ನಾನು ಕರ್ನಾಟಕದವಳು ಎಂದರೂ ರಶ್ಮಿಕಾಗೆ ತಪ್ಪಿಲ್ಲ ಟ್ರೋಲಿಗರ ಕಾಟ
ತಮ್ಮ ವರಸೆಯನ್ನು ಬದಲಾಯಿಸಿಕೊಂಡಿರುವ ರಶ್ಮಿಕಾ ‘ನಾನು ಕರ್ನಾಟಕದವಳು’ ಎಂದು ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.;
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೂಲತ: ಕರ್ನಾಟಕದ ಕೊಡಗು ಮೂಲದ ರಶ್ಮಿಕಾ ಕನ್ನಡ ಸಿನಿಮಾ ʼಕಿರಿಕ್ ಪಾರ್ಟಿʼಯಿಂದಲೇ ಉತ್ತುಂಗಕ್ಕೆ ಏರಿ ಇದೀಗ ಬಹುಭಾಷ ನಟಿ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಕಾರ್ಯಕ್ರಮವೊಂದರಲ್ಲಿ ʻನಾನು ಹೈದರಬಾದ್‌ನಿಂದ ಬಂದವಳುʼ ಎಂದು ಹೇಳಿದ್ದರು. ಇದು ಕನ್ನಡಿಗರ ಕಣ್ಣು ಕೆಂಪಾಗಿಸಿತ್ತು. ಆಕೆಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಲಾಗಿತ್ತು. ಇದೀಗ ತಮ್ಮ ವರಸೆಯನ್ನು ಬದಲಾಯಿಸಿಕೊಂಡಿರುವ ರಶ್ಮಿಕಾ ‘ನಾನು ಕರ್ನಾಟಕದವಳು’ ಎಂದು ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆ ಸಂದರ್ಶನ ನೀಡಿದ್ದರು. ಈ ವೇಳೆ ಭಾಷೆ ಕಲಿಯುವುದು ಎಷ್ಟು ಕಷ್ಟ ಎಂಬುದನ್ನು ರಶ್ಮಿಕಾ ಮಂದಣ್ಣ ವಿವರಿಸಿದ್ದರು. ಕರ್ನಾಟಕದವರಾಗಿ ಕನ್ನಡ ಮಾತ್ರ ಬರುತ್ತಿತ್ತು ಎಂದು ರಶ್ಮಿಕಾ ಹೇಳಿದ್ದಾರೆ. ಈ ಸಾಲುಗಳನ್ನು ತೆಗೆದುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈ ಮೊದಲು ನೀಡಿದ ಸಂದರ್ಶನ ಒಂದರಲ್ಲಿ ‘ನಾನು ಹೈದರಾಬಾದ್ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ರಶ್ಮಿಕಾ ಕರ್ನಾಟಕದವರು ಎಂದಿದ್ದಾರೆ. ಅವರು ಸಿಂಪತಿ ಪಡೆದುಕೊಳ್ಳಲು ಹಾಗೂ ಪರಿಸ್ಥಿತಿಗೆ ತಕ್ಕಂತೆ ಊರನ್ನು ಬದಲಾಯಿಸುತ್ತಾರೆ ಎಂಬ ಕಾಮೆಂಟ್ಗಳು ವ್ಯಕ್ತವಾಗಿದೆ.
ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 30ರಂದು ರಿಲೀಸ್ ಆಗಿದೆ. ಆದರೆ ಜನರು ಈ ಸಿನಿಮಾವನ್ನು ಜನರು ಇಷ್ಟಪಟ್ಟಿಲ್ಲ. ಈ ಸಿನಿಮಾ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಮಾಡಿದೆ.