ದಕ್ಷಿಣ ಭಾರತದ ಕತೆಯಿರುವ ʼಪುಷ್ಪ 2’ ಟ್ರೈಲರ್ ಬಿಹಾರದಲ್ಲಿ ರಿಲೀಸ್‌ ; ಬ್ಲಾಕ್‌ ಬಸ್ಟರ್‌ ಸಿನಿಮಾ ಉತ್ತರಕ್ಕೆ ಹೋಗಿದ್ದು ಯಾಕೆ?

ಪುಷ್ಪ ಸಿನಿಮಾದ ಎರಡನೇ ಭಾಗದ ಟ್ರೇಲರ್‌ ರಿಲೀಸ್‌ನ ಅತೀ ದೊಡ್ಡ ಇವೆಂಟ್‌ ಬಿಹಾರದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಆದರೆ ಚಿತ್ರತಂಡ ಬಿಹಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೂ ಕಾರಣವಿದೆ.

Update: 2024-11-17 10:49 GMT
‘ಪುಷ್ಪ 2’ ಟ್ರೇಲರ್​ ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ.

'ಪುಷ್ಪ-2: ದಿ ರೂಲ್' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಪ್ರೇಮಿಗಳಿಗೆ ಭಾನುವಾರ ದೊಡ್ಡ ದಿನ. ಈ ಚಿತ್ರದ ಟ್ರೈಲರ್ ಭಾನುವಾರ ಬಿಡುಗಡೆಯಾಗಿದೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆ ನಿಭಾಯಿಸಿರುವ ಪುಷ್ಪ 2: ದಿ ರೂಲ್ ಸಿನಿಮಾದ ಟ್ರೈಲರ್ ಪಟನಾದ ಗಾಂಧಿ ಮೈದಾನದಲ್ಲಿ ಬಿಡುಗಡೆಯಾಗಿದೆ. ಟ್ರೇಲರ್‌ ರಿಲೀಸ್‌ಗಾಗಿ  ಬೃಹತ್ ವೇದಿಕೆ ಸಿದ್ದಪಡಿಸಲಾಗಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ದೊಡ್ಡ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇದಾಗಿದೆ. ಬಿಹಾರದ ರಾಜಧಾನಿಯಲ್ಲಿ ದೊಡ್ಡ ಬ್ಯಾನರ್‌, ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ  ಅವರನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. 

ಸಾಮಾನ್ಯವಾಗಿ ಸಿನಿಮಾಗಳ ಟ್ರೈಲರ್ ಲಾಂಚ್ ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ ‘ಪುಷ್ಪ 2’ ಸಿನಿಮಾವನ್ನು ನಿರ್ಮಾಣ ಮಾಡಿರುವ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಹಾಗೂ ಚಿತ್ರತಂಡ ಬಿಹಾರವನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.  ಬಾಕ್‌ಬಾಸ್ಟರ್‌ ಪುಪ್ಪಾ ಸಿನಿಮಾದ ಎರಡನೇ ಭಾಗದ ಟ್ರೇಲರ್‌ ರಿಲೀಸ್‌ನ ಅತೀ ದೊಡ್ಡ ಇವೆಂಟ್‌ ಬಿಹಾರದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಆದರೆ ಚಿತ್ರತಂಡ ಬಿಹಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೂ ಕಾರಣವಿದೆ. 

 ಬಿಹಾರವೇ ಏಕೆ? 

2021ರಲ್ಲಿ ತೆರೆಗೆ ಬಂದ ಪುಷ್ಟ ಚಿತ್ರದ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ಅಲ್ಲು ಅರ್ಜುನ್ ಪ್ಯಾನ್-ಇಂಡಿಯಾ ಜನಪ್ರಿಯತೆಯನ್ನು ಗಳಿಸಿದರು. ಅದಲ್ಲದೆ  ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದುಕೊಂಡರು. ಅಲ್ಲು ಅರ್ಜುನ್‌  ದೇಸಿ ದರೋಡೆಕೋರ ಅವತಾರವು ಜನಸಾಮಾನ್ಯರನ್ನು ಆಕರ್ಷಿಸಿತ್ತು. ಹರಿದ ಚಪ್ಪಲಿಯನ್ನು ಧರಿಸಿದ್ದರೂ ಸಹ ರಾಜನಂತೆ ಬದುಕಲು ಇಷ್ಟಪಡುವ ಪುಷ್ಪಾ ಕ್ಯಾರೆಕ್ಟರ್‌ ಬಿಹಾರದ ಜನತೆಯನ್ನು ಬಹಳಷ್ಟು ಸೆಳೆಯಿತು. ಪುಷ್ಪಾ ಅವರ ಜೀವನಶೈಲಿ, ಅವರ ಹಾವಭಾವ, ದೇಹ ಭಾಷೆ ಎಲ್ಲವೂ ವಿಶೇಷವಾಗಿ ಬಿಹಾರದ ಜನರನ್ನು ಹೆಚ್ಚು ಆಕರ್ಷಿಸಿತು. ಚಿತ್ರದ ಸಂಗೀತ, ವಿಶೇಷವಾಗಿ ʼಶ್ರೀವಲ್ಲಿʼ ಹಾಡು ತುಂಬಾ ಜನಪ್ರಿಯವಾಗಿತ್ತು. ಶ್ರೀವಲ್ಲಿ ಹಾಡಿನ ಅಲ್ಲು ಅರ್ಜುನ್‌ ಸಿಗ್ನೆಚರ್‌ ಸ್ಟೆಪ್‌ನ ರೀಲ್ಸ್‌ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಯಿತು. ಹೀಗಾಗಿ ಬಿಹಾರದಲ್ಲಿ ಅಲ್ಲು ಅರ್ಜುನ್‌ಗೆ ದೊಡ್ಡ ಅಭಿಮಾನಿಗಳ ಬಳಗವೇ  ಸೃಷ್ಟಿಯಾಯಿತು. ಸಿನಿತಂಡದ ವಿಶ್ಲೇಷಣೆಯ ಪ್ರಕಾರ ಬಿಹಾರದಲ್ಲಿ ಈ ಸಿನಿಮಾ ಅತೀ ದೊಡ್ಡ ಹಿಟ್‌ ಎನಿಸಿಕೊಂಡಿತು. ಹೀಗಾಗಿ ಸಿನಿಮಾದ ತಯಾರಕರು ಪಟನಾ ಭವ್ಯವಾದ ಟ್ರೇಲರ್ ಬಿಡುಗಡೆಯನ್ನು ಆಯೋಜಿಸುವ ಮೂಲಕ ಬಿಹಾರದಲ್ಲಿರುವ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ. 

Full View

ಗಲ್ಲಾಪೆಟ್ಟಿ ಗಳಿಕೆಗೆ ಮಾಸ್ಟರ್ ಪ್ಲ್ಯಾನ್

ಭಾವನಾತ್ಮಕ ಅಂಶದ ಹೊರತಾಗಿಯೂ ‘ಪುಷ್ಪ 2’ ತಂಡದವರು ಟ್ರೇಲರ್​ ಬಿಡುಗಡೆ ಮಾಡಲು ಬಿಹಾರವನ್ನು ಆಯ್ಕೆ ಮಾಡಿದ್ದು ಒಂದು ಮಾಸ್ಟರ್ ಪ್ಲ್ಯಾನ್ ಕೂಡ ಆಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ  ಅಲ್ಲು ಅರ್ಜನ್‌ ಪರಿಚಯವೇ ಬೇಕಿಲ್ಲ. ಪುಷ್ಪಾ ಜನಪ್ರಿಯತೆಯು ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕವಾಗಿದೆ. ಇಲ್ಲಿ ಕಾರ್ಯಕ್ರಮ ನಡೆಸದೇ ಇದ್ದರೂ,  ಗಲ್ಲಾಪೆಟ್ಟಿಗೆಯಲ್ಲಿ ಅದರ ಓಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭರವಸೆ ಚಿತ್ರತಂಡಕ್ಕಿದೆ. ಆದರೆ ಉತ್ತರ ಭಾರತದಲ್ಲಿ ಕೂಡ ಈ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗಬೇಕು ಎಂದರೆ ಅಲ್ಲಿ ಪ್ರಚಾರ ಚೆನ್ನಾಗಿಯೇ ಮಾಡಬೇಕು. ಆದ್ದರಿಂದ ಬಿಹಾರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಉತ್ತರ ಭಾರತದಲ್ಲಿ ವಿಶೇಷವಾಗಿ ಬಿಹಾರದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಖಂಡಿತವಾಗಿಯೂ ಜನಸಮೂಹವನ್ನು ಆಕರ್ಷಿಸುತ್ತದೆ. ಇದು ಪ್ರೇಕ್ಷಕರಲ್ಲಿ ಆತ್ಮೀಯತೆಯ ಭಾವನೆಯನ್ನು ನಿರ್ಮಿಸುತ್ತದೆ. ಜನರು ಥಿಯೇಟರ್‌ಗಳತ್ತ ಸೆಳೆಯಲು ಈ ಒಂದು ಮಾಸ್ಟರ್‌ ಪ್ಲಾನ್‌ ಅನ್ನು ಚಿತ್ರತಂಡ ಮಾಡಿದೆ. 

 ಟ್ರೇಲರ್‌ ಬಿಡುಗಡೆ

ನವೆಂಬರ್ 17ರ ಭಾನುವಾರ ಸಂಜೆ 5 ಗಂಟೆಗೆ ಪಾಟ್ನಾದ ಗಾಂಧಿ ಮೈದಾನದಲ್ಲಿ ಪುಷ್ಫ-2 ಚಿತ್ರದ  ಟ್ರೇಲರ್‌ ಬಿಡುಗಡೆಯಾಯಿತು. ಭೋಜ್​ಪುರಿ ತಾರೆ ಅಕ್ಷರಾ ಸಿಂಗ್ ವಿಶೇಷ ಮನೊರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕಾಗಿ ಗಾಂಧಿ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರೆಂದು ಅಂದಾಜಿಸಲಾಗಿದೆ.  ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿತ್ತು. ಗಾಂಧಿ ಮೈದಾನದ ಗೇಟ್ ಸಂಖ್ಯೆ 10 ರಿಂದ ಜನರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಜನರು ಇಲ್ಲಿಂದ ಉಚಿತ ಪಾಸ್‌ಗಳನ್ನು ಪಡೆದು ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟರು. ಸಂಜೆ ೫.00 ರಿಂದ 5.30 ರವರೆಗೆ ಪ್ರವೇಶ ನೀಡಲಾಯಿತು. ರಾತ್ರಿ 9 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು. 

ಬರೋಬ್ಬರಿ 2:44 ಸೆಕೆಂಡ್‌ನ ಟ್ರೇಲರ್‌ 

ಭಾನುವಾರ ಬಿಡುಗಡೆಯಾಗಲಿರುವ ಟ್ರೇಲರ್‌ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಟ್ವೀಟ್‌ ಹಂಚಿಕೊಂಡಿದ್ದು, ಟ್ರೈಲರ್​ ಬರೋಬ್ಬರಿ 2:44 ಸೆಕೆಂಡ್ ಇದೆ.  ‘ಪುಷ್ಪ 2’ ಸಿನಿಮಾದ ಟ್ರೈಲರ್ ಪ್ರಾರಂಭದಿಂದ ಅಂತ್ಯದವರೆಗೂ ‘ಮಾಸ್ ಮ್ಯಾಡ್​ನೆಸ್’.  ‘ಪುಷ್ಪ 2’ ಸಿನಿಮಾದ ಟ್ರೈಲರ್ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಾಗಿಯೇ ಇಟ್ಟುಕೊಳ್ಳಿ, ನೀವು ಎಷ್ಟು ಹೆಚ್ಚು ನಿರೀಕ್ಷೆ ಇಟ್ಟುಕೊಂಡರೂ ಅದನ್ನು ರೀಚ್ ಆಗುತ್ತದೆ ಈ ಟ್ರೈಲರ್’ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 

ಡಿಸೆಂಬರ್​ 5ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದು,  ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಕಲಾವಿದರು ಕೂಡ ಬಣ್ಣ ಹಚ್ಚಿದ್ದಾರೆ. ಇಂದು ಟ್ರೇಲರ್‌ ಬಿಡುಗಡೆಯಾಗುತ್ತಿದ್ದು, ಟ್ರೈಲರ್​ನಲ್ಲಿ ಏನೇನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

Tags:    

Similar News