ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಗೆಲ್ಲುವ ಭರವಸೆ
ಹ್ಯಾರಿಸ್ ಅವರು ಸ್ವಾತಂತ್ರ್ಯ, ಸಹಾನುಭೂತಿ ಮತ್ತು ಕಾನೂನಿನ ಆಳ್ವಿಕೆಯ ದೇಶದಲ್ಲಿ ಅಥವಾ ಅವ್ಯವಸ್ಥೆ, ಭಯ ಮತ್ತು ದ್ವೇಷದಿಂದ ತುಂಬಿದ ದೇಶದಲ್ಲಿ ಬದುಕಲು ಬಯಸುತ್ತೀರಾ ಎಂದು ಬೆಂಬಲಿಗರನ್ನು ಕೇಳಿದರು.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್, ಶ್ವೇತಭವನದ ರೇಸ್‌ನಲ್ಲಿ ತನ್ನನ್ನು ತಾನು ಅಂಡರ್‌ಡಾಗ್ ಎಂದು ಕರೆದಿದ್ದಾರೆ. ತಾನು ಜನಶಕ್ತಿಯ ಪ್ರಚಾರದಿಂದ ನವೆಂಬರ್‌ನಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆ ರೇಸ್‌ನಲ್ಲಿ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದ ಬಳಿಕ ಪ್ರಚಾರವನ್ನು ಕೈಗೆತ್ತಿಕೊಂಡ ಹ್ಯಾರಿಸ್, ಈ ವರ್ಷದ ಚುನಾವಣೆಯು ದೇಶಕ್ಕೆ ಎರಡು ದೃಷ್ಟಿಕೋನಗಳ ನಡುವಿನ ಆಯ್ಕೆಯಾಗಿದೆ. ಒಂದು ದೇಶದ ಪ್ರಗತಿ ಹಾಗೂ ಇನ್ನೊಂದು ದೇಶದ ಪ್ರಗತಿಯನ್ನು ಹಾಳು ಮಾಡುವುದರಲ್ಲಿ ನಿಂತಿದೆ ಎಂದು ತಮ್ಮ ಬೆಂಬಲಿಗರಿಗೆ ಹೇಳಿದರು.
ಹ್ಯಾರಿಸ್ USD 1.4 ಮಿಲಿಯನ್ ಸಂಗ್ರಹ
ಹ್ಯಾರಿಸ್ ಅವರು ಮ್ಯಾಸಚೂಸೆಟ್ಸ್‌ನ ಪಿಟ್ಸ್‌ಫೀಲ್ಡ್‌ನಲ್ಲಿ 800 ನಿಧಿಸಂಗ್ರಹಗಾರರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರೇಸ್‌ನಲ್ಲಿ ನಾವು ಅಂಡರ್‌ಡಾಗ್. ಆದರೆ ಇದು ಜನರ-ಚಾಲಿತ ಅಭಿಯಾನವಾಗಿದೆ. ತಮ್ಮ ಅಭಿಯಾನವು "ಡೆಮಾಕ್ರಟಿಕ್ ನಾಮನಿರ್ದೇಶನವನ್ನು ಪಡೆಯಲು ಸಾಕಷ್ಟು ಪ್ರತಿನಿಧಿಗಳ ಬೆಂಬಲವನ್ನು ಗಳಿಸಿದೆ. ನಾವು ಯಾವ ರೀತಿಯ ದೇಶದಲ್ಲಿ ವಾಸಿಸಲು ಬಯಸುತ್ತೇವೆ? ನಾವು ಸ್ವಾತಂತ್ರ್ಯ, ಸಹಾನುಭೂತಿ ಮತ್ತು ಕಾನೂನಿನ ಆಳ್ವಿಕೆಯ ದೇಶದಲ್ಲಿ ಬದುಕಲು ಬಯಸುತ್ತೇವೆಯೇ ಅಥವಾ ಅವ್ಯವಸ್ಥೆ, ಭಯ ಮತ್ತು ದ್ವೇಷದ ದೇಶದಲ್ಲಿ ಬದುಕಲು ಬಯಸುತ್ತೇವೆಯೇ? ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಶನಿವಾರದ ನಿಧಿಸಂಗ್ರಹದ ಸಮಯದಲ್ಲಿ ಅವರು USD 400,000 ಮೂಲ ಗುರಿಯ ವಿರುದ್ಧ USD 1.4 ಮಿಲಿಯನ್ ಸಂಗ್ರಹಿಸಿದರು.
ಮಾಜಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಲು ಒಪ್ಪುವುದಾಗಿ ಹೇಳಿರುವ ಅವರು ಟ್ರಂಪ್ ಚರ್ಚೆಯಿಂದ ಹಿಂದೆ ಸರಿದಿರುವುದನ್ನು ನೀವು ನೋಡಿರಬಹುದು. ನಾವು ಮಾತನಾಡಲು ಸಾಕಷ್ಟು ಇರುವುದರಿಂದ ಅವರು ಮರುಪರಿಶೀಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.