ಸಾಯುತ್ತೇವೆ ಎಂದುಕೊಂಡಿದ್ದೆವು: ಸ್ಪ್ಯಾನಿಷ್ ಪ್ರವಾಸಿಗರ ಅಳಲು

Update: 2024-03-03 09:43 GMT

ಜಾರ್ಖಂಡ್‌,ಮಾ.2- ದುಮ್ಕಾದಲ್ಲಿ ಶುಕ್ರವಾರ ರಾತ್ರಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸ್ಪೇನಿನ ಟ್ರಾವೆಲ್ ವ್ಲಾಗರ್, ತನ್ನ ಭಯಾನಕ ಅನುಭವದ ವಿವರ ನೀಡುವ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಸ್ಪ್ಯಾನಿಷ್ ಭಾಷೆಯಲ್ಲಿ ʻಏಳು ಜನ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆʼ ಎಂದು 28 ವರ್ಷದ ಮಹಿಳೆ ಹೇಳಿದರು.

ಪ್ರಪಂಚದಾದ್ಯಂತ ಪ್ರವಾಸ: ಮಹಿಳೆ ಮತ್ತು ಆಕೆಯ ಸಂಗಾತಿ ಮೋಟಾರ್‌ಸೈಕಲ್‌ಗಳಲ್ಲಿ ಐದು ವರ್ಷಗಳ ಹಿಂದೆ ಜಗತ್ತನ್ನು ಸುತ್ತುವ ಪ್ರಯಾಣ ಪ್ರಾರಂಭಿಸಿದರು. ಅರವತ್ಮೂರು ದೇಶಗಳಲ್ಲಿ ಮತ್ತು 1,70,000 ಕಿಮೀ ಪ್ರಯಾಣಿಸಿರುವ ಅವರು, ಅವರು ಬಾಂಗ್ಲಾ ದೇಶದಿಂದ ದುಮ್ಕಾಗೆ ಆಗಮಿಸಿದ್ದರು; ಆನಂತರ, ಬಿಹಾರ ಮತ್ತು ನಂತರ ನೇಪಾಳಕ್ಕೆ ತೆರಳುತ್ತಿದ್ದರು. ರಾಂಚಿಯಿಂದ ಸುಮಾರು 300 ಕಿಮೀ ದೂರದಲ್ಲಿರುವ ದುಮ್ಕಾದಲ್ಲಿ ತಾತ್ಕಾಲಿಕ ಟೆಂಟ್‌ಗೆ ನುಗ್ಗಿದ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 

'ನಮಗೆ ಏನೋ ಸಂಭವಿಸಿದೆ'...: ಸುಮಾರು 2 ಲಕ್ಷ ಅನುಯಾಯಿಗಳನ್ನು ಹೊಂದಿರುವ ವ್ಲಾಗರ್ , ಆಸ್ಪತ್ರೆಯಲ್ಲಿದ್ದು, ಯಾರೂ ಬಯಸದಂತಹದ್ದು ಸಂಭವಿಸಿದೆ. ನಮ್ಮ ಕುತ್ತಿಗೆಗೆ ಚಾಕುವನ್ನು ಹಾಕಿದರು ನನ್ನ ಮೇಲೆ ಅತ್ಯಾಚಾರವೆಸಗಿ, ಹೊಡೆದು ದರೋಡೆ ಮಾಡಿದ್ದಾರೆ. ಪೊಲೀಸರೊಂದಿಗೆ ಆಸ್ಪತ್ರೆಯಲ್ಲಿದ್ದೇವೆʼ ಎಂದು ಹೇಳಿದ್ದಾರೆ.

ಪೊಲೀಸರ ಸಹಾಯ: ಘಟನೆಯ ನಂತರ ಮಹಿಳೆ ಮತ್ತು ಪುರುಷ ಮಧ್ಯರಾತ್ರಿ ಸುಮಾರಿಗೆ ಗಸ್ತು ವ್ಯಾನ್ ಅನ್ನು ತಡೆದಿದ್ದಾರೆ. ಸ್ಪ್ಯಾನಿಷ್ ಭಾಷೆಯಲ್ಲಿ ಏನಾಯಿತು ಎಂಬುದನ್ನು ತಿಳಿಸಲು ಹೆಣಗಾಡಿದರು. ಏನೋ ತಪ್ಪಾಗಿದೆ ಎಂದು ಗ್ರಹಿಸಿದ ಪೊಲೀಸರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.

ಘಟನೆ ಬಗ್ಗೆ ವಿವರಿಸಿದ ದುಮ್ಕಾ ಎಸ್ಪಿ, ಆರೋಗ್ಯ ಕೇಂದ್ರದ ವೈದ್ಯರು ಮಹಿಳೆ ಮೇಲೆ ಅತ್ಯಾಚಾರವೆಸಗಲಾಗಿದೆ. ಏಳು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದರು.

ಸ್ಪ್ಯಾನಿಷ್ ಮಹಿಳೆ ಮತ್ತು ಅವರ ಪಾಲುದಾರ(64) ಪೊಲೀಸರ ಸಲಹೆ ಮೇರೆಗೆ ವಿಡಿಯೋ ತೆಗೆದುಹಾಕಿದರು. ʻತನಿಖೆಗೆ ತೊಂದರೆಯಾಗುವುದರಿಂದ ಪೋಸ್ಟ್ ತೆಗೆಯಲು ಪೊಲೀಸರು ಹೇಳಿದರು. ನಾನು ಅದನ್ನು ನಂತರ ಪೋಸ್ಟ್ ಮಾಡುತ್ತೇನೆʼ ಎಂದು ಮಹಿಳೆ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ. 

ʻಗಾಯ ನನಗೆ ಹೆಚ್ಚು ನೋವುಂಟುಮಾಡಿಲ್ಲ. ಸಾಯುತ್ತೇವೆ ಎಂದು ನಾನು ಭಾವಿಸಿದ್ದೆವು. ದೇವರಿಗೆ ಧನ್ಯವಾದ. ನಾವು ಜೀವಂತವಾಗಿದ್ದೇವೆʼ ಎಂದು ಬರೆದಿದ್ದಾರೆ. 

ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ʻಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಡಾ.ಅನುಪುರನ್ ಪುರ್ತಿ ನೇತೃತ್ವದ ತಂಡ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಿದೆʼ ಎಂದು ವೈದ್ಯರು ಹೇಳಿದ್ದಾರೆ.

Tags:    

Similar News