ಬೇರ ಎಂಬ ಬೇರೆಯದೇ ಕಥೆಯ ಸಿನಿಮಾ
ಕರ್ನಾಟಕ ಕರಾವಳಿ ತೀರದಲ್ಲಿ ಕಳೆದ ಮೂರು ದಶಕಗಳಲ್ಲಿ ಕಾಣಿಸಿಕೊಂಡಿರುವ ಕೋಮು ಸಂಘರ್ಷದ ಕಥನ ಬೇರ.;
ಕನ್ನಡ ಚಿತ್ರಲೋಕದಲ್ಲಿ ವಾರವೊಂದಕ್ಕೆ ಕನಿಷ್ಠ ಮೂರು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ. ಚಿತ್ರದಲ್ಲಿನ ತಾರಾ-ವರ್ಚಸ್ಸು ಮತ್ತು ಆ ಚಿತ್ರದ ಬಜೆಟ್ ಆಧರಿಸಿ ಅವುಗಳು ಸುದ್ದಿಯಲ್ಲಿರುತ್ತವೆ ಮತ್ತು ಸುದ್ದಿ ಮಾಡುತ್ತಲಿರುತ್ತವೆ. ಅವುಗಳ ಗಲ್ಲಾಪೆಟ್ಟಿಗೆ ಯಶಸ್ಸು ಕೂಡ ಇವೇ ಮಾನದಂಡವನ್ನು ಅವಲಂಬಿಸಿದೆಯೇ ಹೊರತು, ಅವುಗಳ ಕಥನದಿಂದಾಗಲೀ, ಸಮಕಾಲೀನತೆಯಿಂದಾಗಲೀ, ಸುದ್ದಿಯಲ್ಲಿರುವುದಿಲ್ಲ. ಅಂಥ ಗಟ್ಟಿ ಚಿತ್ತಗಳು ಅಕಸ್ಮಿಕವಾಗಿ ಬಂದರೂ ಅವುಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಸೀಮಿತವಾಗಿಬಿಡುತ್ತವೆ.
ಈ ಪುಟ್ಟ ಪ್ರಸ್ತಾವನೆಗೆ ಕಾರಣ ಜೂನ್ ೧೬ರಂದು ತೆರೆ ಕಾಣಲಿರುವ ಬೇರ ಎಂಬ ಕನ್ನಡಚಿತ್ರ ಮತ್ತು ಅದರ ಟ್ಯಾಗ್-ಲೈನ್ (ಬಾಲಂಗೋಚಿ)- ಮರ್ಚೆಂಟ್ ಆಫ್ ಡೆತ್. ಈ ಚಿತ್ರತನ್ನ ವಸ್ತುವಿನ (ಕಂಟೆಂಟ್) ಕಾರಣದಿಂದಾಗಿ ಬಿಡುಗಡೆಗೆ ಮುನ್ನವೇ ಸದ್ದು-ಸುದ್ದಿ ಎರಡನ್ನೂ ಸಮಾನವಾಗಿ ಮಾಡುತ್ತಿದೆ. ಬೇರ ಎಂದರೆ ತುಳು ಭಾಷೆಯಲ್ಲಿ ವ್ಯಾಪಾರ ಎಂದರ್ಥ. ವಿನು ಬಳಂಜ ಎಂಬ ಚೊಚ್ಚಲ ನಿರ್ದೇಶಕನ ಚಿತ್ರಇದು. ಈ ಸಮಾಜೋ-ರಾಜಕೀಯ ಚಿತ್ರ ಬೇರ -ಉತ್ತರ ಭಾರತದ ಹಿಂದುತ್ವದ ಪ್ರಯೋಗಶಾಲೆ ಎಂದು ಭಾವಿಸಲಾಗಿರುವ ಕರಾವಳಿ ಕರ್ನಾಟಕದಲ್ಲಿ ರಾಜಕಾರಣ, ಅದರಲ್ಲೂ ಮತೀಯ ರಾಜಕಾರಣ- ಒಂದು ಕಾಲದ ಸರ್ವಜನಾಂಗದ ಶಾಂತಿಯ ತೋಟವನ್ನು ಹೇಗೆ ಅಶಾಂತಿಯ ತಾಣವನ್ನಾಗಿ ಮಾರ್ಪಡಿಸುತ್ತಿದೆ ಎಂಬ ವಸ್ತುವನ್ನಾಧರಿಸಿದ್ದು ಎನ್ನಲಾಗುತ್ತಿದೆ.
ದಿ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಹೋಲಿಕೆ?
ಬೇರ ಸದ್ದು ಮತ್ತು ಸುದ್ದಿ ಮಾಡಲು ಕಾರಣ; ಬಿಡುಗಡೆಗೆ ಮುನ್ನವೇ ಈ ಚಿತ್ರವನ್ನು ಕೆಲ ಕನ್ನಡದ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳು- ದಿ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಬಳಿಕ ಇದೀಗ ಕರಾವಳಿ ಸ್ಟೋರಿ! ಎಂಬ ತಲೆಬರಹ ನೀಡಿ, ಇದು ಹಿಂದೂ-ಮುಸ್ಲೀಮ್ ಸಂಘರ್ಷದ ಕತೆಯ ಚಿತ್ರ. ಕೋಮು ಸಂಘರ್ಷದ ಜೊತೆಗೆ ಉಗ್ರವಾದದ ಕತೆಯೂ ಇದರಲ್ಲಿದೆ. ಕರ್ನಾಟಕ ಕರಾವಳಿಯ ನೈಜ ಕೋಮು ಸಂಘರ್ಷದ ಕತೆಯನ್ನಾಧರಿಸಿದ ಚಿತ್ರ ಎಂದು ಬಿಂಬಿಸುತ್ತಿರುವುದು. ಮರ್ಚೆಂಟ್ ಆಫ್ ಡೆತ್- ಅಂದರೆ ಸಾವಿನ ವ್ಯಾಪಾರಿ ಎಂಬುದು ಕನ್ನಡದ ಚಿತ್ರ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನುಂಟುಮಾಡಿದೆ. ಹಿಂದೂ-ಮುಸ್ಲೀಂ ಧರ್ಮಗಳ ಅಮಾಯಕ, ಅಸಹಾಯಕ, ಮುಗ್ಧ ಯುವಕರನ್ನು ಈ ಧರ್ಮಗಳ ಸಿದ್ಧಾಂತಗಳನ್ನು ಪ್ರತಿಪಾದಿಸುವ ನಾಯಕರು ಹೇಗೆ ತಮ್ಮ ವಸ್ತುಸೂಚಿಯ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈ ಚಿತ್ರದ ಹುರುಳು ಎಂದು ಚಿತ್ರತಂಡದ ಮೂಲಗಳು ಹೇಳುತ್ತಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼಬೇರʼ ಪ್ರೇಕ್ಷಕರ ಕುತೂಹಲಕ್ಕೆ ಕುಮ್ಮಕ್ಕು ನೀಡುತ್ತಿದೆ.
ಸಿದ್ಧಾಂತ ಪ್ರಚಾರಕ ಚಿತ್ರವೇ?
ಆದರೆ ಆ ಎರಡು ಸಿದ್ಧಾಂತ ಪ್ರಚಾರಕ ಚಿತ್ರಗಳೆಂಬ ಪ್ರಬೇಧಕ್ಕೆ ಸೇರುವ ಸಾಧ್ಯತೆಯೇ ಹೆಚ್ಚು. ಈ ಚಿತ್ರಕ್ಕೆ ಸಿಗುತ್ತಿರುವ ಪ್ರಾಶಸ್ತ್ಯ ಗಮನಿಸಿದರೆ, ಬೇರ ಕೂಡಅದೇ ಹಾದಿಯಲ್ಲಿ ಸಾಗುವುದೇನೋ ಎಂಬ ಅನುಮಾನ ಪ್ರೇಕ್ಷಕರನ್ನುಕಾಡುತ್ತಿದೆ. ಈ ರೀತಿಯ ಪ್ರಚಾರಚಿತ್ರದ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಎರಡನ್ನೂ ಮಾಡುವ ಸಾಧ್ಯತೆಇದೆ ಎಂದು ನಿರ್ದೇಶಕ ವಿನು ಬಳಂಜ ಒಪ್ಪಿಕೊಳ್ಳುತ್ತಾರೆ. ಆದರೆ ಬೇರ ಧರ್ಮಾಧಾರಿತರಾಜಕಾರಣಉದ್ದೇಶದ ರಾಜಕಾರಣಿಗಳು ಮುಗ್ಧ, ಅಮಾಯಕ, ಆರ್ಥಿಕವಾಗಿಅಸಹಾಯಕರಾಗಿರುವಯುವಕರನ್ನುಧರ್ಮದ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸ್ತುವನ್ನಾಧರಿಸಿದ ಕಥೆಇದು. ಕರ್ನಾಟಕ ಕರಾವಳಿ ತೀರ ಪ್ರದೇಶದ ಮುಗ್ಧ ಯುವಕರನ್ನುಧರ್ಮದ ಹೆಸರಿನಲ್ಲಿತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ಬಳಸಿಕೊಳ್ಳುತ್ತಿರುವುದನ್ನು, ಈ ಮೂಲಕ ಕೋಮು-ಸೌಹಾರ್ದಕ್ಕೆಧಕ್ಕೆತರುತ್ತಿರುವುದರ ಪರಿಣಾಮವನ್ನು ಹೇಳುವ ಚಿತ್ರವಿದು ಎನ್ನುವುದು ನಿರ್ದೇಶಕರ ಸಮರ್ಥನೆ.
ಕರ್ನಾಟಕದಗಡಿಯ ೩೨೦-ಕಿ.ಮೀ ಉದ್ದದ ಕರಾವಳಿ ತೀರದಇತ್ತೀಚಿನ ಮೂರು ದಶಕಗಳ ವಿದ್ಯಮಾನಗಳನ್ನ ನೆನಪಿಸಿಕೊಂಡತೆ ವಿನು ಬಳಂಜ ಅವರ ಈ ಮಾತುಗಳ ಅರ್ಥ ಹೋಳೆಯುತ್ತದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವರಾಜಕಾರಣದಿಂದಾಗಿ ಕರಾವಳಿಯಲ್ಲಿ ಮತೀಯ ಬಣ್ಣದ ಸಂಘರ್ಷಗಳು ನಡೆಯದೇಇರುವ ದಿನವೇ ಇಲ್ಲಎನ್ನುವಂತಾಗಿದೆ. ಈ ಚಿತ್ರದ ಮತ್ತೊಂದುಕಾರಣಕ್ಕೆ ಮುಖ್ಯವಾಗುತ್ತದೆ. ಅನುಭವಿ ಹಾಗೂ ಸೂಕ್ಷ್ಮ ಮನಸ್ಸಿನ ಕಲಾವಿದರು ಈ ಚಿತ್ರದ ಭಾಗವಾಗಿದ್ದಾರೆ. ಸತ್ಯ ಘಟನೆಗಳನ್ನಾಧರಿಸಿದ ಚಿತ್ರವಿದು ಎಂದುಚಿತ್ರದ ಮುಖ್ಯಕಲಾವಿದೆ ಹರ್ಷಿಕಾ ಪೂಣಚ್ಛ ಹೇಳಿರುವುದು ಹಾಗೂ ಚಿತ್ರದಲ್ಲಿ ಬಳಸಿರುವ ದಕ್ಷಿಣಕನ್ನಡದಕಲ್ಲಡ್ಕ ಭಾಗದ ಭಾಷೆಚಿತ್ರಕಥೆಗೆ ಪೂರಕವಾಗಿzಎಂದು ಮತ್ತೊಬ್ಬ ಪಾತ್ರಧಾರಿದತ್ತಣ್ಣ ಹೇಳಿರುವುದು, ಬೇರ ದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕಲ್ಲಡ್ಕಕಟ್ಟಿರುವ ಕುತೂಹಲ
ಚಿತ್ರದ ಬಹುಭಾಗವನ್ನು ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ಚಿತ್ರಿಸಲಾಗಿದೆ. ಕಲ್ಲಡ್ಕ ಒಂದರ್ಥದಲ್ಲಿದಕ್ಷಿಣಕನ್ನಡದ ಕೋಮು ಸಂಘರ್ಷದ ಕುದಿಬಿಂದುವೆಂದರೂತಪ್ಪಾಗಲಾರದು. ಏಕೆಂದರೆ, ಆರ್‌ಎಸ್‌ಎಸ್‌ನ ನಾಯಕರಾದಕಲ್ಲಡ್ಕ ಪ್ರಭಾಕರ ಭಟ್ ಹಿಂದೂ-ಮುಸ್ಲೀಂ ಜನಾಂಗಗಳ ನಡುವೆ ಕೋಮು ಭಾವನೆಗಳನ್ನೂ ಕೆರಳಿಸುವ ಉಭಯ ಕೋಮುಗಳ ನಡುವೆ ಸಂಘರ್ಷ ಹುಟ್ಟಿಹಾಕುವ ಸಂಘ ಪರಿವಾರದ ಸಿದ್ಧಾಂತವಾದಿ ಎಂದೆ ಖ್ಯಾತರಾಗಿರುವವರು. ಬೇರ ಚಿತ್ರವನ್ನು ಪ್ರಾದೇಶಿಕ ಕೋಮು ಸಂಘರ್ಷವನ್ನುಚಿಕಿತ್ಸಕದೃಷ್ಟಿಯಿಂದ ನೋಡಿದ ಮೊದಲ ಕನ್ನಡಚಿತ್ರವೆಂದು ಕೆಲವರು ಹೇಳುತ್ತಿರುವು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂಇದೆ. ಹಾಗೇನೂ ಇಲ್ಲ. ಈ ಹಿಂದೆ ಬರ (ಯು.ಆರ್.ಆನಂತಮೂರ್ತಿಅವರ ನೀಳ್ಗತೆ ಆಧಾರಿತ) ಚಿತ್ರದಲ್ಲಿಎಂ.ಎಸ್. ಸತ್ಯು, ಅಗ್ನಿ ಶ್ರೀಧರ್ ಅವರುತಮ್ಮ ತಮಸ್ಸು ಚಿತ್ರದಲ್ಲಿ ಹಾಗೂ ಗಿರೀಶ್ ಕಾಸರವಳ್ಳಿ ಅವರುತಮ್ಮ ಗುಲಾಬಿ ಟಾಕೀಸ್ ನಲ್ಲಿಅತಿ ಸೂಕ್ಷ್ಮವಾಗಿಯಾರಯಾವ ಭಾವನೆಗಳನ್ನೂ ಕೆರಳಿಸದಂತೆ ಕೋಮು ಸೌಹಾರ್ದದಚಿತ್ರಣ ನೀಡಿದ್ದಾರೆ ಎಂಬುದುಕನ್ನಡ ಚಲನಚಿತ್ರಇತಿಹಾಸಕಾರ ಕೆ.ಪುಟ್ಟಸ್ವಾಮಿಅವರ ಅನಿಸಿಕೆ. ಹಾಗಾಗೆ ವಿನು ಬಳಂಜ, ಇಂಥ ಸೂಕ್ಷ್ಮ-ಕತ್ತಿಯ ಅಲುಗಿನ ಮೇಲೆ ನಡೆಯುವಂಥ ವಸ್ತುವನ್ನು ಹೇಗೆ ನಿರ್ವಹಿಸಿದ್ದಾರೆ? ಎಂಬ ಕುತೂಹಲವೂ ಇದೆ.
ಹಾಗೆಂದು ವಿನು ಬಳಂಜ ಅವರಿಗೆದೃಶ್ಯ ಮಾಧ್ಯಮ ಹೊಸದೇನಲ್ಲ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನೂ ನಿರ್ದೇಶಿಸಿ ಮೆಚ್ಚಿಗೆ ಗಳಿಸಿರುವ ಇವರುಟಿ.ಎನ್ ಸೀತಾರಾಮ್ ಅವರಿಂದ ನಿರ್ದೇಶನದ ಕಸುಬು ಕಲಿತವರು. ನಾಲ್ಕು ವರ್ಷದ ಹಿಂದೆರಿಷಭ್ ಶೆಟ್ಟಿಅವರನ್ನು ನಾಯಕರಾಗಿಸಿ ನಾಥೂರಾಮ್ ಎಂಬ ಚಿತ್ರ ಮಾಡಲು ಪ್ರಯತ್ನಿಸಿದರು. (ಆದರೆ ಮಹಾತ್ಮಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್‌ಗೋಡ್ಸೆಗೂ ಈ ನಾಥೂರಾಮನಿಗೂಯಾವುದೇ ಸಂಬಂಧವಿಲ್ಲ, ಈ ನಾಥೂರಾಮ್‌ಗಾಂಧಿ ತತ್ವ-ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ ವ್ಯಕ್ತಿ.) ಆದರೆಕಾರಣಾಂತರದಿಂದ ಈ ಚಿತ್ರ ಪೂರ್ತಿಮಾಡಲಾಗಲಿಲ್ಲ. ಹಾಗಾಗಿ ಬೇರ ಇವರ ನಿರ್ದೇಶನದ ಮೊದಲ ಚಿತ್ರ. ನಾಲ್ಕು ವರ್ಷಒಂದುರೀತಿಯಲ್ಲಿತೆರೆಮರೆಗೆ ಸರಿದಿದ್ದೆ. ಈ ನಡುವೆಒಮ್ಮೆ ನಾನು ಕಲ್ಲಡ್ಕದ ಖಾಸಗಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಅಲ್ಲಿನ ನಾಲ್ಕು ಕಲ್ಲಿನ ಕಂಬಗಳು ಅವರಿಗೆ ಬೇರ ಚಿತ್ರ ನಿರ್ದೇಶಿಸಲು ಸ್ಫೂರ್ತಿ ನೀಡಿತು ಎನ್ನುತ್ತಾರೆ ವಿನು ಬಳಂಜ.
ಕಲ್ಲು ಕಂಬಗಳೇ ಕೇಂದ್ರ ಪಾತ್ರಗಳೇ?
ಬೇರ ದಟ್ರೈಲರ್ ಬಿಡುಗಡೆ ಹಾಗೂ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಂಚಿಕೊಂಡ ವಿವರಗಳು ನಂತರ ಹುಟ್ಟಿರುವ ಈ ದಿ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಚಿತ್ರಗಳಿಂದ ವಿನು ಬಳಂಜ ಸ್ವಲ್ಪ ವಿಚಲಿತರಾಗಿದ್ದಾರೆ. ಯಾವುದೇ ಪ್ರಶ್ನೆಗೂ ಅಳೆದೂ-ತೂಗಿ ಉತ್ತರಕೊಡುತ್ತಾರೆ. ನನ್ನ ಗೆಳಯನೊಬ್ಬ ನನ್ನನ್ನುಕಲ್ಲಡ್ಕದ ಯಾಸಿರ್ ಕಲ್ಲಡ್ಕಎಂಬುವವರ ಖಾಸಗಿ ವಸ್ತು ಸಂಗ್ರಹಾಲಯಕ್ಕೆಕರೆದೊಯ್ದ. ಈ ವಸ್ತು ಸಂಗ್ರಹಾಲಯದ ಪ್ರವೇಶ ಭಾಗದಲ್ಲಿಎದುರಾಗುವ ಅಷ್ಟೇನೂ ಕಲಾತ್ಮಕವಲ್ಲದ, ಯಾವುದೇ ಸಾಮ್ರಾಜ್ಯದ ವಾಸ್ತುವಿಗೂ ಹೋಲಿಕೆ ಇರದ ಪುರಾತನ ಕಂಬಗಳು ನನ್ನ ಗಮನಸೆಳೆದು, ಆ ಕಲ್ಲಿನ ಕಂಬಗಳ ಹಿನ್ನೆಲೆಯಲ್ಲಿ ಹುಟ್ಟಿದಕಥೆ ಬೇರ. ಈ ಕಂಭಗಳು ಯಾಸಿರ್‌ಗೆ ಸಿಕ್ಕ ಬಗ್ಗೆಯೇಒಂದುಕಥೆಇದೆ. ಈ ಕಂಬಗಳು ಕಲ್ಲಡ್ಕದ ನೆಟ್ಲಾ ಪ್ರದೇಶದಲ್ಲಿರುವಇಟಿಲಾಕ್ಷ ಸದಾಶಿವ ದೇವಾಲಯದ್ದು. ದೇವಸ್ಥಾನದ ಪುನರುಜ್ಚೀವನಕಾಮಗಾರಿ ಸಂದರ್ಭದಲ್ಲಿ ಈ ಕಂಬಗಳನ್ನು ತೆಗೆದು ಪಕ್ಕಕ್ಕಿಟ್ಟಿದ್ದರು. ಇಂಥ ವಸ್ತುಗಳಲ್ಲಿ ಆಸಕ್ತಿ ಇರುವ ನಾನು ಅವನ್ನುದೇವಾಲಯದ ಮೊಕ್ತೇಸರರಿಂದ ಪಡೆದುಇಲ್ಲಿತಂದಿಟ್ಟೆ ಎನ್ನುತ್ತಾರೆ ಯಾಸಿರ್.
ಪಾತ್ರಗಳ ಧ್ವನಿ
ಬೇರದಟ್ರೈಲರ್‌ನಲ್ಲಿಒಂದು ಪಾತ್ರ ಈ ಕಂಬಗಳು ಮಿಸುಕಾಡಲೇ ಬಾರದು ಎಂದರೆ. ಇನ್ನೊಂದು ಪಾತ್ರ; ಈ ಕಂಬಗಳು ಇರಲೇಬಾರದು. ಅದರ ಮೇಲಿನ ದೀಪ ಉರಿಯಲೇ ಬಾರದುಎನ್ನುತ್ತವೆ. ಇನ್ನೊಮ್ಮೆ ನಾವು ಸತ್ತರೆ ಈ ಕಂಬಗಳು ಸಾವಿರ ವರ್ಷ ನಮ್ಮಕಥೆ ಹೇಳುತ್ವೆ.. ನನ್ನ ಸಾವು ನನ್ನಯಾಕೆ ಹಿಂಬಾಲಿಸುತ್ತಿದೆ? ಕಾಂಪೌಂಡ್‌ನಲ್ಲಿರುವ ಕಂಬಗಳು ಉರಿತಿರೋ ದೀಪ ಎಂಬ ಧ್ವನಿ. ಹೀಗೆ ಕಥೆಒಂದರ್ಥದಲ್ಲಿ ಕಂಬಗಳ ಸುತ್ತ ಸುತ್ತುವಂತೆ ಭಾಸವಾಗುತ್ತದೆ. ಮರ್ಚೆಂಟ್‌ಆಫ್‌ಡೆತ್ ಟ್ಯಾಗ್‌ಲೈನ್‌ಕುರಿತಕುತೂಲಕ್ಕೆ; ವೈಯಕ್ತಿಕಲಾಭಕ್ಕಾಗಿಧರ್ಮವನ್ನು ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಂಡಿರುವರಾಜಕೀಯ ನಾಯಕರು, ಅಮಾಯಕ, ಮುಗ್ಧ ಅಸಹಾಯಕಯುವಕರನ್ನು ಶೋಷಿಸುತ್ತಿದ್ದಾರೆ. ಯಾವತಾಯಿಯ ಮಕ್ಕಳೋ ಅಂತೂ ಈ ಧರ್ಮರಾಜಕಾರಣದಚದುರಂಗದಾಟದ ಕಾಯಿಗಳಾಗಿದ್ದಾರೆ. ಯಾವತಾಯ ಮಕ್ಕಳೂ ಕೂಡಇಲ್ಲಿಯಾರಿಂದಾಗ್ಲಿ ಸಾಯಬಾರದು. ಬದುಕುವುದಕ್ಕೆ ವ್ಯಾಪಾರಒಂದುದಾರಿಯಾದರೆ, ಬದುಕು ಮುಗಿಸುವುದೂಕೂಡಒಂದು ವ್ಯಾಪಾರವಾಗಿದೆ. ಅಮ್ಮಂದಿರ ಮುಗ್ಧ ಮಕ್ಕಳು ಸಾಯುತ್ತಿದ್ದಾರೆ. ಅದುಆಗಬಾರದುಅನ್ನೋದು ಈ ಚಿತ್ರದಆಶಯ ಎಂದು ಸೂಕ್ಷ್ಮವಾಗಿಕಥಾ ಹಂದರದ ಬಗ್ಗೆ ವಿನು ಬಳಂಜ ಸೂಚಿಸುತ್ತಾರೆ.
ಸ್ಲೀಪರ್ ಸೆಲ್‌ಕಥೆಕೂಡ
ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ನಂಬಲಾಗಿರುವ ಕರಾವಳಿಯ ಪುಟ್ಟಊರು ಭಟ್ಕಳದಲ್ಲಿ ತಮಗರಿವಿಲ್ಲದಂತೆಯೇ ಸ್ಲೀಪರ್ ಸೆಲ್ಗಳಾಗುತ್ತಿರುವ ಅಮಾಯಕರ ಬಗ್ಗೆ ಕೂಡ ಈ ಚಿತ್ರ ಸೂಚಿಸಿ ಅದರ ಪರಿಣಾಮಗಳ ಬಗ್ಗೆ ಮಾತನಾಡುತ್ತದೆ ಎನ್ನುತ್ತಾರೆ ವಿನು ಬಳಂಜ. ಭಟ್ಕಳದ ಸ್ಲೀಪರ್ ಸೆಲ್‌ಗಳ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಅವರು ಉಲ್ಲೇಖಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಬೇರವನ್ನು ಹಿಂದೂ-ಮುಸ್ಲೀಂ ಧರ್ಮಗಳ ರಾಜಕೀಯ ನಾಯಕರು ಬಳಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದರೆ; ಹೌದು ಜೀವಗಳು ರಾಜಕೀಯ ವ್ಯಾಪಾರದಚದುರಂಗದ ಕಾಯಿಗಳಾಗಿವೆ. ಎಲ್ಲ ಸಾವುಗಳು ಪ್ರಚಾರದ ವಸ್ತುಗಳಾಗುತ್ತವೆ. ಅಂಥವರು ಈ ಚಿತ್ರವನ್ನೂ ಬಳಸಿಕೊಳ್ಳಬಹುದು. ಈಗಾಗಲೇ ಕೆಲವರು ಕೆಲವು ಚಿತ್ರಗಳನ್ನು ಬಳಸಿಕೊಂಡಿದ್ಧಾರೆ. ಬೇರದಲ್ಲಿಅವರು ನೆಪ ಹುಡುಕುವುದು ಕಷ್ಟವಾಗಬಹುದು. ಆದರೆ ಹುಡುಕೋರು ಹುಡುಕಿಯೇ ಹುಡುಕ್ತಾರೆ ಮತ್ತು ಬಳಸಿಕೊಳ್ತಾರೆ. ಏನೂ ಮಾಡೋಕೆಆಗೊಲ್ಲ. ಹಾಗಲ್ಲಎಂದು ನಾನು ನನ್ನ ನಿಲುವಿಗೆ ಖಂಡಿತ ಅಂಟಿಕೋಳ್ತೇನೆ. ನಮ್ಮಚಿತ್ರವನ್ನುಯಾರೂತಮ್ಮರಾಜಕೀಯ ಲಾಭಕ್ಕೆ ಬಳಸಿಕೊಳ್ಳದಂತೆ ನಾವು ನಮ್ಮಕೈಲಾದಎಲ್ಲ ಪ್ರಯತ್ನ ಮಾಡುತ್ತೇವೆ ಎನ್ನುವ ನಿರ್ದೇಶಕಕಲ್ಲಡ್ಕದಲ್ಲಿಚಿತ್ರೀಕರಿಸುವಾಗಅಡೆತಡೆಏನಾದರೂ..ಎಂದು ಕೇಳಿದರೆ. ಅವರಿಂದ ನೇರವಾಗಿ ಬರುವಉತ್ತರ ಇಲ್ಲ ಎಂದುಅರ್ಥಗರ್ಭಿತವಾಗಿ ಮುಗುಳ್ನಗುತ್ತಾರೆ.
ಒಂದು ಸಂಗತಿಯಂತೂ ಸ್ಪಷ್ಟ. ಈ ಸಂದರ್ಭದಲ್ಲಿಇಂಥ ಸೂಕ್ಷ್ಮವಸ್ತುವನ್ನಾಧರಿಸಿ ಚಿತ್ರ ಮಾಡುವುದು ಸವಾಲಿನ ಕೆಲಸ. ಪ್ರೋಪಗಾಂಡಿಸ್ಟ್‌ಚಿತ್ರವಾಗದಂತೆ ಎಚ್ಚರವಹಿಸಿ, ಮಾನವೀಯ ಮೌಲ್ಯಗಳನ್ನು ದೃಶ್ಯಗಳ ಸಂಕಲನದ ಮೂಲಕ ಹಿಡಿದಿಡಿವುದು ಅಷ್ಟು ಸುಲಭವಲ್ಲ. ಆದರೆಇಂಥ ವಸ್ತುವನ್ನು ಸಂವೇದನಾಶೀಲತೆಯಿಂದ ಭಾವೋದ್ವೇಗದಅಪಾಯದಿಂದ ಪಾರು ಮಾಡಿರುವಚಿತ್ರ ಪರಂಪರೆಯೇಇದೆ. ವಿನು ಬಳಂಜ ಬೇರ ಚಿತ್ರವನ್ನುಎಲ್ಲ ಸೂಕ್ಷ್ಮತೆಗಳಿಂದ ಮಾಡಿದ್ದಾರೊ, ಅಥವ ಭಾವೋದ್ವೇಗಕ್ಕೆ ಪ್ರೇಕ್ಷಕನ್ನು ತಳ್ಳುವ ಚಿತ್ರ ಮಾಡಿದ್ದಾರೋಎಂಬುದುಚಿತ್ರ ಬಿಡುಗಡೆಯ ನಂತರವೇ ಅರಿವಾಗಲಿದೆ.