ಇಸ್ರೇಲ್ ಒತ್ತೆಯಾಳುಗಳನ್ನು ಬಿಡದಿದ್ದರೆ ನರಕ ತೋರಿಸುವೆ; ಹಮಾಸ್​ ಉಗ್ರರಿಗೆ ಟ್ರಂಪ್ ಎಚ್ಚರಿಕೆ

ನವೆಂಬರ್​ನಲ್ಲಿ ಚುನಾಯಿತರಾದ ಟ್ರಂಪ್​ ಇಸ್ರೇಲ್ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ತಮ್ಮ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳ ಮೂಲಕ ಹಮಾಸ್​ ಉಗ್ರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.;

Update: 2024-12-03 06:10 GMT
I will show hell if Israel does not spare the hostages; Trump warns Hamas terrorists

ಇಸ್ರೇಲ್​ನಿಂದ ಬಂಧಿಸಿಕೊಂಡು ಬಂದು ಗಾಝಾ ಪಟ್ಟಿಯಲ್ಲಿರುವ ಒತ್ತೆಯಾಳುಗಳನ್ನು ಜನವರಿ 20 ರಂದು ತಾನು ಅಧಿಕಾರ ವಹಿಸಿಕೊಳ್ಳುವ ಮೊದಲು ಬಿಡುಗಡೆ ಮಾಡದಿದ್ದರೆ 'ನರಕ ನೋಡಬೇಕಾಗುತ್ತದೆ' ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.


2023ರಲ್ಲಿ ಇಸ್ರೇಲ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಹಮಾಸ್ ನೇತೃತ್ವದ ಉಗ್ರರು 250ಕ್ಕೂ ಹೆಚ್ಚು ಜನರನ್ನು ಸೆರೆ ಹಿಡಿದು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಗಾಝಾದಲ್ಲಿ ಇನ್ನೂ ಸಂಪರ್ಕವೇ ಇಲ್ಲದ 101 ವಿದೇಶಿ ಮತ್ತು ಇಸ್ರೇಲಿ ಒತ್ತೆಯಾಳುಗಳಿದ್ದಾರೆ ಎಂದು ನಂಬಲಾಗಿದೆ.

ನವೆಂಬರ್​ನಲ್ಲಿ ಚುನಾಯಿತರಾದ ಟ್ರಂಪ್​ ಇಸ್ರೇಲ್ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ತಮ್ಮ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಹೇಳಿಕೆ ಕೊಟ್ಟಿದ್ದಾರೆ.

"ನಾನು ಅಮೆರಿಕದ ಅಧ್ಯಕ್ಷನಾಗಿ ಹೆಮ್ಮೆಯಿಂದ ಅಧಿಕಾರ ವಹಿಸಿಕೊಳ್ಳುವ ದಿನಾಂಕವಾದ ಜನವರಿ 20, 2025ರೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಮಧ್ಯಪ್ರಾಚ್ಯದಲ್ಲಿ ಮತ್ತು ಮಾನವೀಯತೆಯ ವಿರುದ್ಧದ ದೌರ್ಜನ್ಯಗಳನ್ನು ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ,'' ಎಂದು ಎಚ್ಚರಿಕೆ ನೀಡಿದ್ದಾರೆ.

"ಅಮೆರಿಕ ಇತಿಹಾಸದಲ್ಲಿ ಇದುವರೆಗೆ ಎಂದಿಗೂ ನಡೆಸದಂಥ ಮಿಲಿಟರಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ,'' ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಉಳಿದ ಒತ್ತೆಯಾಳುಗಳನ್ನು ತಕ್ಷಣ ಮಾಡುವ ಒಪ್ಪಂದದ ಭಾಗವಾಗಿ ಯುದ್ಧವನ್ನು ಕೊನೆಗೊಳಿಸಬೇಕು ಮತ್ತು ಗಾಝಾದಿಂದ ಇಸ್ರೇಲ್ ಅನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂದು ಹಮಾಸ್ ಕರೆ ನೀಡಿದೆ. ಹಮಾಸ್ ನಿರ್ಮೂಲನೆಯಾಗುವವರೆಗೂ ಯುದ್ಧ ಮುಂದುವರಿಯುತ್ತದೆ. ಇಸ್ರೇಲ್​ಗೆ ಯಾವುದೇ ಅಪಾಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತ್ಯುತ್ತರ ನೀಡಿದ್ದಾರೆ.

ಪ್ಯಾಲೆಸ್ತೀನ್​ ಉಗ್ರಗಾಮಿ ಗುಂಪು ಮತ್ತು ಇಸ್ರೇಲ್ ನಡುವೆ ಸುಮಾರು 14 ತಿಂಗಳ ಕಾಲ ನಡೆದ ಯುದ್ಧದಲ್ಲಿ ಗಾಝಾದಲ್ಲಿದ್ದ 33 ಒತ್ತೆಯಾಳುಗಳನ್ನು ಮೃತಪಟ್ಟಿದ್ದಾರೆ ಎಂದು ಹಮಾಸ್ ಸೋಮವಾರ ಹೇಳಿದೆ.

ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ಹೋರಾಟಗಾರರು ಇಸ್ರೇಲಿ ಸಮುದಾಯಗಳ ಮೇಲೆ ದಾಳಿ ನಡೆಸಿ 1,200 ಜನರನ್ನು ಹತ್ಯೆ ಮಾಡಿದ್ದರು. ಆ ಬಳಿಕ ಯುದ್ಧ ಆರಂಭಗೊಂಡಿತ್ತು. ಇಸ್ರೇಲ್​​ನ ಮಿಲಿಟರಿ ದಾಳಿಯಲ್ಲಿ 44,400 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಗಾಝಾದ ಹೆಚ್ಚಿನವರನ್ನು ಸ್ಥಳಾಂತರಿಸಲಾಗಿದೆ ಎಂದು ಗಾಝಾ ಅಧಿಕಾರಿಗಳು ತಿಳಿಸಿದ್ದಾರೆ.  

Tags:    

Similar News