ನೇಪಾಳಕ್ಕೆ 474 ದಶಲಕ್ಷ ರೂ. ನೆರವು

2003 ರಿಂದ ನೇಪಾಳದಲ್ಲಿ ಭಾರತವು 563 ಹೆಚ್ಚು ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆ(ಎಚ್‌ಐಸಿಡಿಪಿ) ಗಳನ್ನು ಕೈಗೆತ್ತಿಕೊಂಡಿದೆ.

Update: 2024-09-28 13:07 GMT
ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕಿನಲ್ಲಿ ಸಂವಾದ ನಡೆಸಿದರು

ಕಠ್ಮಂಡು: ನೇಪಾಳದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ 12 ಹೆಚ್ಚು ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆ(ಎಚ್‌ಐಸಿಡಿಪಿ)ಗಳಿಗೆ ಭಾರತ 474 ದಶಲಕ್ಷ ರೂ. ನೆರವಿನ ವಾಗ್ದಾನ ಮಾಡಿದೆ ಎಂದು ತಿಳಿದುಬಂದಿದೆ.

ಭಾರತದ ರಾಯಭಾರ ಕಚೇರಿ ಮತ್ತು ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯ ಮತ್ತು ಜನರಲ್ ಅಡ್ಮಿನಿಸ್ಟ್ರೇಷನ್ ಶುಕ್ರವಾರ ಯೋಜನೆಗಳಿಗೆ ತಿಳಿವಳಿಕೆ ಪತ್ರ (ಎಂಒಯು)ಕ್ಕೆ ಸಹಿ ಮಾಡಿದೆ.

ಅನುದಾನದಿಂದ 12 ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸೋಲುಖುಂಬುವಿನಲ್ಲಿ ಬಸೇಪು-ಹುಲು ನೀರು ಸರಬರಾಜು ಯೋಜನೆ, ಬಜುರಾದಲ್ಲಿ ಆಹಾರ ಧಾನ್ಯ ಸಂಗ್ರಹಣೆ ಮತ್ತು ವಿತರಣೆ ಕೇಂದ್ರಕ್ಕಾಗಿ ಕೃಷಿ ಉತ್ತೇಜನಾ ಕೇಂದ್ರದ ಕಟ್ಟಡ, ಧಾಡಿಂಗ್‌ನಲ್ಲಿ ಹೆರಿಗೆ ನಂತರದ ಆರೋಗ್ಯ ಕೇಂದ್ರ ಮತ್ತು ಡಾಂಗ್‌ನ ರಾಪ್ತಿಯಲ್ಲಿ ಕಣ್ಣಿನ ಆಸ್ಪತ್ರೆ ಕಟ್ಟಡ ಸೇರಿದೆ. ಯೋಜನೆಗಳನ್ನು ನೇಪಾಳ ಸರ್ಕಾರದ ಸ್ಥಳೀಯ ಅಧಿಕಾರಿಗಳ ಮೂಲಕ ಕಾರ್ಯಗತಗೊಳಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ಯೋಜನೆಗಳು ಸ್ಥಳೀಯ ಸಮುದಾಯಕ್ಕೆ ಉತ್ತಮ ಶೈಕ್ಷಣಿಕ, ಆರೋಗ್ಯ ರಕ್ಷಣೆ, ಕುಡಿಯುವ ನೀರು, ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಸಾಂಸ್ಕೃತಿಕ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತವೆ. 2003 ರಿಂದ ನೇಪಾಳದಲ್ಲಿ ಭಾರತವು 563 ಹೆಚ್ಚು ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Similar News