹುದು," ಎಂದು ಎಚ್ಚರಿಕೆ ನೀಡಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಇತ್ತೀಚಿನ ವೀಸಾ ರದ್ದತಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶೇ. 50ರಷ್ಟು ಇದ್ದಾರೆ ಎಂಬುದೇ ಆತಂಕದ ವಿಷಯ.