ಪುಟಿನ್ ನನ್ನ ಪತಿಯನ್ನು ಕೊಂದಿದ್ದಾರೆ': ಯೂಲಿಯಾ ನವಲ್ನಾಯಾ

Update: 2024-02-19 14:21 GMT

ʻಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನನ್ನ ಪತಿಯನ್ನು ಕೊಂದಿದ್ದಾರೆʼ ಎಂದು ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರ ಪತ್ನಿ ಯುಲಿಯಾ ನವಲ್ನಾಯಾ ಆರೋಪ ಮಾಡಿದ್ದಾರೆ. 

ಆರ್ಕ್ಟಿಕ್ ಜೈಲಿನಲ್ಲಿ ಪತಿಯ ಹಠಾತ್ ಸಾವನ್ನು ಮುಚ್ಚಿ ಹಾಕಲಾಗಿದೆʼ ಎಂದು ದೂರಿದರು. ಆದರೆ, ರಷ್ಯಾ ಸರ್ಕಾರವು ಈ ಬಗ್ಗೆ ತುಟಿ ಬಿಚ್ಚಿಲ್ಲ. ದೇಶದ ಉನ್ನತ ಅಪರಾಧ ತನಿಖಾ ಸಂಸ್ಥೆಯಾದ ಇನ್ವೆಸ್ಟಿಗೇಟಿವ್‌ ಕಮಿಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಬಗ್ಗೆ ಅಧಿಕೃತ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದೆ. 

ʻಮೂರು ವರ್ಷಗಳ ಹಿಂಸೆ ಮತ್ತು ಚಿತ್ರಹಿಂಸೆಯಿಂದ ಅಲೆಕ್ಸಿ ನಿಧನರಾದರುʼ ಎಂದು ವೀಡಿಯೊ ಮಾತುಕತೆಯಲ್ಲಿ ಹೇಳಿದರು. ಪತಿಗೆ ನ್ಯಾಯ ದೊರಕಿಸಿಕೊಡುವಂತೆ ಹೋರಾಟ ನಡೆಸುತ್ತಿರುವ ನವಲ್ನಾಯಾ, ಪತಿಯ ಸಾವಿನ ನಂತರವೂ ತನ್ನ ಕೆಲಸವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. 

ʻಅಲೆಕ್ಸ್‌ ಮತ್ತು ನಮಗಾಗಿ ನಾವು ಮಾಡಬಹುದಾದ ಪ್ರಮುಖ ಕೆಲಸವೆಂದರೆ, ಮೊದಲಿಗಿಂತ ಹೆಚ್ಚು ತೀವ್ರವಾಗಿ ಮತ್ತು ಹೆಚ್ಚು ಉಗ್ರವಾಗಿ ಹೋರಾಡುವುದುʼ ಎಂದು ಹೇಳಿದರು. ʻಯುದ್ಧ, ಭ್ರಷ್ಟಾಚಾರ ಹಾಗೂ ಅನ್ಯಾಯದ ವಿರುದ್ಧ, ನ್ಯಾಯಯುತ ಚುನಾವಣೆ ಮತ್ತು ವಾಕ್ ಸ್ವಾತಂತ್ರ್ಯ, ನಮ್ಮ ದೇಶವನ್ನು ಮರಳಿ ಪಡೆಯಲು ಹೋರಾಡಬೇಕಿದೆ. ನನ್ನ ಪತಿ ಏಕೆ ಕೊಲ್ಲಲ್ಪಟ್ಟರು ಎಂದು ನನಗೆ ತಿಳಿದಿದೆʼ ಎಂದು ಹೇಳಿದರು. 

ಸೋಮವಾರ ಮುಂಜಾನೆ ನವಲ್ನಿ ಅವರ ತಾಯಿಗೆ ಶವಾಗಾರಕ್ಕೆ ಪ್ರವೇಶ ನಿರಾಕರಿಸಲಾಯಿತು. 

Tags:    

Similar News