ಯೆಮನ್‌ನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಮುಂದೂಡಿಕೆ

ನಿಮಿಷಾ ಪ್ರಿಯಾ ಅವರಿಗೆ ತಮ್ಮ ಉದ್ಯಮ ಪಾಲುದಾರನನ್ನು ಕೊಲೆ ಮಾಡಿದ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ತಮ್ಮನ್ನು ಆತ ಕಿರುಕುಳ ನೀಡುತ್ತಿದ್ದ ಎಂದು ನಿಮಿಷಾ ಆರೋಪಿಸಿದ್ದರು.;

Update: 2025-07-15 09:16 GMT

ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ಯೆಮನ್ ಪ್ರಾಧಿಕಾರಗಳು ಸದ್ಯಕ್ಕೆ ಮುಂದೂಡಿವೆ. ಮೂಲತಃ ಜುಲೈ 16ರಂದು ಮರಣದಂಡನೆ ನಡೆಯಬೇಕಾಗಿತ್ತು.

ಕಂಠಪುರಂ ಅಬೂಬಕ್ಕರ್ ಮುಸಲಿಯಾರ್ ಅವರಿಗೆ ಆಪ್ತವಾಗಿರುವ ಮೂಲಗಳ ಪ್ರಕಾರ, ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ತಾತ್ಕಾಲಿಕವಾಗಿ 'ಮುಂದೂಡಲಾಗಿದೆ' ಎಂದು ತಿಳಿಸಲಾಗಿದೆ. ಯೆಮನ್‌ನಲ್ಲಿನ ಧಾರ್ಮಿಕ ಮುಖಂಡರು ಮತ್ತು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಇತ್ತೀಚೆಗೆ ನಡೆದ ಸಮಾಲೋಚನೆಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ. ಆದರೆ, ಈ ಮುಂದೂಡಿಕೆಯ ಬಗ್ಗೆ ಯೆಮನ್ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.

ನಿಮಿಷಾ ಪ್ರಿಯಾ ಅವರಿಗೆ ತಮ್ಮ ಉದ್ಯಮ ಪಾಲುದಾರನನ್ನು ಕೊಲೆ ಮಾಡಿದ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ತಮ್ಮನ್ನು ಆತ ಕಿರುಕುಳ ನೀಡುತ್ತಿದ್ದ ಎಂದು ನಿಮಿಷಾ ಆರೋಪಿಸಿದ್ದರು. ಈ ಹಿಂದೆ, ನಿಮಿಷಾ ಅವರ ಪರವಾಗಿ ಮಧ್ಯವರ್ತಿಗಳು ಸಂತ್ರಸ್ತರ ಕುಟುಂಬಕ್ಕೆ 'ಬ್ಲಡ್ ಮನಿ' (ರಕ್ತ ದ್ರವ್ಯ) ರೂಪದಲ್ಲಿ 1 ಮಿಲಿಯನ್ ಡಾಲರ್ (ಸುಮಾರು 8.3 ಕೋಟಿ ರೂ.) ಅನ್ನು ನೀಡಲು ಮುಂದಾಗಿದ್ದರು. ಆದರೂ ಗಲ್ಲುಶಿಕ್ಷೆ ಖಚಿತವಾಗಿತ್ತು. ಈಗ ಬಂದಿರುವ ಮುಂದೂಡಿಕೆಯ ಸುದ್ದಿ ನಿಮಿಷಾ ಕುಟುಂಬದಲ್ಲಿ ಅಲ್ಪ ಆಶಾಕಿರಣ ಮೂಡಿಸಿದೆ. 

Tags:    

Similar News