ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಮತ್ತೆ ಕಲ್ಲುತೂರಾಟ
ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಹೋಳಿ ಬಣ್ಣ ಎರಚುವ ವೇಳೆ ಇತರ ವಾಹನಗಳ ಮೇಲೆ ಮಸಿ ಎರಚಿ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.;
By : The Federal
Update: 2025-03-14 13:11 GMT
ಕೆ.ಎಸ್ ಆರ್ ಟಿ ಸಿ ಬಸ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ ಕೆಎಸ್ಆರ್ಟಿಸಿ ಬಸ್ ಮೇಲೆ ಮರಾಠಿ ಭಾಷಿಕರು ಮತ್ತೆ ಕಲ್ಲುತೂರಾಟ ನಡೆಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಘಟನೆ ನಡೆದಿದೆ.
ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಹೋಳಿ ಬಣ್ಣ ಎರಚುವ ವೇಳೆ ಇತರ ವಾಹನಗಳ ಮೇಲೆ ಬಣ್ಣ ಎರಚಿ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬಸ್‌ನ ಹಿಂಬದಿಯ ಗಾಜು ಸಂಪೂರ್ಣ ಪುಡಿಪುಡಿಯಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಬಸ್ ಬೆಳಗಾವಿಯ ರಾಯಬಾಗ ಡಿಪೋಗೆ ಸೇರಿದ್ದಾಗಿದೆ.