Op Sindoor : ಪಾಕಿಸ್ತಾನದ ಲಾಹೋರ್‌ನಲ್ಲಿ ಸರಣಿ ಸ್ಫೋಟ;ಮನೆ ಬಿಟ್ಟು ಓದಿ ಬಂದ ಜನ
ಗುರುವಾರ (ಮೇ 08) ಪಾಕಿಸ್ತಾನದ ಲಾಹೋರ್‌ನಲ್ಲಿ ಸರಣಿ ಜೋರಾದ ಸ್ಫೋಟಗಳ ಶಬ್ದ ಕೇಳಿಸಿದ್ದರಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ ಎಂದು ರಾಯಿಟರ್ಸ್ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.;
ಸ್ಫೋಟದ ತೀವ್ರತೆಯಿಂದ ಎದ್ದಿರುವ ಹೊಗೆ.
'ಆಪರೇಷನ್ ಸಿಂದೂರ' ಹೆಸರಿನಡಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) 9 ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ ಎಂಬುದಾಗಿ ವರದಿಯಾಗಿದೆ. ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಪಾಕ್ಗೆ ಇದೀಗ ಆಂತರಿಕ ಭದ್ರತೆಯೂ ಸಮಸ್ಯೆ ಎನಿಸಿದೆ.
ಗುರುವಾರ (ಮೇ 08) ಪಾಕಿಸ್ತಾನದ ಲಾಹೋರ್‌ನಲ್ಲಿ ಸರಣಿ ಜೋರಾದ ಸ್ಫೋಟಗಳ ಶಬ್ದ ಕೇಳಿಸಿದ್ದರಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ ಎಂದು ರಾಯಿಟರ್ಸ್ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಲಾಹೋರ್‌ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಜನರು ಭಯದಿಂದ ಮನೆಗಳಿಂದ ಹೊರಗೋಡಿದ್ದು, ಹೊಗೆಯ ಕಾರ್ಮೋಡಗಳು ಕಾಣಿಸಿವೆ ಎಂದು ದೃಶ್ಯಗಳು ತೋರಿಸಿವೆ.
ಈ ಪ್ರದೇಶವು ಲಾಹೋರ್‌ನ ಶ್ರೀಮಂತ ವಾಣಿಜ್ಯ ಕೇಂದ್ರ ಮತ್ತು ಲಾಹೋರ್ ಸೇನಾ ಶಿಬಿರಕ್ಕೆ ಹತ್ತಿರದಲ್ಲಿದೆ. ಸಿಯಾಲ್ಕೋಟ್ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ
ಡ್ರೋನ್ ಧ್ವಂಸ
ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟಕ್ಕೆ ಕಾರಣವಾಗಿರಬಹುದಾದ ಡ್ರೋನ್ 5-6 ಅಡಿ ಗಾತ್ರದ್ದಾಗಿತ್ತು. ಈ ಡ್ರೋನ್‌ನ ಸಿಗ್ನಲ್‌ಗಳನ್ನು ಜಾಮ್ ಮಾಡುವ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದುವರೆಗೆ ಯಾವುದೇ ಸಾವು-ನೋವು ಅಥವಾ ನಾಗರಿಕ ಆಸ್ತಿಗೆ ಹಾನಿಯ ವರದಿಗಳಿಲ್ಲ.
ಬುಧವಾರ (ಮೇ 07), ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ (IAF) ಜಂಟಿಯಾಗಿ ‘ಒಪರೇಷನ್ ಸಿಂದೂರ್’ ಅಡಿಯಲ್ಲಿ ಪಾಕಿಸ್ತಾನದ ಒಂಬತ್ತು ಸ್ಥಳಗಳಲ್ಲಿ ಜೈಷ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗಳಿಗೆ ಸಂಬಂಧಿಸಿದ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿವೆ.