Rashmika Mandanna| ಮಹಾರಾಣಿ ಯೇಸುಬಾಯಿಯಾದ ರಶ್ಮಿಕಾ ಮಂದಣ್ಣ!

Rashmika Mandanna| ಮರಾಠ ಸಾಮ್ರಾಜ್ಯದ ಮಹಾನ್‌ ಸಾಮ್ರಾಟ ಛತ್ರಪತಿ ಸಂಬಾಜಿ ಮಹಾರಾಜ್‌ ಕುರಿತಾದ ಕಾದಂಬರಿ ಆಧರಿತ ಚಿತ್ರವಿದು.;

Update: 2025-01-22 06:54 GMT
ಮಹಾರಾಣಿ ಯೇಸುಬಾಯಿ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ

ಬಾಲಿವುಡ್‌ ಸಿನಿಮಾ ‘ಛಾವ’ ದಲ್ಲಿನ ರಶ್ಮಿಕಾ ಮಂದಣ್ಣ ಪಾತ್ರದ ಲುಕ್‌ ಅನಾವರಣಗೊಂಡಿದೆ. ಇದರಲ್ಲಿ ಅವರು ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪ್ರತಿ ಯಶಸ್ವೀ ಸಾಮ್ರಾಟನ ಹಿಂದೆಯೂ ಶಕ್ತಿಶಾಲಿ ರಾಣಿ ಇರುತ್ತಾಳೆ’ ಎಂಬ ಟ್ಯಾಗ್‌ಲೈನ್‌ ಈ ಪಾತ್ರದ ಹಿರಿಮೆಯನ್ನು ವಿವರಿಸುವಂತಿದೆ.

ಮರಾಠ ಸಾಮ್ರಾಜ್ಯದ ಮಹಾನ್‌ ಸಾಮ್ರಾಟ ಛತ್ರಪತಿ ಸಾಂಬಾಜಿ ಮಹಾರಾಜ್‌ ಕುರಿತಾದ ಕಾದಂಬರಿ ಆಧರಿತ ಚಿತ್ರವಿದು. ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ನಾಯಕ. ಲಕ್ಷ್ಮಣ್‌ ಉಟೇಕರ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 

ಸಂಭಾಜಿ ಮಹಾರಾಜ್ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೇ ಫೆಬ್ರವರಿ 14ರಂದು ಛಾವ ಬಿಡುಗಡೆ ಆಗಲಿದೆ. 

ಇನ್ನೂ ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ 2’ ಚಿತ್ರ ರಶ್ಮಿಕಾ ಮಂದಣ್ಣಗೆ ಬಿಗ್ ಸಕ್ಸಸ್ ಕೊಟ್ಟಿದೆ. 1800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಮುನ್ನುಗ್ಗುತ್ತಿದೆ.

ಚಿತ್ರವನ್ನ ಲಕ್ಷ್ಮಣ್ ಉತ್ತೇಕರ್ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜಯನ್ ಬಂಡವಾಳ ಹಾಕಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದು, ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ಅಭಿನಯಿಸಿದ್ದಾರೆ.

Tags:    

Similar News