ಪಾಕಿಸ್ತಾನಿ ಪ್ರಜೆಗಳ ಅಕ್ರಮ ವಾಸಕ್ಕೆ ನೆರವಾದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಅಕ್ರಮವಾಗಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶದ 55 ವರ್ಷದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Update: 2024-10-07 12:13 GMT
ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
Click the Play button to listen to article

ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಅಕ್ರಮವಾಗಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶದ 55 ವರ್ಷದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ 22 ಮಂದಿ ಪಾಕಿಸ್ತಾನಿ ಪ್ರಜೆಗಳಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಸಹಾಯ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಕಳೆದ ವಾರ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಎರಡು ಕುಟುಂಬದ ಏಳು ಜನರನ್ನು ಪೊಲೀಸರು ಬಂಧಿಸಿದ್ದರು. ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಎರಡು ಪಾಕಿಸ್ತಾನಿ ಕುಟುಂಬಗಳಿಗೆ ನೆರವಾಗಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದ ಮುಂಬೈನಲ್ಲಿ ನೆಲೆಸಿದ್ದ ಉತ್ತರಪ್ರದೇಶ ಮೂಲದ ಪರ್ವೇಜ್ ಅಹ್ಮದ್ ಅಲಿಯಾಸ್ ಫರ್ವೇಜ್ ಅವರನ್ನು ಅ.5 ರಂದು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಪರ್ವೇಜ್ ಕನಿಷ್ಠ ಐದು ಕುಟುಂಬಗಳಿಗೆ ಹಿಂದೂ ಗುರುತು ಚೀಟಿ ನೀಡಿ ಭಾರತದಲ್ಲಿ ನೆಲೆಸಲು ಸಹಾಯ ಮಾಡಿದ್ದಾನೆ ಎಂದು ಹೇಳಲಾಗಿದೆ. ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಇತರ ವಿದೇಶಿ ಪ್ರಜೆಗಳಿಗೆ ನೆಲೆಸಲು ಸಹಾಯ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಬೆಂಗಳೂರಿನ ದಕ್ಷಿಣ ಹೊರವಲಯದಲ್ಲಿರುವ ರಾಜಾಪುರದಲ್ಲಿ ಹಿಂದೂ ಹೆಸರಿನಲ್ಲಿ ವಾಸಿಸುತ್ತಿದ್ದ ನಾಲ್ಕು ಜನರ ಪಾಕಿಸ್ತಾನಿ ಕುಟುಂಬವನ್ನು ಸೆಪ್ಟೆಂಬರ್ 29 ರಂದು ಜಿಗಣಿ ಪೊಲೀಸರು ಬಂಧಿಸಿದ್ದರು. ಇವರ ಬಂಧನದ ಬಳಿಕ ಉತ್ತರ ಬೆಂಗಳೂರಿನ ಪೀಣ್ಯ ಬಳಿ ವಾಸಿಸುತ್ತಿದ್ದ 13 ವರ್ಷದ ಬಾಲಕಿ ಸೇರಿದಂತೆ ಮೂವರು ಸದಸ್ಯರನ್ನು ಒಳಗೊಂಡ ಮತ್ತೊಂದು ಕುಟುಂಬವನ್ನು ಪತ್ತೆ ಹಚ್ಚಿ ಬಂಧಿಸಲಾಗಿತ್ತು. ಎರಡೂ ಕುಟುಂಬಗಳು ಮೆಹ್ದಿ ಫೌಂಡೇಶನ್ ಇಂಟರ್ನ್ಯಾಷನಲ್ (MFI) ನೊಂದಿಗೆ ಸಂಬಂಧ ಹೊಂದಿವೆ ಎಂದು ವರದಿಯಾಗಿದೆ. 

ಪರ್ವೇಜ್ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಲು ಮತ್ತು ಆರಂಭದಲ್ಲಿ ದೆಹಲಿಯಲ್ಲಿ ನೆಲೆಸಲು ಸಹಾಯ ಮಾಡಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

MFI ಫೌಂಡೇಶನ್ನೊಂದಿಗೆ ಪರ್ವೇಜ್‌ ಸಂಪರ್ಕ

MFI ನೊಂದಿಗೆ ಪರ್ವೇಜ್ ಅವರ ಒಡನಾಟವು 2007 ರ ಹಿಂದಿನದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರ 63 ಸದಸ್ಯರು ಭಾರತಕ್ಕೆ ಆಗಮಿಸಿ ತಮ್ಮ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಸುಟ್ಟು ನವದೆಹಲಿಯಲ್ಲಿ ಪ್ರತಿಭಟಿಸಿದರು. ಈ ಪ್ರತಿಭಟನಾಕಾರರಲ್ಲಿ ಒಬ್ಬ ಮಹಿಳೆ ಪರ್ವೇಜ್ ಅವರನ್ನು ವಿವಾಹವಾದರು. ಇತರರಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡಲಾಯಿತು ಮತ್ತು ಯುರೋಪಿಯನ್ ದೇಶಗಳಲ್ಲಿ ಪುನರ್ವಸತಿ ಮಾಡಲಾಯಿತು. ಆದರೆ ಪರ್ವೇಜ್ ಅವರ ಪತ್ನಿ ತಮ್ಮ ಮದುವೆಯ ನಂತರ ಭಾರತದಲ್ಲಿಯೇ ಇದ್ದರು.

ಪರ್ವೇಜ್ ಅವರ ಪತ್ನಿ ದೆಹಲಿಯಲ್ಲಿ ನೆಲೆಸಿದ್ದು, ವಿವಾಹವಾದ ಕಾರಣ ಕಾನೂನು ಸ್ಥಾನಮಾನದ ವ್ಯವಸ್ಥೆಯ ಭಾಗವಾಗಿ ದೆಹಲಿ ವಿಶೇಷ ಶಾಖೆಗೆ ವಾರಕ್ಕೊಮ್ಮೆ ವರದಿ ಮಾಡುತ್ತಾರೆ ಎಂದು ಅಧಿಕಾರಿ ಹೇಳಿದರು. ಅವರ ಮದುವೆಯ ಬಳಿಕ ಪರ್ವೇಜ್ ಕೂಡ MFI ಗೆ ಸೇರಿದ್ದು, ಪ್ರತಿಷ್ಠಾನದ ನಂಬಿಕೆಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News