ನೂರು ದಿನಗಳ ಚಿತ್ರೀಕರಣ ಪೂರೈಸಿದ ʼಅಜಾಗ್ರತʼ ಚಿತ್ರ

ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ಅಜಾಗ್ರತ ಚಿತ್ರ ನೂರು ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.;

Update: 2024-02-14 06:24 GMT
ನಿರ್ದೇಶಕ ಎಂ.ಶಶಿಧರ್ ಅವರ ಹುಟ್ಟುಹಬ್ಬ ಹಾಗೂ ಚಿತ್ರ ನೂರು ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ.
Click the Play button to listen to article

ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ಅಜಾಗ್ರತ ಚಿತ್ರ ನೂರು ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

ಈ ಚಿತ್ರವನ್ನು ಎಂ.ಶಶಿಧರ್ ನಿರ್ದೇಶನ ಮಾಡುತ್ತಿದ್ದು, ಇತ್ತೀಚಿಗೆ ಅವರ ಹುಟ್ಟುಹಬ್ಬ ಹಾಗೂ ಚಿತ್ರ ನೂರು ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ನಿರ್ಮಾಪಕ ರವಿರಾಜ್ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ನಿರ್ದೇಶಕರಿಂದ ನೂರು ಕೆ.ಜಿ ಕೇಕ್ ಕಟ್ ಮಾಡಿಸಿದರು. ಇಡೀ ಚಿತ್ರತಂಡ ಈ ಸಂದರ್ಭದಲ್ಲಿ ಭಾಗಿಯಾಗಿತ್ತು.

ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ನಾಯಕನಾಗಿದ್ದು, ಬಾಬಿ ಸಿಂಹ, ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರ ತಾರಾಬಳಗವಿದೆ, ಈ ಚಿತ್ರವನ್ನು ರವಿರಾಜ್ ನಿರ್ಮಾಣ ಮಾಡಿದ್ದು, ಚಿತ್ರ ಕನ್ನಡ,ತೆಲುಗು, ಸೇರಿದಂತೆ ಏಳು ಭಾಷೆಗಳಲ್ಲಿ  ನಿರ್ಮಾಣವಾಗುತ್ತಿದೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Tags:    

Similar News