ರವಿಕೆ ಪ್ರಸಂಗ ಫೆ. ೧೬ಕ್ಕೆ ರಾಜ್ಯಾದ್ಯಂತ ಬಿಡುಗಡೆ

ರವಿಕೆ ಪ್ರಸಂಗ ವಿಭಿನ್ನ ಕಥಾವಸ್ತು ಹೊಂದಿದೆ. ಫೆಬ್ರವರಿ ೧೬ ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.;

Update: 2024-02-05 06:30 GMT
ರವಿಕೆ ಪ್ರಸಂಗ ಸಿನಿಮಾ ಸೆನ್ಸಾರ್ ಪಾಸಾಗಿದೆ.

ಮಂಗಳೂರು: ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾ ಸೆನ್ಸಾರ್ ಪಾಸಾಗಿದ್ದು,ಫೆಬ್ರವರಿ ೧೬ ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ವಿಭಿನ್ನ ಕಥಾವಸ್ತು ಇದ್ದು, ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಮೆಚ್ಚುಗೆ ಗಳಿಸಿದೆ.

'ದೃಷ್ಟಿ ಮೀಡಿಯಾ' ಪ್ರೊಡಕ್ಷನ್‌ ಅಡಿ ಚಿತ್ರ ನರ್ಮಾಣವಾಗಿದ್ದು, ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಚಿತ್ರದ  ಕಥಾವಸ್ತು ರವಿಕೆ.  ಕೌಟುಂಬಿಕ ಕಥಾಹಂದರ ಇರುವ, ಹಾಸ್ಯಭರಿತ ಸಿನೆಮಾ. ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ಹೇಳಲಾಗಿದೆ.

ಸಿನಿಮಾವನ್ನು ಮಾಷ್೯ ಡಿಸ್ಟ್ರಿಬ್ಯೂ ಟರ್ಸ್  ಬಿಡುಗಡೆಗೊಳಿಸಲಿದೆ. ವಿದೇಶದಲ್ಲೂ ಬಿಡುಗಡೆಗೊಳ್ಳಲಿದೆ. 

Tags:    

Similar News