ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರಿವೋಸ್ಟ್ ಪೋಪ್ ಲಿಯೋ XIV ಆಗಿ ಆಯ್ಕೆ

ಪೋಪ್ ಫ್ರಾನ್ಸಿಸ್‌ರ ನಿಧನದ ಬಳಿಕ, ವಿಶ್ವಾದ್ಯಂತದ ಕಾರ್ಡಿನಲ್‌ಗಳು ವ್ಯಾಟಿಕನ್‌ನಲ್ಲಿ ಒಟ್ಟುಗೂಡಿದ್ದರು. ಬಿಳಿ ಹೊಗೆಯ ಸಂಕೇತವು ಚರ್ಚ್‌ನ ಹೊಸ ನಾಯಕನ ಆಯ್ಕೆಯನ್ನು ದೃಢೀಕರಿಸಿತು.;

Update: 2025-05-08 18:36 GMT

ಅಮೆರಿಕದಲ್ಲಿ ಜನಿಸಿದ ಕಾರ್ಡಿನಲ್ ರಾಬರ್ಟ್ ಪ್ರಿವೋಸ್ಟ್ ಅವರು ಕ್ಯಾಥೊಲಿಕ್ ಚರ್ಚ್‌ನ ಮುಂದಿನ ಪೋಪ್ ಆಗಿ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ಪೋಪ್ ಫ್ರಾನ್ಸಿಸ್ ಅವರ ನಿಧನದ ಬಳಿಕ ಅವರು ರೋಮನ್ ಕ್ಯಾಥೊಲಿಕ್ ಚರ್ಚ್‌ನ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಅವರು ಪೋಪ್ ಲಿಯೋ XIV ಎಂಬ ಹೆಸರನ್ನು ಆಯ್ದುಕೊಂಡಿದ್ದಾರೆ.

70 ವರ್ಷದ ರಾಬರ್ಟ್ ಪ್ರಿವೋಸ್ಟ್, ಕ್ಯಾಥೊಲಿಕ್ ಚರ್ಚ್‌ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಅಮೆರಿಕನ್ ಪೋಪ್ ಆಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಅವರನ್ನು “ಪೋಪ್ ಫ್ರಾನ್ಸಿಸ್‌ಗಿಂತ ಕಡಿಮೆ ಜನಪ್ರಿಯ ” ಎಂದು ವಿವರಿಸಲಾಗಿದೆ. ಆದರೆ, ಅವರನ್ನು “ನಿಪುಣ ರಾಜತಾಂತ್ರಿಕ” ಎಂದು ಕರೆಯಲಾಗಿದ್ದು, “ಕ್ಯಾಥೊಲಿಕ್ ಚರ್ಚ್‌ನ ಜಾಗತಿಕ ಸ್ಥಾನಮಾನವನ್ನು ಉನ್ನತಿಗೊಳಿಸುವ ಆಸ್ತಿಯಾಗಿರಬಹುದು” ಎಂದು ಹೇಳಲಾಗಿದೆ.

ಕಾರ್ಡಿನಲ್‌ಗಳ ಕಾಂಕ್ಲೇವ್‌ನಲ್ಲಿ ನಡೆದ ಚುನಾವಣೆಯು ಕಟ್ಟುನಿಟ್ಟಾದ ಗೌಪ್ಯತೆಯಲ್ಲಿ ನಡೆಯಿತು. ಪೋಪ್ ಫ್ರಾನ್ಸಿಸ್‌ರ ನಿಧನದ ಬಳಿಕ, ವಿಶ್ವಾದ್ಯಂತದ ಕಾರ್ಡಿನಲ್‌ಗಳು ವ್ಯಾಟಿಕನ್‌ನಲ್ಲಿ ಒಟ್ಟುಗೂಡಿದ್ದರು. ಬಿಳಿ ಹೊಗೆಯ ಸಂಕೇತವು ಚರ್ಚ್‌ನ ಹೊಸ ನಾಯಕನ ಆಯ್ಕೆಯನ್ನು ದೃಢೀಕರಿಸಿತು. 

Tags:    

Similar News