Namma Metro Fare Hike | ಜನಾಕ್ರೋಶಕ್ಕೆ ಮಣಿದ ಮೆಟ್ರೋ: ಪ್ರಯಾಣ ದರ ಇಳಿಕೆ

Metro Fare Hike| ದರ ಇಳಿಕಯ ಪರಿಷ್ಕೃತ ಪಟ್ಟಿ ಶೀಘ್ರವೇ ನೀಡಲಾಗುವುದು. ಶುಕ್ರವಾರದಿಂದ ಈ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿಸಿದ್ದರು. ಬೆಂಗಳೂರು ಮೆಟ್ರೋ ರೈಲು ನಿಗಮ ನಷ್ಟದಲ್ಲಿದೆ.;

Update: 2025-02-14 05:24 GMT
ನಮ್ಮ ಮೆಟ್ರೋ

ನಮ್ಮ ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಮಾಡಿದ್ದರಿಂದ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪ್ರಯಾಣ ದರ ಕಡಿಮೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಶುಕ್ರವಾರದಿಂದಲೇ ಮರು ಪರಿಷ್ಕರಣೆಯ ದರ ಜಾರಿ ಆಗಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಎಕ್ಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.

ಗುರುವಾರ (ಫೆ.13) ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಠಿ ನಡೆಸಿದ BMRCL ಎಂಡಿ ಮಹೇಶ್ವರ ರಾವ್ ಅವರು, ದರ ಇಳಿಕೆಗೆ ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಶೇ.40%-50%ರಷ್ಟು ಏರಿಕೆ ಆಗಿದೆಯೋ ಅಲ್ಲಲ್ಲಿ ದರ ಇಳಿಕೆಗೆ ಕ್ರಮ ವಹಿಸಲಾಗುವುದು. ನಮ್ಮ ಮೆಟ್ರೋ ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು, ಸ್ಜೇಜ್ ಬೈ ಸ್ಟೇಜ್ ಮರ್ಜ್ ಮಾಡಲಾಗುವುದು ಎಂದಿದ್ದರು.

ದರ ಇಳಿಕಯ ಪರಿಷ್ಕೃತ ಪಟ್ಟಿ ಶೀಘ್ರವೇ ನೀಡಲಾಗುವುದು. ಶುಕ್ರವಾರದಿಂದ ಈ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿಸಿದ್ದರು. ಬೆಂಗಳೂರು ಮೆಟ್ರೋ ರೈಲು ನಿಗಮ ನಷ್ಟದಲ್ಲಿದೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಈ ಸಂಬಂಧ ಇತ್ತೀಚೆಗೆ ದರ ಪರಿಷ್ಕರಣೆ ಮಾಡಲಾಗಿತ್ತು. ಅದರಿಂದ ಉಂಟಾದ ತೊಂದರೆ ನಿವಾರಿಸಲಾಗುವುದು. ದರ ಇಳಿಕೆಗೆ ಅವಕಾಶ ಇರುವಲ್ಲಿ ಟಿಕೆಟ್ ಬೆಲೆ ಕಡಿಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು ಅದರಂತೆ ದರ ಇಳಿಕೆಗೆ ಮುಂದಾಗಿದೆ. 

 90%, 100% ಏರಿಕೆಯಾಗಿದ್ದ ಸ್ಟೇಜ್ ಗಳಲ್ಲಿ ಮಾತ್ರ ಇಳಿಕೆ ಮಾಡಲಾಗಿದೆ. ಮೊದಲ ಪರಿಷ್ಕರಣೆ ವೇಳೆ ಯಶವಂತಪುರ ಮೆಟ್ರೋ ದಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ 25 ರಿಂದ 50 ಕ್ಕೆ ದರ ಏರಿಕೆ ಮಾಡಲಾಗಿತ್ತು, ಅಂದ್ರೆ 100% ನಷ್ಟು ಏರಿಕೆ ಕಂಡಿತ್ತು. ಈಗ ಮರು ಪರಿಷ್ಕರಣೆ ಬಳಿಕ 40 ರೂ.ಗೆ ಇಳಿಕೆಯಾಗಿದೆ. ಈಗ 60% ಗೆ ದರ ಏರಿಕೆ ಇಳಿದಿದೆ. ಒಟ್ಟಾರೆ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಈಗ ಅಧಿಕೃತ ಶೇ. ವಾರು 70% ಕ್ಕೆ ಇಳಿಕೆಯಾಗಿದೆ.

Tags:    

Similar News