ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಡಾ .ಸುಧಾಕರ್ ವಿರುದ್ಧ ತಿಗಳ ಸಮುದಾಯದ ಆಕ್ರೋಶ

ಸಮುದಾಯ ವಿರೋಧಿ ಮನಸ್ಥಿತಿಯ ಡಾ.ಕೆ.ಸುಧಾಕರ್ ಅಂಥವರು ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಅವನತಿಗೆ ಕಾರಣವಾಗುತ್ತದೆ ಎಂದು ದೇವನಹಳ್ಳಿಯಲ್ಲಿ ರಾಜ್ಯ ತಿಗಳರ ವಗ್ನಿಕುಲ ಕ್ಷತ್ರಿಯ ಸಂಘ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಮುದಾಯ ಮುಖಂಡರ ಸಭೆಯಲ್ಲಿ ಆತಂಕ ಪಡಲಾಗಿದೆ

Update: 2024-04-15 09:41 GMT
ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್‌
Click the Play button to listen to article

ದೇವನಹಳ್ಳಿ: ಸ್ವಪಕ್ಷೀಯ ಅಭ್ಯರ್ಥಿ ಡಾ .ಕೆ.ಸುಧಾಕರ್ ವಿರುದ್ಧವೇ ಹೊಸಕೋಟೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಯರಾಜ್ ಹರಿಹಾಯ್ದಿದ್ದಾರೆ.

ಸಮುದಾಯ ವಿರೋಧಿ ಮನಸ್ಥಿತಿಯ ಡಾ.ಕೆ.ಸುಧಾಕರ್ ಅಂಥವರು ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಅವನತಿಗೆ ಕಾರಣವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.

ತಿಗಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಸುಧಾಕರ್ ಪ್ಯಡಂತ್ರ ರೂಪಿಸಿದ್ದರು. ಅವರದು ಕಿರುಕುಳ ನೀಡುವ ಮನಸ್ಥಿತಿ. ಅವರ ಧೋರಣೆಯಿಂದ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ದೂರಿದ್ದಾರೆ.

ಕರ್ನಾಟಕ ರಾಜ್ಯ ತಿಗಳರ ವಗ್ನಿಕುಲ ಕ್ಷತ್ರಿಯ ಸಂಘ ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಮುದಾಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

'ಸಣ್ಣ ಸಮುದಾಯಗಳ ಮೇಲಿನ ಅಗೌರವ, ನಾಯಕರ ಬೆಳವಣಿಗೆ ಸಹಿಸದ ಮನಸ್ಥಿತಿಯ ಸುಧಾಕ‌ರ್ ಅವರನ್ನು ರಾಜಕೀಯ ಶಕ್ತಿಯಿಂದ ದೂರವಿಡಬೇಕು. ಕೇವಲ ಶಾಸಕರು, ಸಂಸದರನ್ನು ಗೆಲ್ಲಿಸಲು ಮಾತ್ರ ನಾವಿಲ್ಲ. ಸಮುದಾಯದ ಏಳಿಗೆಗೆ ನಮ್ಮವರನ್ನೇ ನಾಯಕರನ್ನಾಗಿಸಲು ಸಿದ್ಧರಿದ್ದೇವೆ ಎಂಬುದನ್ನು ರಾಜಕೀಯ ಪಕ್ಷಗಳಿಗೆ ಮನದಟ್ಟು ಮಾಡಿಕೊಡಬೇಕು' ಎಂದು ಹೇಳಿದರು.

ʼಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಹೂಡಿ ವಿಜಯ್‌ಕುಮಾರ್ ರಾಜಕೀಯ ಜೀವನ ಹಾಳು ಮಾಡಿ, ಹೊಂದಾಣಿಕೆ ರಾಜಕೀಯದಲ್ಲಿ ಸಮುದಾಯದ ನಂಬಿಕೆಯನ್ನು ಮಣ್ಣು ಪಾಲು ಮಾಡಿದ ಸುಧಾಕರ್ ರಾಜಕೀಯಕ್ಕೆ ಅರ್ಹರಲ್ಲ' ಎಂದು ತಿಗಳರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಟೀಕಿಸಿದರು.

Tags:    

Similar News