ಉತ್ತರಪ್ರದೇಶ: ಬಿಜೆಪಿಯ ರಾಜ್ಯಸಭೆ ಗೆಲುವು ಲೋಕಸಭೆಗೆ ಮುನ್ನುಡಿಯೇ?

Update: 2024-02-28 06:09 GMT

ʻಆತ್ಮಸಾಕ್ಷಿಯ ಮತʼ ಎನ್ನುವುದು ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಆದಂತೆ ಉತ್ತರ ಪ್ರದೇಶದಲ್ಲೂ ಫೆಬ್ರವರಿ 27ರಂದು ಕೈಚ ಳಕ ಮಾಡಿದೆ. ಸಮಾಜವಾದಿ ಪಕ್ಷದ (ಎಸ್ಪಿ) ಏಳು ಶಾಸಕರು ಬಿಜೆಪಿ ನಾಮನಿರ್ದೇಶಿತರಿಗೆ ಮತ ಹಾಕಿದರು. ಇದರಿಂದ ಎಸ್ಪಿ ಅಭ್ಯರ್ಥಿ ಮಾಜಿ ರಾಜ್ಯ ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಅವರ ಸೋಲಿಗೆ ಕಾರಣವಾಯಿತು.

ಬಿಜೆಪಿಗೆ ಬೋನಸ್ ಗೆಲುವು: ಬಿಜೆಪಿ ಆರ್‌ಪಿಎನ್ ಸಿಂಗ್, ಚೌಧರಿ ತೇಜ್‌ವೀರ್ ಸಿಂಗ್, ಅಮರ್‌ಪಾಲ್ ಮೌರ್ಯ, ಸಂಗೀತಾ ಬಲ್ವಂತ್, ಸುಧಾಂಶು ತ್ರಿವೇದಿ, ಸಾಧನಾ ಸಿಂಗ್ ಮತ್ತು ನವೀನ್ ಜೈನ್ ಅವರುಗಳ ಜಯದ ಜೊತೆಗೆ ಎಂಟನೇ ಅಭ್ಯರ್ಥಿಯಾದ ಉದ್ಯಮಿ ಮತ್ತು ಮಾಜಿ ಎಸ್ಪಿ ಸಂಸದ ಸಂಜಯ್ ಸೇಠ್ ಅವರನ್ನೂ ಗೆಲ್ಲಿಸಿಕೊಂಡಿತು. ಕಳೆದ ತಿಂಗಳು ಆರ್‌ಎಲ್‌ಡಿಯ ಜಯಂತ್ ಚೌಧರಿ, ಎನ್‌ಡಿಎಗೆ ಸೇರ್ಪಡೆಗೊಂಡ ಬಳಿಕ ಅಖಿಲೇಶ್ ಯಾದವ್ ಅವರ ಪಕ್ಷ ತೆರವಾದ ಮೂರರಲ್ಲಿ ಎರಡು ಸ್ಥಾನ ಮಾತ್ರ ಗೆದ್ದುಕೊಂಡಿತು. ಜಯಾ ಬಚ್ಚನ್ ಮತ್ತು ದಲಿತ ನಾಯಕ ರಾಮ್‌ಜಿಲಾಲ್ ಸುಮನ್ ಅವರು ಸುಲಭ ಗೆಲುವು ಸಾಧಿಸಿದ್ದು, ಮುಖ್ಯ ಸಚೇತಕ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಏಳು ಸಮಾಜವಾದಿ ಶಾಸಕರು ಅಡ್ಡ ಮತ ಚಲಾಯಿಸಿದರು. 

ರಾಜ್ಯದಿಂದ 10 ಸ್ಥಾನ ಖಾಲಿ ಇದ್ದು, ಪ್ರತಿ ಅಭ್ಯರ್ಥಿ ಗೆಲುವಿಗೆ ಕನಿಷ್ಠ 37 ಪ್ರಥಮ ಪ್ರಾಶಸ್ತ್ಯದ ಮತ ಗಳಿಸಿಬೇಕಿತ್ತು. ಎಸ್ಪಿ ಬಳಿ ತನ್ನ ಮೂವರೂ ಅಭ್ಯರ್ಥಿಗಳನ್ನು ಚುನಾಯಿಸಲು ಅಗತ್ಯವಿರುವಷ್ಟು ಸ್ಥಾನ ಬಲ ಇರಲಿಲ್ಲ. ಏಳು ಎಸ್‌ಪಿ ಶಾಸಕರು ಕೇಸರಿ ಪಕ್ಷಕ್ಕೆ ಮತ ಚಲಾಯಿಸಿದರು.

ಅಖಿಲೇಶ್ ಸಂದಿಗ್ಧ: ಜಯಂತ್ ಚೌಧರಿ ಅವರ ನಿರ್ಗಮನ ಮತ್ತು ಒಬಿಸಿ ಅಥವಾ ಅಲ್ಪಸಂಖ್ಯಾತ ನಾಯಕರನ್ನು ಬೆಂಬಲಿಸುವ ಬದಲು ಚುನಾವಣೆಯಲ್ಲಿ ಮೇಲ್ವರ್ಗದ ಜಯಾ ಬಚ್ಚನ್ ಮತ್ತು ಅಲೋಕ್ ರಂಜನ್ ಅವರನ್ನು ಕಣಕ್ಕಿಳಿಸುವ ನಿರ್ಧಾರದಿಂದ ಅಖಿಲೇಶ್ ಎಸ್‌ಪಿ ಸಹೋದ್ಯೋಗಿಗಳ ಟೀಕೆಗೆ ಗುರಿಯಾಗಿದ್ದರು. ಅಡ್ಡ ಮತ ಚಲಾಯಿಸಲು ತಯಾರಿ ನಡೆಸುತ್ತಿರುವವರಿಗೆ ʻಸರ್ಕಾರದ ಎದುರು ನಿಲ್ಲುವ ಧೈರ್ಯ ಇಲ್ಲʼ, ʻಬಿಜೆಪಿಯಿಂದ ಬೆದರಿಕೆ ಅಥವಾ ಆಮಿಷಕ್ಕೆ ಒಳಗಾಗಿದ್ದಾರೆʼ ಅಥವಾ ʻಕೇಸರಿ ನಾಯಕತ್ವದ ಆಶ್ವಾಸನೆಗಳಿಂದ ಮೂರ್ಖರಾಗಿದ್ದಾರೆʼ ಎಂದು ಆರೋಪಿಸಿದರು. 

ʻಪಿಡಿಎ ( ಪಿಚ್‌ಡಾ , ದಲಿತ, ಅಲ್ಪಸಂಖ್ಯಾತ್)‌ ಸಬಲೀಕರಣಕ್ಕೆʼ ಮತ್ತು ʻಪರೀಕ್ಷೆಗೆ ಮೂರನೇ ಅಭ್ಯರ್ಥಿಯನ್ನು (ರಂಜನ್) ಹಾಕಿದ್ದೇನೆʼ ಎಂದು ಅಖಿಲೇಶ್‌ ಹೇಳಿದರು. ಅಪ್ನಾ ದಳ (ಕಾಮೆರವಾದಿ) ನಾಯಕಿ ಪಲ್ಲವಿ ಸಿಂಗ್ ಮತ್ತು ಎಸ್‌ಪಿ ಮಾಜಿ ಎಂಎಲ್‌ಸಿ ಸ್ವಾಮಿ ಪ್ರಸಾದ್ ಮೌರ್ಯ ಅವರಂತಹ ಮಿತ್ರಪಕ್ಷಗಳಿಂದ ಟೀಕೆಗೆ ಗುರಿಯಾದರೂ, ʻಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡುವವರು ಪಿಡಿಎಗಳಿಗೆ ದ್ರೋಹ ಬಗೆದಿದ್ದಾರೆʼ ಎಂದು ಹೇಳಿದರು.

ಅಖಿಲೇಶ್, ಕಾಂಗ್ರೆಸ್‌ ಮೈತ್ರಿ: ರಾಜ್ಯಸಭೆಯಲ್ಲಿ 7 ಸ್ಥಾನಗಳ ಬದಲು ಬಿಜೆಪಿ ಎಂಟು ಸ್ಥಾನ ಪಡೆದುಕೊಂಡಿದೆ. ದ ಫೆಡರಲ್‌ ಜೊತೆ ಮಾನಾಡಿದ ಲಕ್ನೋ ಮೂಲದ ರಾಜಕೀಯ ವಿಮರ್ಶಕ ಶರತ್ ಪ್ರಧಾನ್, ಕೆಲವು ಎಸ್‌ಪಿ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎನ್ನುವ ಬದಲು ಕೇಸರಿ ಪಕ್ಷವು ಅಂಥ ಶಾಸಕರನ್ನು ಸೂಕ್ಷ್ಮವಾಗಿ ಗುರುತಿಸಿದೆ ಎಂಬುದು ಹೆಚ್ಚು ಮಹತ್ವದ್ದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದು ಹೆಚ್ಚಿನ ಉದ್ದೇಶವನ್ನು ಪೂರೈಸುವ ನಿರೀಕ್ಷೆಯಿದೆ. ಈ ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಮಾಡಿದ ಹಾನಿ ಎಸ್‌ಪಿಗೆ ಸೀಮಿತವಾಗಿರದೆ, ಕಾಂಗ್ರೆಸ್‌ಗೂ ವಿಸ್ತರಿಸುತ್ತದೆ ಎಂದು ಪ್ರಧಾನ್ ಹೇಳುತ್ತಾರೆ. 

ಬಿಜೆಪಿಗೆ ಅಡ್ಡ ಮತದಾನ ಮಾಡಿದ ಏಳು ಶಾಸಕರು ಮತ್ತು ಮತದಾನದಿಂದ ದೂರ ಉಳಿದಿರುವ ಎಸ್‌ಪಿ ಶಾಸಕ ಮಹಾರಾಜಿ ಪ್ರಜಾಪತಿ, ಕಾಂಗ್ರೆಸ್ಸಿನ ಮೊದಲ ಕುಟುಂಬವಾದ ನೆಹರೂ-ಗಾಂಧಿ ಕುಟುಂಬದ ನೆಲೆಯಾದ ಅಮೇಥಿ ಮತ್ತು ರಾಯ್‌ಬರೇಲಿ ಲೋಕಸಭೆ ಕ್ಷೇತ್ರಗಳಲ್ಲಿ ಪ್ರಭಾವವನ್ನು ಹೊಂದಿರುವುದು ಕೇವಲ ಕಾಕತಾಳೀಯವಲ್ಲ. ಮನೋಜ್ ಕುಮಾರ್ ಪಾಂಡೆ ಮತ್ತು ರಾಕೇಶ್ ಪ್ರತಾಪ್ ಸಿಂಗ್ ಈ ಹಿಂದೆ ಅಖಿಲೇಶ್‌ ಅವರ ಬಲಗೈ ಆಗಿದ್ದು, ರಾಯ್ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳ ಅಡಿಯಲ್ಲಿ ಬರುವ ಉಂಚಹಾರ್ ಮತ್ತು ಗೌರಿಗಂಜ್ ವಿಧಾನಸಭಾ ಕ್ಷೇತ್ರಗಳಿಂದ ಬಹು ಅವಧಿಯ ಶಾಸಕರಾಗಿದ್ದಾರೆ.

ಎಚ್ಚರಿಕೆ ಅಗತ್ಯ: ಮನೋಜ್‌ ಕುಮಾರ್‌ ಪಾಂಡೆ ಅವರನ್ನು ರಾಯ್ ಬರೇಲಿಯಿಂದ ಬಿಜೆಪಿ ಕಣಕ್ಕಿಳಿಸಬಹುದು ಎಂಬ ವದಂತಿಯಿದೆ. ಸೋನಿಯಾ ಗಾಂಧಿ 2004 ರಿಂದ ಪ್ರತಿನಿಧಿಸುತ್ತಿರುವ ಈ ಕ್ಷೇತ್ರ ಅವರು ರಾಜ್ಯಸಭೆ ಮಾರ್ಗದ ಮೂಲಕ ಸಂಸತ್ತಿಗೆ ಪ್ರವೇಶಿಸಿರುವುದುರಿಂದ ತೆರವಾಗಿದೆ. ಮಾಜಿ ಸಚಿವ , ಈಗ ಸೆರೆಮನೆಯಲ್ಲಿರುವ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಪತ್ನಿ ಪ್ರಜಾಪತಿ ಅವರು ಅಮೇಥಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ಅವರ ಪತಿಯ ಪ್ರಭಾವ ಗಮನಾರ್ಹವಾಗಿದೆ. 

ಎಸ್‌ಪಿಯ ಮೂರನೇ ಅವಧಿಯ ಬಿಸೌಲಿ ಶಾಸಕ ಮತ್ತು ದಲಿತ ನಾಯಕ ಅಶುತೋಷ್ ಮೌರ್ಯ ಅವರು ಅಡ್ಡ ಮತದಾನ ಮಾಡಿದ್ದಾರೆ. ಮೌರ್ಯ ಅವರ ವಿಧಾನಸಭೆ ಕ್ಷೇತ್ರವು ಬದೌನ್ ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದು, ಅಲ್ಲಿ ಅಖಿಲೇಶ್ ಅವರ ಚಿಕ್ಕಪ್ಪ ಮತ್ತು ಪಕ್ಷದ ವರಿಷ್ಠ ಶಿವಪಾಲ್ ಯಾದವ್ ಅವರ ಉಮೇದುವಾರ. ಅದೇ ರೀತಿ ಜಲಾಲ್‌ಪುರ ಶಾಸಕ ರಾಕೇಶ್ ಪಾಂಡೆ, ಅವರ ಪುತ್ರ ಅಂಬೇಡ್ಕರ್ ನಗರ ಸಂಸದ ರಿತೇಶ್ ಪಾಂಡೆ ಭಾನುವಾರ ಬಿಎಸ್‌ಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಗೋಶೈಗಂಜ್ ಶಾಸಕ ಅಭಯ್ ಸಿಂಗ್, ಚಲಿ ಕ್ಷೇತ್ರದ ಶಾಸಕಿ ಪೂಜಾ ಪಾಲ್ ಮತ್ತು ಜಲೌನ್ ಶಾಸಕ ವಿನೋದ್ ಚತುರ್ವೇದಿ-ಅವರೆಲ್ಲರೂ ಅಡ್ಡ ಮತದಾನ ಮಾಡಿದವರಾಗಿದ್ದು, ತಮ್ಮ ಅಸೆಂಬ್ಲಿ ವಿಭಾಗಗಳನ್ನು ದಾಟಿದ ರಾಜಕೀಯ ಸ್ನಾಯು ಹೊಂದಿದ್ದಾರೆ. 

ಜಾತಿ ಲೆಕ್ಕಾಚಾರದಿಂದಲೂ ಈ ಶಾಸಕರನ್ನು ಬಿಜೆಪಿ ಗುರುತಿಸಿದೆ. ಅಡ್ಡಮತದಾನ ಮಾಡಿದವರು ಒಂದೇ ಜಾತಿಗೆ ಸೇರಿದವರಲ್ಲ; ಠಾಕೂರ್‌ಗಳು, ಬ್ರಾಹ್ಮಣರು, ದಲಿತ-ಜಾತವ್‌ಗಳು ಮತ್ತು ಹಿಂದುಳಿದ ಜಾತಿಗಳವರು ಇದ್ದಾರೆ. ಅಖಿಲೇಶ್ ಅವರ ಪಿಡಿಎ ಸಮುದಾಯದವರನ್ನು ಓಲೈಸಲು ಬಿಜೆಪಿ ಪ್ರಯತ್ನಿಸುತ್ತಿದೆ. 

ಬಿಜೆಪಿ ಗುರಿ ರಾಜ್ಯಸಭಾ ಚುನಾವಣೆ ಅಲ್ಲ; ಹಲವು ವಾರ ಬಾಕಿ ಇರುವ ಲೋಕಸಭೆ ಚುನಾವಣೆ. ಹೀಗಾಗಿ, ಗುರಿ ಎಂಟು ರಾಜ್ಯಸಭಾ ಸ್ಥಾನ ಅಲ್ಲ. ಬದಲಾಗಿ, 80 ಸ್ಥಾನ ಎಂದು ಅರ್ಥಮಾಡಿಕೊಳ್ಳಬೇಕು.

Tags:    

Similar News