Chinmoy Krishna Das: ಇಸ್ಕಾನ್ನ ಚಿನ್ಮಯಕೃಷ್ಣದಾಸ್ಗೆ ಬಾಂಗ್ಲಾ ಹೈಕೋರ್ಟ್ನಲ್ಲಿ ಜಾಮೀನು
ಚಿನ್ಮಯ್ ಕೃಷ್ಣ ದಾಸ್‌ರ ಮೇಲೆ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪವಿದ್ದು, ದೇಶದ್ರೋಹದ ಪ್ರಕರಣ ದಾಖಲಾಗಿದೆ. 2024ರ ಅಕ್ಟೋಬರ್ 25ರಂದು ಚಿತ್ತಗಾಂಗ್ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಇಸ್ಕಾನ್ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತಲೂ ಮೇಲೆ ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.;
ಬಾಂಗ್ಲಾದೇಶದ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಇಸ್ಕಾನ್ ಸಂತ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿಗೆ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. 2024ರ ನವೆಂಬರ್ 25ರಂದು ಢಾಕಾದ ಹಜರತ್ ಶಾಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ ಚಿನ್ಮಯ್‌ಗೆ, ಐದು ತಿಂಗಳ ಕಾಲ ಜಾಮೀನು ನಿರಾಕರಿಸಲಾಗಿತ್ತು.
ಚಿನ್ಮಯ್ ಕೃಷ್ಣ ದಾಸ್‌ರ ಮೇಲೆ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪವಿದ್ದು, ದೇಶದ್ರೋಹದ ಪ್ರಕರಣ ದಾಖಲಾಗಿದೆ. 2024ರ ಅಕ್ಟೋಬರ್ 25ರಂದು ಚಿತ್ತಗಾಂಗ್ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಇಸ್ಕಾನ್ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತಲೂ ಮೇಲೆ ಹಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ಯಾವುದೇ ದೃಢ ಸಾಕ್ಷ್ಯವಿಲ್ಲ ಎಂದು ಅವರ ವಕೀಲರು ವಾದಿಸಿದ್ದರು. ಚಿನ್ಮಯ್‌ರ ಬಂಧನವು ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದೊಳಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ರೀತಿ ಉಭಯ ದೇಶಗಳ ನಡುವಿನ ಸಂಬಂಧವೂ ಹಾಳಾಗಿತ್ತು. .
ಬುಧವಾರ ನಡೆದ ವಿಚಾರಣೆ ವೇಳೆ ಚಿನ್ಮಯ ದಾಸ್ ಅವರ ಪರ ವಕೀಲರಾದ ಅಪೂರ್ಬ ಕುಮಾರ್ ಮತ್ತು ಪ್ರೊಲಾದ್ ದೇಬ್ ನಾಥ್, ಸಂತರ ಮೇಲೆ ದಾಖಲಾಗಿರುವ ದೇಶದ್ರೋಹದ ಆರೋಪವು ಕಾನೂನಿನ ಯಾವುದೇ ಸರಕಾರಿ ಆದೇಶದ ಆಧಾರದ ಮೇಲೆ ದಾಖಲಾಗಿಲ್ಲ ಎಂದು ವಾದಿಸಿದ್ದರು. ಅವರಿಗೆ ಜಾಮೀನು ದೊರೆತ ಹೊರತಾಗಿಯೂ, ಸುಪ್ರೀಂ ಕೋರ್ಟ್ನ್ನಿಂದ ತಡೆಯಾಜ್ಞೆ ಬಾರದಿದ್ದರೆ, ಶೀಘ್ರದಲ್ಲಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಅವರ ಬಂಧನದ ಬಳಿಕ ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಭಾರತದ ವಿದೇಶಾಂಗ ಸಚಿವಾಲಯವು ಚಿನ್ಮಯ್‌ಗೆ ನ್ಯಾಯ ಒದಗಿಸುವಂತೆ ಬಾಂಗ್ಲಾದೇಶಕ್ಕೆ ಮನವಿ ಮಾಡಿತ್ತು. ಹಿಂದೂ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಚಿನ್ಮಯ್ ನಡೆಸಿದ ಪ್ರತಿಭಟನೆಯನ್ನು ದಮನಿಸಲು ಈ ಬಂಧನವನ್ನು ಒಂದು ತಂತ್ರವಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿತ್ತು. ನವದೆಹಲಿಯ ರೈಟ್ಸ್ ಆಂಡ್ ರಿಸ್ಕ್ಸ್ ಅನಾಲಿಸಿಸ್ ಗ್ರೂಪ್ (ಆರ್‌ಆರ್‌ಎಜಿ) ಸೇರಿದಂತೆ ಹಲವು ಸಂಘಟನೆಗಳು ಈ ಜಾಮೀನು ನಿರಾಕರಣೆಯನ್ನು ಖಂಡಿಸಿದ್ದವು.