Namma Metro Fare Hike| ಮೆಟ್ರೋ ಪ್ರಯಾಣ ದರ ಪರಿಷ್ಕರಣೆ: ಎಲ್ಲೆಲ್ಲಿ ದರ ಕಡಿತ?
ಪ್ರಯಾಣಿಕರ ಆಕ್ರೋಶದ ಬಳಿಕ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿದ್ದು, ಇಂದಿನಿಂದ ಹೊಸ ದರ ಜಾರಿ ಮಾಡಿದೆ.;
ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿರುವುದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿತ್ತು. ಫೆಬ್ರವರಿ 9ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದ್ದು,46% ನಿಂದ 100% ವರೆಗೆ ಮೆಟ್ರೋದರ ಏರಿಕೆಯಾಗಿತ್ತು.
ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ದರ ಇಳಿಕೆ ಮಾಡುವಂತೆ ಬಿಎಂಆರ್‌ಸಿಎಲ್‌ಗೆ ಸೂಚಿಸಿದ್ದರು.
ಇದೀಗ ಮೆಟ್ರೋ ಪ್ರಯಾಣ ದರವನ್ನು ಹಂತವಾರು ಬದಲಾವಣೆ ಮಾಡಿದ್ದು, ಬದಲಾದ ಸ್ಟೇಜ್ ಮರ್ಜ್ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.
ಎಲ್ಲೆಲ್ಲಿ ದರ ಪರಿಷ್ಕರಣೆ
ಮೆಜೆಸ್ಟಿಕ್ To ಬೈಯಪ್ಪನಹಳ್ಳಿ
ಏರಿಕೆಯಾಗಿದ್ದ ದರ: 60 ರೂಪಾಯಿ
ಪರಿಷ್ಕೃತ ದರ: 50 ರೂಪಾಯಿ
ಮೆಜೆಸ್ಟಿಕ್ To ಸಿಲ್ಕ್ ಇನ್ಸ್ಟಿಟ್ಯೂಟ್
ಏರಿಕೆಯಾಗಿದ್ದ ದರ: 70 ರೂಪಾಯಿ
ಪರಿಷ್ಕೃತ ದರ: 60 ರೂಪಾಯಿ
ಮೆಜೆಸ್ಟಿಕ್ To ವೈಟ್ ಫೀಲ್ಡ್
ಏರಿಕೆಯಾಗಿದ್ದ ದರ: 90 ರೂಪಾಯಿ
ಪರಿಷ್ಕೃತ ದರ: 80 ರೂಪಾಯಿ
ಮೆಜೆಸ್ಟಿಕ್ To ಚಲ್ಲಘಟ್ಟ
ಏರಿಕೆಯಾಗಿದ್ದ ದರ: 70 ರೂಪಾಯಿ
ಪರಿಷ್ಕೃತ ದರ: 60 ರೂಪಾಯಿ
ಮೆಜೆಸ್ಟಿಕ್ To ರೇಷ್ಮೆ ಸಂಸ್ಥೆ
ಏರಿಕೆಯಾಗಿದ್ದು 70 ರೂಪಾಯಿ
ಇಳಿಕೆಯಾಗಿದ್ದು 60 ರೂಪಾಯಿಗೆ
ಮೆಜೆಸ್ಟಿಕ್ To ವಿಧಾನಸೌಧ
ಏರಿಕೆಯಾಗಿದ್ದ ದರ: 20
ಪರಿಷ್ಕೃತ ದರ: 10 ರೂಪಾಯಿ
ಮೆಟ್ರೋ ಪರಿಷ್ಕೃತ ದರ
ಮೆಜೆಸ್ಟಿಕ್ನಿಂದ ಅತ್ತಿಗುಪ್ಪೆ : 30 ರೂಪಾಯಿ
ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿ : 50 ರೂಪಾಯಿ
ಮೆಜೆಸ್ಟಿಕ್ನಿಂದ ಬೆನ್ನಿಗಾನಹಳ್ಳಿ: 50 ರೂಪಾಯಿ
ಮೆಜೆಸ್ಟಿಕ್ನಿಂದ ಬನಶಂಕರಿ-40 ರೂಪಾಯಿ
ಮೆಜೆಸ್ಟಿಕ್ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ- 10 ರೂಪಾಯಿ
ಮೆಜೆಸ್ಟಿಕ್ನಿಂದ ದಾಸರಹಳ್ಳಿ- 60 ರೂಪಾಯಿ
ಮೆಜೆಸ್ಟಿಕ್ನಿಂದ ದೊಡ್ಡಕಲ್ಲಸಂದ್ರ- 60 ರೂಪಾಯಿ
ಮೆಜೆಸ್ಟಿಕ್ನಿಂದ ಗರುಡಾಚಾರ್ಪಾಳ್ಯ- 60 ರೂಪಾಯಿ
ಮೆಜೆಸ್ಟಿಕ್ನಿಂದ ಚನ್ನಸಂದ್ರ-80 ರೂಪಾಯಿ
ಮೇಟ್ರೋ ದರ ದುಪ್ಪಟ್ಟಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಮೇಟ್ರೋ ಬದಲಾಗಿ ಪ್ರಯಾಣಿಕರು ಬಿಎಂಟಿಸಿ ಹಾಗೂ ತಮ್ಮ ಸ್ವತ ವಾಹನಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರು. ಮೆಟ್ರೋ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು.