Union Budget 2025 | ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನ ಪ್ರಮುಖ ಅಂಶಗಳೇನು?

Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಎಂಟನೇ ಬಜೆಟ್‌ ಮಂಡಿಸಿದ್ದು, ವಿವಿಧ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.;

Update: 2025-02-01 07:36 GMT
ನಿರ್ಮಲಾ ಸೀತಾರಾಮನ್‌

ಬಡವರು, ಯುವಕರು ಹಾಗೂ ಮಹಿಳಾ ಕೇಂದ್ರಿತ ಬಜೆಟ್ ಎಂದು ಬಣ್ಣಿಸಿರುವ 2025-26 ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು (Union Budget 2025) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಸಂಸತ್ತಿನಲ್ಲಿ ಮಂಡಿಸಿದರು. ಬಜೆಟ್‌ನಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.  

  • ಕೃಷಿ ಕ್ಷೇತ್ರದ ನಿರುದ್ಯೋಗ ಸಮಸ್ಯೆ ನಿವಾರಣೆ, ಇದರಿಂದ 1.7 ಕೋಟಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಧಾರಣಾ ಕ್ರಮ.
  • ಹೆಚ್ಚಿನ ಇಳುವರಿ ನೀಡುವ ಬಿತ್ತನೆ ಬೀಜಗಳ ಸಂಶೋಧನೆ, ಉತ್ಪಾದನೆಗೆ ರಾಷ್ಟ್ರೀಯ ಮಿಷನ್ ಆರಂಭ.
  • ಹತ್ತಿ ಉತ್ಪಾದನೆ ಹೆಚ್ಚಿಸಲು ಪಂಚವಾರ್ಷಿಕ ಕಾರ್ಯಕ್ರಮ ಘೋಷಣೆ.
  • ಭಾರತೀಯ ಅಂಚೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸಲು ಕ್ರಮ.
  • ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ಗಳ ಸ್ಥಾಪನೆ.
  • ವೈದ್ಯಕೀಯ ಸಂಸ್ಥೆಗಳಲ್ಲಿ 10 ಸಾವಿರ ಹೆಚ್ಚುವರಿ ಸೀಟುಗಳ ಸೇರ್ಪಡೆ, ಮುಂದಿನ ಐದು ವರ್ಷಗಳಲ್ಲಿ 75,000 ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಕ್ರಮ.
  • 7.7 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ; ಸಾಲದ ಮಿತಿ 5 ಲಕ್ಷ ರೂ.ಗೆ ಹೆಚ್ಚಿಸಲು ಕ್ರಮ.
  • MSMEಗಳಿಗೆ 20 ಕೋಟಿ ರೂ.ವರೆಗೆ ಅವಧಿ ಸಾಲ ವಿತರಣೆ.
  • 120 ನಗರಗಳಿಗೆ ಉಡಾನ್ ಯೋಜನೆ ವಿಸ್ತರಣೆ. ಅಗ್ಗದ ವಿಮಾನ ಪ್ರಯಾಣ ಸೇವೆ ಒದಗಿಸುವ ಗುರಿ. 
  • 2025 ರಲ್ಲಿ 40,000 ವಸತಿ ಘಟಕಗಳನ್ನು ಪೂರ್ಣಗೊಳಿಸುವ ಭರವಸೆ.
  • ರಾಜ್ಯಗಳ ಸಹಕಾರದೊಂದಿಗೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ನಿರ್ಧಾರ, ದೇಶದ ಅಗ್ರ 50 ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ.
  • ಭವಿಷ್ಯದ ಆಹಾರ ಭದ್ರತೆಗಾಗಿ ಎರಡನೇ ಜೀನ್ ಬ್ಯಾಂಕ್ ಸ್ಥಾಪನೆ.
  • ಬಿಹಾರದಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣಗಳಿಗೆ ಸೌಲಭ್ಯ ವಿತರಣೆ. 
  • ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಜಾರಿಗೆ ನಿರ್ಧಾರ.
  • 100 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲು ಜಾನ್ ವಿಶ್ವಾಸ್ ಮಸೂದೆ 2.೦ ಜಾರಿ.
  • 10.18 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಮೀಸಲಿಗೆ ನಿರ್ಧಾರ.
  • 14.82 ಲಕ್ಷ ಕೋಟಿ ರೂ. ಒಟ್ಟು ಮಾರುಕಟ್ಟೆ ಸಾಲಗಳು.
  • 82 ಸುಂಕ ರೇಖೆಗಳ ಮೇಲಿನ ಸಮಾಜ ಕಲ್ಯಾಣದ ಸರ್‌ಚಾರ್ಜ್‌ ಮನ್ನಾ.
  • 36 ಜೀವರಕ್ಷಕ ಔಷಧಗಳನ್ನು ಕಸ್ಟಮ್ಸ್ ಸುಂಕದಿಂದ ವಿನಾಯಿತಿ.
  • ಸುಂಕ ರಹಿತ ಇನ್‌ಪುಟ್‌ ವ್ಯಾಪ್ತಿಗೆ 9ಕರಕುಶಲ ವಸ್ತುಗಳ ಸೇರ್ಪಡೆ .
  • ಮಧ್ಯಮ ವರ್ಗದ ಮೇಲೆ ವಿಶೇಷ ಗಮನ ಹರಿಸಿ ವೈಯಕ್ತಿಕ ತೆರಿಗೆಯಲ್ಲಿ ಸುಧಾರಣೆ.
  • ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ಶಸ್ತ್ರಾಸ್ತ್ರ ಬೆಲೆಯನ್ನು ನಿರ್ಧರಿಸಲು ಹೊಸ ಯೋಜನೆ.
  • ತೆರಿಗೆ ಚೌಕಟ್ಟುಗಳಲ್ಲಿ ಡಿಜಿಟಲೀಕರಣವನ್ನು ಕಾರ್ಯಗತಗೊಳಿಸಲು ತೀರ್ಮಾನ.
  • ಸ್ಟಾರ್ಟ್‌ಅಪ್‌ಗಳಿಗೆ ಐದು ವರ್ಷಗಳವರೆಗೆ ಸಂಯೋಜನೆ ಪ್ರಯೋಜನ ವಿಸ್ತರಣೆ.
  • ₹12 ಲಕ್ಷ ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಣೆ.
  • ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆ.
  • ₹18 ಲಕ್ಷ ಆದಾಯ ಹೊಂದಿರುವವರಿಗೆ ₹70 ಸಾವಿರದವರೆಗೆ ತೆರಿಗೆ ಪ್ರಯೋಜನ
Tags:    

Similar News