SSLC Exam | ವಿದ್ಯಾರ್ಥಿಗಳಿಗೆ ಈ ಬಾರಿ ಗ್ರೇಸ್ ಅಂಕ ಇಲ್ಲ: ಮಧು ಬಂಗಾರಪ್ಪ

ಬೇರೆ- ಬೇರೆ ಜಿಲ್ಲೆಗಳ ಶಾಲೆಗಳಲ್ಲಿ ಮಕ್ಕಳಿಗೆ ಮಾಕ್ ಟೆಸ್ಟ್ ಮಾಡಲಾಗಿದೆ, ಮಾಕ್ ಟೆಸ್ಟ್‌ ನಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಮಾಕ್ ಟೆಸ್ಟ್ ಮಾಡಿರುವುದರಿಂದ ಅಂತಿಮ ಪರೀಕ್ಷೆಗೆ ಸಹಾಯಕವಾಗಲಿದೆ ಎಂದರು.;

Update: 2025-02-03 12:30 GMT
ಮಧು ಬಂಗಾರಪ್ಪ

ಈ ಬಾರಿಯ 2024-25 ನೇ ಸಾಲಿನ SSLC ಪರೀಕ್ಷೆಯಲ್ಲಿ ಈ ಬಾರಿ ಪಾಸಿಂಗ್ ಗ್ರೇಸ್ ಅಂಕ ಇರುವುದಿಲ್ಲ, ಕಳೆದ ಬಾರಿ ವೆಬ್ ಕಾಸ್ಟಿಂಗ್‌ಗೆ ನಿಗದಿ ಪಡಿಸಿದ 10% ಗ್ರೇಸ್ ಅಂಕಗಳು ಈ ಬಾರಿ ಇರುವುದಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಜಿಲ್ಲಾ ಹಂತದ ಸಾಧನೆ ಪ್ರಗತಿ ಹಾಗೂ ಸಮಸ್ಯೆ, ಕ್ರಮಗಳ ಕುರಿತು ಚರ್ಚಿಸಲಾಗಿದೆ. ಕಳೆದ ಬಾರಿ ವೆಬ್ ಕಾಸ್ಟಿಂಗ್‌ ಹಿನ್ನೆಲೆಯಲ್ಲಿ ನಿಗದಿಪಡಿಸಿದ್ದ 10% ಗ್ರೇಸ್ ಅಂಕಗಳು ಈ ಬಾರಿ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಒಂದು ದಿನ‌ ಒಂದು ಅಂಕ ಕಾರ್ಯಕ್ರಮ ಯಾದಗಿರಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಇಓಗಳಿಂದ ನೇರವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಕ್ ಟೆಸ್ಟ್ ಮಾಡಲಾಗಿದೆ. ಮಾಕ್ ಟೆಸ್ಟ್‌ ನಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಹಾಗಾಗಿ ಅಂತಿಮ ಪರೀಕ್ಷೆಗೆ ಸಹಾಯಕವಾಗಲಿದೆ ಎಂದರು.

ಮಕ್ಕಳಿಗೆ ಬೇಕಾದ ಮಾರ್ಗದರ್ಶನ ನೀಡುವ ಸಲುವಾಗಿ ನಾವು ಸಿದ್ದತೆ ಮಾಡಿದ್ದೇವೆ. ಮಕ್ಕಳು ಹಾಗೂ ಅಧಿಕಾರಿಗಳಿಂದ ಅಭಿಪ್ರಾಯ ಪಡೆಯಲಾಗಿದೆ. ಜಿಲ್ಲಾ ಹಂತದಲ್ಲಿ ಇರುವ ಸಮಸ್ಯೆ, ಚಿತ್ರಣದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಫಲಿತಾಂಶ ವಿಚಾರವಾಗಿ ನಾವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಿದ್ದೇವೆ. ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಭಯ ಇರಬಾರದು. ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡುವುದರ ಬದಲು ಮುಂಚಿತವಾಗಿ ನಾವು ಎಚ್ಚರಗೊಂಡಿದ್ದೇವೆ ಎಂದರು.

Tags:    

Similar News