ಅರವಿಂದ್ ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದ ಜಾರಿ ನಿರ್ದೇಶನಾಲಯ
ಫೆಬ್ರವರಿ 3 ರಂದು ಇಡಿ ತನ್ನ ಸಮನ್ಸ್ ಅನ್ನು ಪಾಲಿಸದ ಕಾರಣ ಕೇಜ್ರಿವಾಲ್ ವಿರುದ್ಧ ಹೊಸ ದೂರು ದಾಖಲಿಸಿದೆ.
By : The Federal
Update: 2024-02-17 11:00 GMT
ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಇಡಿ ನೀಡಿದ್ದ ಸಮನ್ಸ್ ಪಾಲಿಸದ ಹಿನ್ನಲೆ ಜಾರಿ ನಿರ್ದೇಶನಾಲಯ (ಇಡಿ) ದೂರು ನೀಡಿದ್ದು, ಕೇಜ್ರಿವಾಲ್ ಶನಿವಾರ ಇಲ್ಲಿ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ.
ನ್ಯಾಯಾಲಯವು ಫೆಬ್ರವರಿ 7 ರಂದು ಕೇಜ್ರಿವಾಲ್ ಗೆ ಫೆಬ್ರವರಿ 17 ಕ್ಕೆ ಸಮನ್ಸ್ ನೀಡಿತ್ತು. ಆದರೆ ಕೇಜ್ರಿವಾಲ್ ಕುಂಟು ನೆಪಗಳನ್ನು ಹೇಳಿ ಸಮನ್ಸ್ ಗಳನ್ನು ಪಾಲಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ದೂರಿನಲ್ಲಿ ಆರೋಪಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕರು ಈ ಹಿಂದೆ ಇಡಿಗೆ ಪತ್ರ ಬರೆದಿದ್ದು, ಅವರಿಗೆ ನೀಡಲಾದ ಸಮನ್ಸ್ ಗಳನ್ನು "ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ"ವಾಗಿದೆ. ಚುನಾವಣಾ ಪ್ರಚಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.