ರೆಬೆಲ್‌ಸ್ಟಾರ್‌ ಅಂಬರೀಶ್‌ಗೆ ಇಂದು 72; ಜನ್ಮದಿನದಂದು ಅಭಿಮಾನಿಗಳಿಂದ ಭಾವನಮನ

ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ 72ನೇ ಜನ್ಮ ದಿನೋತ್ಸವ. ಅಂಬಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಡಿಪಿ ಪೋಸ್ಟ್ ಮಾಡಿ ಅಂಬಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.;

Update: 2024-05-29 09:02 GMT
ನಟ ಅಂಬರೀಶ್‌ ಅವರ ಜನ್ಮದಿನೋತ್ಸವದ ಹಿನ್ನಲೆ ಪತ್ನಿ ಸುಮಲತಾ ಬಾವುಕ ಪೋಸ್ಟ್‌ ಮಾಡಿದ್ದಾರೆ.
Click the Play button to listen to article

ಇಂದು ( ಮೇ 29) ರೆಬಲ್ ಸ್ಟಾರ್ ಅಂಬರೀಶ್ ಅವರ 72ನೇ ಜನ್ಮ ದಿನೋತ್ಸವ. ಅಂಬಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಡಿಪಿ ಪೋಸ್ಟ್ ಮಾಡಿ ಅಂಬಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಅಭಿಮಾನಿಗಳು ವಿಶೇಷ ದಿನದಂದು ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂಬಿ ಪತ್ನಿ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂಬರೀಶ್‌ ಪತ್ನಿ ಸುಮಲತಾ ಬಾವುಕ ಪೋಸ್ಟ್‌

"ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು.. ಈ ದಿನ ನಿಮ್ಮೊಟ್ಟಿಗೆ ಹಲವು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿದ ಸಂತೋಷ, ಕಣ್ಣೀರಿನ ನೆನಪುಗಳಿಂದ ತುಂಬಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ನೀವು ತಂದ ಅಂತ್ಯವಿಲ್ಲದ ಸಂತೋಷವು ನನ್ನ ಹೃದಯವನ್ನು ಕೃತಜ್ಞತೆಯಿಂದ ಬೆಚ್ಚಗಾಗಿಸುತ್ತದೆ ಮತ್ತು ನನ್ನ ಪ್ರತಿಯೊಂದು ಆಲೋಚನೆಯನ್ನು ಪೂರೈಸುತ್ತದೆ. ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತೀರೋ ಅಲ್ಲಿ ನಿಮ್ಮ ಸ್ಮರಣೆಯು ನನಗೆ ಎಷ್ಟು ಅಮೂಲ್ಯ ಮತ್ತು ಉತ್ತಮ ಎಂಬುದನ್ನು ನೀವು ನೋಡಬಹುದು ಎಂದು ನಾನು ಭಾವಿಸುತ್ತೇನೆʼʼ.

ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ನೀವು ನನ್ನೊಂದಿಗೆ ಇದ್ದೀರಿ ಎಂದು ನಾನು ಭಾವಿಸುತ್ತೇನೆ . ಹಾಗಾಗಿ ನಾನು ನಿಮ್ಮ ಜನ್ಮದಿನವನ್ನು ಆಚರಿಸುತ್ತೇನೆ. ಆದರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಲವ್ ಯು ಫಾರ್ ಎವರ್" ಎನ್ನುವ ಪೋಸ್ಟ್ ಹಂಚಿಕೊಂಡಿದ್ದಾರೆ. "ನಿನ್ನ ನೆನಪಾಗುತ್ತಿದೆ.

Full View

ಯಾವಾಗಲೂ ನಗು ತರುತ್ತದೆ.. ನಿನ್ನನ್ನು ಕಳೆದುಕೊಳ್ಳುವುದು ಯಾವಾಗಲೂ ಉಳಿಯುವ ನೋವು.. ನೀವು ನಮ್ಮ ಜೀವನದ ಒಂದು ಭಾಗ.. ಪ್ರತಿಯೊಂದು ದಿನ.. ಪ್ರತಿ ಕ್ಷಣ ಮತ್ತು ಎಂದೆಂದಿಗೂ... ನೀನು ಬದುಕನ್ನು ಮೀರಿದವನು..ನೀವೇ ಜೀವನ.. ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ದರ್ಶನ್‌ ಪೋಸ್ಟ್‌

ಇನ್ನು ನಟ ದರ್ಶನ್‌ ಅಂಬಿ ಬರ್ತ್‌ಡೇ ಬಗ್ಗೆ ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ವಿಶೇಷ ಫೋಟೋ ಜತೆಗೆ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ.. “ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರಿಗೆ ಜನ್ಮದಿನಾಚರಣೆಯ ಶುಭಾಶಯಗಳು. ಇಂದಿಗೂ ಅವರ ಖಡಕ್ ಜೀವನ ಶೈಲಿ, ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ದೈಹಿಕವಾಗಿ ನಮ್ಮನು ಅಗಲಿದರೂ ಮಾನಸಿಕವಾಗಿ ನಮ್ಮನ್ನು ಕಾಯುತ್ತ ಆಶೀರ್ವದಿಸುತ್ತಾ ನಮ್ಮೊಂದಿಗೆ ಇದ್ದಾರೆ. One and only #HappyBirthdayRebelStar We all miss him” ಎಂದು ಬರೆದುಕೊಂಡಿದ್ದಾರೆ.

ಸಿನಿರಂಗಕ್ಕೆ ಅಂಬರೀಶ್‌ ಕೊಡುಗೆ ಅಪಾರ

ನಟ ಅಂಬರೀಶ್‌ 1952 ಮೇ 29ರಂದು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಜನಿಸಿದ್ದು, ಅಂಬರೀಶ್‌ ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಬಳಿಕ ಅಂಬರೀಶ್ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಜಲೀಲನ ಪಾತ್ರ ಬ್ರೇಕ್ ಕೊಟ್ಟಿತ್ತು. ಸಣ್ಣ ಪುಟ್ಟ ಪಾತ್ರಗಳಲ್ಲಿ ನೆಗೆಟಿವ್ ರೋಲ್‌ಗಳಲ್ಲಿ ನಟಿಸಿದ ಅಂಬಿ ಬಳಿಕ ಹೀರೊ ಆಗಿ ಎಂಟ್ರಿ ಕೊಟ್ಟರು. 'ಅಂತ', 'ಚಕ್ರವ್ಯೂಹ', 'ಮಂಡ್ಯದ ಗಂಡು', 'ಒಡಹುಟ್ಟಿದವರು' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅಂಬರೀಶ್ ಚಿತ್ರರಂಗಕ್ಕೆ ಕೊಡುಗೆ ಅಪಾರ ಕೊಡುಗೆ ನೀಡಿದ್ದಾರೆ. ಕೇವಲ ಸಿನಿಕ್ಷೇತ್ರ ಮಾತ್ರವಲ್ಲದೆ ರಾಜಕೀಯರಂಗದಲ್ಲಿ ಕೂಡ ಅಂಬರೀಶ್‌ ಗುರುತಿಸಿಕೊಂಡಿದ್ದರು.

ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ಅಂಬರೀಶ್‌

ಅಂಬರೀಶ್‌ ಮೊದಲು ಜನತಾದಳದಿಂದ ರಾಜಕೀಯವನ್ನು ಪ್ರವೇಶಿಸಿದ್ದು, 1994ರಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು. 1998ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಅದಾದ ಬಳಿಕ 2013ರಲ್ಲಿ ಮಂಡ್ಯದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾದರು. 2018ರ ನವೆಂಬರ್ 24ರಂದು ಬೆಂಗಳೂರಿನಲ್ಲಿ ನಟ ಹೃದಯಾಘಾತದಿಂದ ನಿಧನರಾದರು.

ಇಂದು ಅಂಬಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕ್ಕೆ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಕುಟುಂಬ ಸದಸ್ಯರು ಸಮಾಧಿಗೆ ಪೂಜೆ ನೆರವೇರಿಸಲಿದ್ದಾರೆ.

Tags:    

Similar News